
. ಅಭಿಮಾನಿಯಿಂದ ಪವನ್ ಕಲ್ಯಾಣ್ ಗೆ ಅನಾರೋಗ್ಯ ಕಾಡ್ತಿದೆಯಂತೆ..!ವೈದ್ಯರು ಹೇಳಿದ್ದೇನು..?
ತೆಲುಗಿನ ಖ್ಯಾತ ನಟ, ರಾಜಕಾರಣಿ ಪವನ್ ಕಲ್ಯಾಣ್ ಆರೋಗ್ಯದಲ್ಲಿ ಏರುಪೇರಾಗಿದೆ. ದಿಢೀರ್ ಅಸ್ವಸ್ಥರಾಗಿರುವ ಪವನ್ ಕಲ್ಯಾಣ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೂಲಗಳ ಪ್ರಕಾರ ಪವನ್ ಕಲ್ಯಾಣ್ ಹೈ ಫೀವರ್ (ಜ್ವರ) ದಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಪವನ್ ಕಲ್ಯಾಣ್ ಅನಾರೋಗ್ಯ ಕಾರಣ ಜನಸೇನಾ ಪಕ್ಷ ಹಮ್ಮಿಕೊಂಡಿದ್ದ ಜನವಾಣಿ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನುವ ಸುದ್ದಿ ಲೀಕ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ನೆಚ್ಚಿನ ನಟ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ. ಪವನ್ ಕಲ್ಯಾಣ್ ಮಾತ್ರವಲ್ಲದೇ ಅವರ ಪಕ್ಷದ ಕೆಲವು ಪ್ರಮುಖ ನಾಯಕರು, ಕಾರ್ಯಕ್ರಮ ಸಮಿತಿ ಸದಸ್ಯರು ಮತ್ತು ಭದ್ರತಾ ಸಿಬ್ಬಂದಿ ಸಹ ಜ್ವರದಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಪವನ್ ಇತ್ತೀಚೆಗೆ ಜನವಾಣಿ ಕಾರ್ಯಕ್ರಮದ ಅಂಗವಾಗಿ ಎರಡೂ ಗೋದಾವರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದರು. ಹಾಗಾಗೆ ಜ್ವರ ಜಾಸ್ತಿ ಆಗಿರಬೇಕು ಎನ್ನಲಾಗಿದೆ. ಆದರೆ ಈ ಬಗ್ಗೆ ಪವನ್ ಕಲ್ಯಾಣ್ ಅಥವಾ ಅವರ ಪಕ್ಷದ ಕಡೆಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.