ಎತ್ತಿನಗಾಡಿ ಒಡೆದು ಬೈಕ್ ಜಾಥಾಗೆ ಚಾಲನೆ ಕೊಟ್ಟ ಕಂದಾಯ ಸಚಿವ ಆರ್.ಅಶೋಕ್

ಜಿಲ್ಲೆ

ಮಂಡ್ಯ :– ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಬಿಜೆಪಿ ಯುವ ಮೋರ್ಚಾ ಮತ್ತು ರೈತ ಮೋರ್ಚಾ ವತಿಯಿಂದ ಭಾನುವಾರ ಬೈಕ್ ಮತ್ತು ಎತ್ತಿನಗಾಡಿ ರ್ಯಾಲಿ ನಡೆಯಿತು.

ಮದ್ದೂರಿನ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಆರಂಭಗೊಂಡ ಬೈಕ್ ಮತ್ತು ಎತ್ತಿನಗಾಡಿ ರ್ಯಾಲಿಗೆ ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಜಂಟಿಯಾಗಿ ಚಾಲನೆ ನೀಡಿದರು.

 

ನಂತರ ನೂರಾರು ಬಿಜೆಪಿ ಕಾರ್ಯಕರ್ತರು ಹಳೇ ಎಂ.ಸಿ.ರಸ್ತೆ ಮಾರ್ಗವಾಗಿ ಬೆಂಗಳೂರು – ಮೈಸೂರು ಹೆದ್ದಾರಿ ಮೂಲಕ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ವರೆಗೆ ತ್ರಿವರ್ಣ ಧ್ವಜಗಳನ್ನು ಹಿಡಿದು ಘೋಷಣೆ ಮೊಳಗಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ನಂತರ ಸತ್ಯಾಗ್ರಹ ಸೌಧದ ಆವರಣದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್, ಮಹಿಳಾ ಹಾಗೂ ವಿವಿಧ ಮೊರ್ಚಾಗಳ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಮನೆ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವುದು ಮತ್ತು ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ರ್ಯಾಲಿ ನಡೆಸುವ ಮೂಲಕ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರನ್ನು ನೆನೆಯ ಬೇಕಾದ ಸಮಯವಾಗಿದೆ ಎಂದು ಪ್ರಧಾನಿ ಮೋದಿಯವರು ಕರೆ ನೀಡಿದ್ದಾರೆ. ಅವರ ಕರೆಗೆ ಓಗೊಟ್ಟು ಬಿಜೆಪಿ ವತಿಯಿಂದ ಹರ್ ಘರ್ ತಿರಂಗ ಅಭಿಯಾನ ನಡೆಸುವ ಮೂಲಕ ಜನರಲ್ಲಿ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಹೇಳಿದರು.

ಇದೇ ವೇಳೆ ಜಿಲ್ಲಾ ಪ್ರಭಾರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ್ ಹಿರೇಮನಿ, ಮನ್ ಮುಲ್ ನಿರ್ದೇಶಕಿ ರೂಪಾ, ತಾಲ್ಲೂಕು ಅಧ್ಯಕ್ಷ ಪಣ್ಣೇದೊಡ್ಡಿ ರಘು, ರೈತ ಮೊರ್ಚಾ ಅಧ್ಯಕ್ಷ ಶಿವದಾಸ್ ಸತೀಶ್, ಮಹಿಳಾ ಮೊರ್ಚಾದ ಶ್ವೇತಾ, ಪೂರ್ಣಿಮಾ, ಮಮತಾ ರಾಂಕ, ಸೌಮ್ಯ, ಮಧು ಕುಮಾರ್, ಡಿ.ಸಿ. ಮಹೇಂದ್ರ, ಮ.ನ.ಪ್ರಸನ್ನಕುಮಾರ್, ಮನುಕುಮಾರ್ ಇತರರು ಇದ್ದರು.

Leave a Reply

Your email address will not be published.