Home District BSY ವಿರುದ್ಧ ಸಿಡಿದೆದ್ದ ಭಾನು ಪ್ರಕಾಶ್..! ಸಬ್ ಕ ಸಾಥ್ ಸಬ್ ಕಾ ವಿಕಾಸ್ ಮೊದಲು...

BSY ವಿರುದ್ಧ ಸಿಡಿದೆದ್ದ ಭಾನು ಪ್ರಕಾಶ್..! ಸಬ್ ಕ ಸಾಥ್ ಸಬ್ ಕಾ ವಿಕಾಸ್ ಮೊದಲು ಪಾರ್ಟಿಯಲ್ಲಾಗಬೇಕೆಂದು ಭಾನುಪ್ರಕಾಶ್ BSY ವಿರುದ್ಧ ಆಕ್ರೋಶ..!

403
0
SHARE

ಶಿವಮೊಗ್ಗ ಲೋಕಸಭೆ ಉಪಚುನಾವಣೆ ಫಲಿತಾಂಶ ಬರುವ ಮುನ್ನವೇ ಬಿಜೆಪಿಯ ನಾಯಕರಲ್ಲಿದ್ದ ಅಸಮಧಾನದ ಹೊಗೆ ಬುಗಿಲೆದ್ದಿದೆ. ಬಿಜೆಪಿ ರಾಜ್ಯಾಧಯಕ್ಷ ಯಡಿಯೂರಪ್ಪ ವಿರುದ್ಧ ಉಪಾಧ್ಯಕ್ಷ ಭಾನುಪ್ರಕಾಸ್ ಬಹಿರಂಗವಾಗಿ ಕಿಡಿಕಾರಿದ್ದಾರೆ… ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಬಹುದಾದ ವಿಚಾರವನ್ನು ಬಹಿರಂಗಗೊಳಿಸುವ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಒಂದುವರೆ ವರ್ಷದ ಹಿಂದೆ ತನ್ನನ್ನು ಏಕಾಏಕಿ ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ದರು, ಆದರೆ ಈಗ ಚುನಾವಣೆ ಬರುತ್ತಿದ್ದಂತೆ ಮತ್ತೆ ಉಪಾಧ್ಯಕ್ಷನನ್ನಾಗಿ ನೇಮಕ ಮಾಡಿದ್ದಾರೆ. ಯಡಿಯೂರಪ್ಪನವರ ಈ ಆದೇಶವನ್ನು ಒಪ್ಪಿಕೊಂಡಿಲ್ಲ, ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿಯೇ ಮುಂದುವರೆಯುತ್ತೇನೆ ಎಂದು ಭಾನುಪ್ರಕಾಶ್ ಆಕ್ರೋಶ ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಅಂದು ಕೆಜೆಪಿಯನ್ನು ತೊರೆದು ಬಿಜೆಪಿಗೆ ಬಂದ ಯಡಿಯೂರಪ್ಪರನ್ನು ಮುಕ್ತವಾಗಿ ಸ್ವಾಗತಿಸಿದ್ದೇವೆ. ಅವರು ರಾಜ್ಯಾಧ್ಯಕ್ಷರಾದ ಸಂದರ್ಭದಲ್ಲಿ ತೆಗೆದುಕೊಂಡ ಏಕಪಕ್ಷೀಯ ತೀರ್ಮಾನಗಳ ಬಗ್ಗೆ ವಿರೋಧಿಸಿದ್ವಿ. ಮುಂದಿನ ಲೋಕಸಭೆ ಚುನಾವಣೆಯ ಒಳಗಾದ್ರೂ ಯಡಿಯೂರಪ್ಪ ತಮ್ಮ ನಡೆಯನ್ನು ಬದಲಿಸಿಕೊಳ್ಳಬೇಕು ಎಂದು ಭಾನುಪ್ರಕಾಶ್ ಹೇಳಿದ್ದಾರೆ.

ಪ್ರದಾನಿ ನರೇಂದ್ರ ಮೋದಿಯವರ ಸಬ್ ಕ ಸಾಥ್ ಸಬ್ ಕಾ ವಿಕಾಸ್ ಮೊದಲು ಪಾರ್ಟಿಯಲ್ಲಾಗಬೇಕೆಂದು ಭಾನುಪ್ರಕಾಶ್ ಹೇಳಿದ್ದಾರೆ.ಭಾನುಪ್ರಕಾಶ್ ಅಸಮಧಾನದ ಮಾತುಗಳು, ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಬುಗಿಲೇಳುವಂತೆ ಮಾಡಿದೆ. ನಾಳೆ ಐದುಕ್ಷೇತ್ರಗಳ ಫಲಿತಾಂಶ ಬರುವ ಮುನ್ನವೇ ಅದರ ಋಣಾತ್ಮಕ ಅಂಶಗಳಿಗೆ ಯಡಿಯೂರಪ್ಪರೇ ನೇರ ಹೊಣೆ ಎಂಬುದನ್ನು ಭಾನುಪ್ರಕಾಶ್ ಸೂಚ್ಯವಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here