Home District BSY ಗೆ HDK ಸವಾಲು..! “ಆಡಿಯೋ ಸಾಬೀತಾಗದಿದ್ರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ”…

BSY ಗೆ HDK ಸವಾಲು..! “ಆಡಿಯೋ ಸಾಬೀತಾಗದಿದ್ರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ”…

561
0
SHARE

ಆಪರೇಷನ್ ಕಮಲ ಶಾಸಕರಿಗೆ ಆಮಿಷವೊಡಿಡ್ಡ ಆಡಿಯೋ ಸದ್ಯದ ಮಟ್ಟಿನಲ್ಲಿ ಚರ್ಚೆಯಾಗುತ್ತಿರುವ ವಿಷಯ. ಯಡಿಯೂರಪ್ಪ ಧ್ವನಿಯಿರುವ ಆಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನೂ ಆಡಿಯೋದಲ್ಲಿರುವುದು ನನ್ನ ಧ್ವನಿ ಅಲ್ಲ ಆ ಧ್ವನಿ ನನ್ನದೇ ಅಂತ ಸಾಬೀತಾದ್ರೆ ರಾಜೀನಾಮೆ ಕೊಟ್ಟು ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ರು.

ಒಂದು ಹೆಜ್ಜೆ ಮುಂದೆ ಹೋಗಿ ಸವಾಲ್ ಸ್ವೀಕರಿಸಿರೋ ಸಿಎಂ ಕುಮಾರಸ್ವಾಮಿ ಆ ಧ್ವನಿ ಯಡಿಯೂರಪ್ಪನವರದ್ದೇ. ಆಡಿಯೋದಲ್ಲಿರುವುದು ಯಡಿಯೂರಪ್ಪನವರ ಧ್ವನಿ ಆಗದಿದ್ರೆ ನಾನು ಕೂಡ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆಂದು ಧರ್ಮಸ್ಥಳ ಕ್ಷೇತ್ರದಲ್ಲಿ ನಿಂತು ಬಿಎಸ್‌ವೈಗೆ ಸವಾಲು ಹಾಕಿದ್ದಾರೆ.ಆಪರೇಷನ್ ಕಮಲ ಆಡಿಯೋ ರಾಜ್ಯ ರಾಜಕೀಯದಲ್ಲಿ ಕಂಪನ ಸೃಷ್ಟಿಸಿದೆ…

ದೋಸ್ತಿ ಸರ್ಕಾರ ಬೀಳಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಸಮಯದಲ್ಲಿ ಸಿಎಂ ಹೆಚ್ಡಿಕೆ ನಿನ್ನೆ ಆಡಿಯೋ ಬಾಂಬ್ ಸ್ಫೋಟಿಸಿ ಸಂಚಲನ ಸೃಷ್ಟಿಸಿದ್ದರು. ಗುರಮಿಟ್ಕಲ್ ಶಾಸಕ ನಾಗನಗೌಡರನ್ನ ಸೆಳೆಯಲು ಅವರ ಪುತ್ರ ಶರಣಗೌಡರನ್ನ ಯಡಿಯೂರಪ್ಪ ಕರೆದು ದೇವದುರ್ಗ ಐಬಿಯಲ್ಲಿ ಆಮಿಷವೊಡ್ಡಿದ್ದ ಆಡಿಯೋ ಇದೀಗ ರಾಜ್ಯದಲ್ಲಿ ವೈರಲ್ ಆಗಿದೆ…

ಈ ಆಡಿಯೋ ಸಂಚಲನ ಸೃಷ್ಟಿಸುತ್ತಿದಂತೆ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ, ಆಡಿಯೋ ದಲ್ಲಿರೋ ವಾಯ್ಸ್ ತಮ್ಮದೇ ಅಂತಾ ಸಾಬೀತಾದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕುಮಾರಸ್ವಾಮಿಗೆ ಸವಾಲು ಹಾಕಿದ್ದರು.ಇಂದು ಚಾಲೆಂಜ್ ಮಾಡೋ ಸರದಿ ಕುಮಾರಸ್ವಾಮಿ ಅವರದ್ದು.ಧರ್ಮಸ್ಥಳ ಕ್ಷೇತ್ರದಲ್ಲಿ ನಿಂತು ಹೆಚ್ಡಿಕೆ, ಯಡಿಯೂರಪ್ಪ ಅವರಿಗೆ ಸವಾಲು ಹಾಕಿದ್ದಾರೆ.. ಒಂದು ವೇಳೆ ಆಡಿಯೋದಲ್ಲಿರೋದು ಯಡಿಯೂರಪ್ಪ ದ್ವನಿ ಅಲ್ಲ…

ಅದು ಮಿಮಿಕ್ರಿ ಅಂತಾ ಸಾಬೀತಾದ್ರೆ ಯಡಿಯೂರಪ್ಪ ಬದಲು ತಾವು ರಾಜಕೀಯ ನಿವೃತ್ತಿ ಹೊಂದುವುದಾಗಿ ಹೆಚ್ಡಿಕೆ ಘೋಷಿಸಿದ್ದಾರೆ.. ಧರ್ಮಸ್ಥಳದ ಬಗ್ಗೆ ಹಿಂದೊಮ್ಮೆ ಅಪಚಾರ ಮಾಡಿದ್ದೇನೆ!ಇದೇ ವೇಳೆ, ‘ಧರ್ಮಸ್ಥಳದ ವಿಷಯದಲ್ಲಿ ಹಿಂದೊಮ್ಮೆ ನಾನು ಅಪಚಾರ ಮಾಡಿದ್ದೇನೆ’ ಎಂದು ಕುಮಾರಸ್ವಾಮಿ, 12 ವರ್ಷಗಳ ಹಿಂದಿನ ಆಣೆ ಪ್ರಮಾಣದ ವಿಷಯ ನೆನಪಿಸಿಕೊಂಡು ಆತ್ಮನಿವೇದನೆ ಮಾಡಿಕೊಂಡರು.

ಧರ್ಮಸ್ಥಳದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಜನಪ್ರತಿನಿಧಿಗಳು ಕೆಲವೊಂದು ರಾಜಕೀಯ ವಿಚಾರ ಸಂಬಂಧಿಸಿ ಅಪಚಾರ ನಡೆಸಿದ್ದೇವೆ ಎಂದು ತೆರೆದ ಮನಸ್ಸಿನಿಂದ ಮತನಾಡಿದರು. ಅಪಚಾರ ನಡೆಸಿದರೆ ಯಾವ ಸ್ಥಾನದಲ್ಲಿದ್ದರೂ ಮಂಜುನಾಥ ಸ್ವಾಮಿ ಬಿಡುವುದಿಲ್ಲ, ಮಂಜುನಾಥ ಸ್ವಾಮಿಯ ಜತೆ ಯಾರೂ ಚೆಲ್ಲಾಟವಾಡಬಾರದು ಎಂದು ನನಗೂ ಅನುಭವವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇನ್ನೂ ಬಿಜೆಪಿ ನಾಯಕರು ಆಪರೇಷನ್ ಕಮಲ ಆಡಿಯೋಗೆ ಪ್ರತ್ಯಾಸ್ತ್ರವಾಗಿ ವಿಡಿಯೋ ಬಿಡುಗಡೆ ಮಾಡುತ್ತಿರೋ ಬಗ್ಗೆಯೂ ಹೆಚ್ಡಿಕೆ ವ್ಯಂಗ್ಯವಾಡಿದ್ದಾರೆ.. ನಮ್ಮ ಪಾರ್ಟಿಯಲ್ಲೇ ಇದ್ದ ವಿಜೂಗೌಡ ವಿಚಾರದಲ್ಲಿ ಆದ ಮಾತುಕತೆ ವಿಡಿಯೋವನ್ನ ಮತ್ತೆ ಬಿಜೆಪಿಯವರು ಬಿಡುಗಡೆ ಮಾಡುತ್ತಿದ್ದಾರೆ.. ಅದಕ್ಕೆ ಅವರು ಸ್ವತಂತ್ರರು, ನಾನು ಭಂಡ ವಾದ ಮಾಡುವುದಿಲ್ಲ ಎಂದು ಹೆಚ್ಡಿಕೆ ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here