ಅದ್ರಿತ್ ಫೌಂಡೇಶನ್ ವತಿಯಿಂದ ನಾಗರೀಕರಿಗೆ ಅಂಗಾಂಗ ದಾನ ಬಗ್ಗೆ ಜಾಗೃತಿ

ಬೆಂಗಳೂರು

ಬೆಂಗಳೂರು: ಪ್ರತಿಯೊಬ್ಬರು ಅಂಗಾಂಗ ದಾನಕ್ಕೆ ಮುಂದಾರೆ , ಆರೋಗ್ಯ ಸಮಾಜವನ್ನು ರೂಪಿಸಬಹುದು ಎಂದು ಅದ್ರಿತ್ ಫೌಂಡೇಶನ್ ವತಿಯಿಂದ ನಾಗರೀಕರಿಗೆ ಜಾಗೃತಿ ಮೂಡಿಸಲಾಯಿತು . ನಗರದ ರಾಜರಾಜೇಶ್ವರಿ ನಗರದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮ ಮೂಲಕ ಫೌಂಡೇಶನ್ ಸದಸ್ಯರು ಜಾಗೃತಿ ಮೂಡಿಸಿ , ಅಂಗಾಂಗ ದಾನ ಮಾಡಲಾಗುವುದೆಂದು ನಾಗರೀಕರಲ್ಲಿ ಪ್ರತಿಜ್ಞೆ ಮಾಡಿಸಿದರು

ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ – ಅಂಶಗಳ ಪ್ರಕಾರ , ಶೇ .0.1 ರಷ್ಟು ಭಾರತೀಯರು ಮಾತ್ರ ಅಂಗಾಂಗ ದಾನ ಮಾಡುತ್ತಿದ್ದಾರೆ . ಜನರಲ್ಲಿ ಅರಿವಿನ ಕೊರತೆ , ಧಾರ್ಮಿಕ ನಂಬಿಕೆ ಹಾಗೂ ಮೂಢ ನಂಬಿಕೆಗಳಿಂದ ಜನರು ಅಂಗಾಂಗ ದಾನಕ್ಕೆ ಮುಂದೆ ಬರುತ್ತಿಲ್ಲ . ಇದನ್ನು ನಿವಾರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ . ಪ್ರತಿ ವರ್ಷ 1.5 ಲಕ್ಷದಿಂದ 2 ಲಕ್ಷ ಕಿಡ್ನಿಗಳ ಕಸಿ ಅಗತ್ಯವಿದೆ . ಆದರೆ , 8 ರಿಂದ 10 ಸಾವಿರ ಕಿಡ್ನಿ ಕಸಿ ಮಾತ್ರ ಆಗುತ್ತಿವೆ

.

40 ರಿಂದ 50 ಸಾವಿರ ಲಿವರ್ ಕಸಿ ಅಗತ್ಯವಿದ್ದು , 1,700 ರಿಂದ 1800 ಮಾತ್ರ ಸಾಧ್ಯವಾಗುತ್ತಿದೆ . 2 ಲಕ್ಷ ಹೃದಯ ಕಸಿ ಅವಶ್ಯಕತೆ ಇದ್ದು , ಕೇವಲ 3,500 ಹೃದಯ ಕಸಿ ಸಾಧ್ಯವಾಗಿದೆ ಎಂದು ಮಾಹಿತಿ ನೀಡಲಾಯಿತು . ಈ ಸಂದರ್ಭದಲ್ಲಿ ಅದ್ರಿತ್ ಫೌಂಡೇಶನ್‌ನ ಸಂಸ್ಥಾಪಕಿ ಶರ್ಮಿಳಾ ಶೇಷಾದ್ರಿ , ಸಹ ನಿರ್ದೇಶಕ ಗಣೇಶ್ ಕುಮಾರ್ , ಪದ್ಮಜಾ ರಾವ್ , ಅತಿಥಿ ಉಪನ್ಯಾಸಕ ಎಂ.ಕೆ.ಕೃಷ್ಣ ಸೇರಿದಂತೆ ಪ್ರಮುಖರಿದ್ದರು .

 

Leave a Reply

Your email address will not be published.