Home Elections 2019 BSY ಗೆ ಸಂಕಷ್ಟ..! ಬಿಜೆಪಿಯ ಆಪರೇಷನ್ ಆಡಿಯೋ ತನಿಖೆಗೆ ಆದೇಶ! ವಿಶೇಷ ತನಿಖಾ ತಂಡ ರಚಿಸುವಂತೆ...

BSY ಗೆ ಸಂಕಷ್ಟ..! ಬಿಜೆಪಿಯ ಆಪರೇಷನ್ ಆಡಿಯೋ ತನಿಖೆಗೆ ಆದೇಶ! ವಿಶೇಷ ತನಿಖಾ ತಂಡ ರಚಿಸುವಂತೆ ಸರ್ಕಾರಕ್ಕೆ ಸೂಚನೆ! 15 ದಿನದೊಳಗೆ ವರದಿ ಸಲ್ಲಿಸುವಂತೆ ಸ್ಪೀಕರ್ ಕಟ್ಟಪ್ಪಣೆ!

464
0
SHARE

ಆಪರೇಷನ್​ ಕಮಲಕ್ಕೆ ಸಂಬಂಧಿಸಿದ ಆಡಿಯೋದಲ್ಲಿ ಸ್ಪೀಕರ್​ಗೆ 50 ಕೋಟಿ ರೂಪಾಯಿಗಳ ಹಣ ನೀಡಲಾಗಿದೆ ಎಂಬ ಶಾಸಕರೊಬ್ಬರ ಹೇಳಿಕೆಯ ಕುರಿತಂತೆ ತನಿಖೆ ನಡೆಸಲು ಸ್ಪೀಕರ್ ರಮೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ..

ವಿಶೇಷ ತನಿಖಾ ಸಮಿತಿ ರಚಿಸುವಂತೆ ರಮೇಶ್​ ಕುಮಾರ್​ ಅವರು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರೆ… ತನಿಖಾ ಸಮಿತಿಯಿಂದ ಇನ್ನು 15 ದಿನಗಳಲ್ಲಿ ವರದಿ ಬರಬೇಕು ಎಂದೂ ಕುಮಾರಸ್ವಾಮಿ ಅವರಿಗೆ ಸ್ಪೀಕರ್ ಆದೇಶಿಸಿದ್ದಾರೆ.ಪ್ರಕರಣದ ತನಿಖೆ ನಡೆಸಲು ಸೂಚಿಸಿದ ಸ್ಪೀಕರ್ ರಮೇಶ್ ಕುಮಾರ್ ಇದನ್ನು ಸದನ ಸಮಿತಿಯಿಂದ ತನಿಖೆ ನಡೆಸಲು ಸಾಧ್ಯವಿಲ್ಲ, ಎಫ್ ಐ ಆರ್ ಹಾಕಿ ತನಿಖೆ ನಡೆಸಬೇಕು.

ಎಫ್ ಐಆರ್ ದಾಖಲಾದ ನಂತರ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ, ನ್ಯಾಯಾಂಗ ತನಿಖೆ ಸುದೀರ್ಘ ಸಮಯ ಹಿಡಿಯುತ್ತದೆ, ನ್ಯಾಯಾಂಗ ತನಿಖೆಗೆ ನನಗೆ ಒಲವಿಲ್ಲ, ಹೀಗಾಗಿ ಏಜೆನ್ಸಿಗಳ ಮೂಲಕ ನಡೆಸಬೇಕು, ವಿಶೇಷ ತನಿಖಾ ತಂಡ ರಚಿಸಿ ಸರ್ಕಾರ ತನಿಖೆ ನಡೆಸಲಿ. ಯಾರಿಂದ ತನಿಖೆ ನಡೆಸಬೇಕು ಎಂಬುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದ್ದಾರೆ.ಆಡಿಯೋ ತನಿಖೆಗೆ ಸ್ಪೀಕರ್ ಆದೇಶ ನೀಡುತ್ತಿದಂತೆ ಮಾತನಾಡಿದ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಸ್ಪೀಕರ್ ಮನಸ್ಸಿಗೆ ನೋವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ರು…

ನ್ಯಾಯಸಮ್ಮತವಾಗಿ ಕರ್ತವ್ಯ ನೀರ್ವಹಿಸುತ್ತಿದ್ದೀರಿ… ನಿಮ್ಮ ಭಾವನೆಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳಲಿ… ಪ್ರಕರಣ ಸಮಗ್ರ ತನಿಖೆಯಾಗಬೇಕು ಎಂಬುದನ್ನು ನಾನು ಒಪ್ಪುತ್ತೇನೆ ಎಂದರು..
ಇದಕ್ಕೂ ಮುನ್ನ ಆಪರೇಷನ್ ಕಮಲ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ವಿಧಾನಸಭೆಯ ಕಲಾಪದಲ್ಲಿ ಗಂಭೀರ ಚರ್ಚೆ ನಡೆಯಿತು.ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನನಗೆ ನಿಮ್ಮ ಮೇಲೆ ಎಳ್ಳಷ್ಟು ಅನುಮಾನ ಬರಲು ಸಾಧ್ಯವೇ ಇಲ್ಲ ಎಂದರು, ನಿಮ್ಮ ಸ್ಥಾನದ ಗೌರವ ಎತ್ತಿ ಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಸದನದ ಗೌರವ ಎತ್ತಿಹಿಡಿಯುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ತನಿಖೆಗೆ ಸಿದ್ದರಾಮಯ್ಯ ಆಗ್ರಹಿಸಿದ್ರು… ಚರ್ಚೆ ಆರಂಭದಲ್ಲೇ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಸದನದ ಹಕ್ಕುಚ್ಯುತಿಯಾಗಿದೆ ಎಂದು ಪ್ರತಿಪಾದಿಸಿದ್ರು.ಇನ್ನೂ ಬಿಜೆಪಿ ಶಾಸಕ ಮಾಧುಸ್ವಾಮಿ ಮಾತನಾಡಿ, ಆಡಿಯೋ ಬಗ್ಗೆ ತನಿಖೆಯಾಗಬೇಕು ಅನ್ನೋದು ನಮ್ಮ ಆಗ್ರಹ ಕೂಡ. ಆದ್ರೆ ಸ್ಪೀಕರ್ ಅವರು ಈ ವಿಚಾರದಲ್ಲಿ ಭಾವುಕರಾಗಿ ನಿರ್ಧಾರ ತೆಗೆದುಕೊಳ್ಳಬಾರದು..

ಸದನದ ಒಳಗೆ ಈ ಘಟನೆ ನಡೆಯದೇ ಹೊರಗೆ ನಡೆದಿರುವುದರಿಂದ ಹಕ್ಕುಚ್ಯುತಿಯಾಗುವುದಿಲ್ಲ ಎಂದು ವಾದಿಸಿದ್ರು… ಮಾಜಿ ಸಚಿವರಾದ ಸುರೇಶ್ ಕುಮಾರ್, ಕೆ.ಎಸ್ ಈಶ್ವರಪ್ಪ, ಗೋವಿಂದ ಕಾರಜೋಳ ಸೇರಿದಂತೆ ಬಿಜೆಪಿ ಶಾಸಕರು ಕೂಡ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ರು.. ಎಸ್ ಐ ಟಿ ತನಿಖೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ, ರಾಜ್ಯ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ, ಹೀಗಾಗಿ ಮರು ಪರಿಶೀಲನೆ ನಡೆಸಬೇಕು ಎಂದು ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ.

ಒಟ್ಟಾರೆ ಆಪರೇಷನ್ ಆಡಿಯೋ ದೊಡ್ಡ ಕಂಪನ ಸೃಷ್ಟಿಸಿದೆ.. ತನಿಖೆಯಾಗಿ ಸತ್ಯಾಸತ್ಯತೆ ಬಹಿರಂಗವಾದ್ರೆ ಯಾರು ಕಟಕಟೆಯಲ್ಲಿ ನಿಲ್ಲುತ್ತಾರೆ ಅನ್ನೋ ಕುತೂಹಲ ಈಗ ಎಲ್ಲರಲ್ಲಿದೆ..

LEAVE A REPLY

Please enter your comment!
Please enter your name here