
ಯಡಿಯೂರಪ್ಪ ಅವರನ್ನು ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಜನ ಗುರುತಿಸುತ್ತಿದ್ದಾರೆ: ಬಿ.ವೈ.ವಿಜಯೇಂದ್ರ
ಶಿವಮೊಗ್ಗ: ಅಸ್ಪೃಶ್ಯರಿಗಾಗಿ, ರೈತರಿಗಾಗಿ, ಪಕ್ಷದ ಸಂಘಟನೆಗಾಗಿ ನಿರಂತರ ಹೋರಾಟ ನಡೆಸಿದವರು ಯಡಿಯೂರಪ್ಪ ಅವರು ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಶಿಕಾರಿಪುರದಲ್ಲಿ ನಡೆಯುತ್ತಿರುವ ರೈತಾಭಿಮಾನ ಸಮಾವೇಶದಲ್ಲಿ ಮಾತನಾಡಿದ ಅವರು, ಜೀವನ ದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದವರು ಯಡಿಯೂರಪ್ಪ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ, ರೈತರ ಹೆಸರಲ್ಲಿ ಬಜೆಟ್ ಮಂಡಿಸಿ, ರೈತರ ಸಾಲಮನ್ನಾ ಮಾಡಿದ್ದು ಯಡಿಯೂರಪ್ಪ.
ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಅಂತಿದ್ದರೆ ಅದು ಯಡಿಯೂರಪ್ಪ ಅವರು ಮಾತ್ರ. ಯಡಿಯೂರ ಪ್ಪ ಅವರನ್ನು ಕರ್ನಾಟಕ ಮಾತ್ರವಲ್ಲ, ಇಡೀ ದೇಶದ ಜನ ಗುರುತಿಸುತ್ತಿದ್ದಾರೆ. ಇದಕ್ಕೆ ಕಾರಣ ಶಿಕಾರಿಪುರದ ಜನತೆ. ಶಿಕಾರಿಪುರದ ಜನ ಸುಖವಾಗಿರಬೇಕು ಎಂದು ಇಡೀ ತಾಲೂಕಿಗೆ ನೀರಾವರಿ ಯೋಜನೆ ಕಲ್ಪಿಸಿದ್ದಾರೆ. ಯಡಿಯೂರಪ್ಪ ಅವರು ಇಡೀ ರಾಜ್ಯದಲ್ಲಿ ಕೆರೆ ಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದಾರೆ ಎಂದರು.