ಅನಾರೋಗ್ಯದಿಂದ ಯೋಧ ಸಾವು: ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಅಂತ್ಯಕ್ರಿಯೆ

ಜಿಲ್ಲೆ

ಬೀದರ್: ಬೀದರ್ ಮೂಲದ ಬಿಎಸ್ಎಫ್ ಯೋಧರೊಬ್ಬರು ಅನಾರೋಗ್ಯದಿಂದ ನಿಧನರಾಗಿದ್ದು, ಇಂದು ಸ್ವಗ್ರಾಮಕ್ಕೆ ಅವರ ಪಾರ್ಥಿವ ಶರೀರ ಆಗಮಿಸಲಿದೆ. ಕಮಲನಗರ ತಾಲೂಕಿನ ಚಿಕ್ಕಮುರ್ಗ ಗ್ರಾಮದ ಮಹಾದೇವ ಕಾಳೇಕರ್ ಅನಾರೋಗ್ಯದಿಂದ ಮೃತರಾದ ಯೋಧ, ಇವರು ಗಡಿ ಭದ್ರತಾ ಪಡೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕರ್ತವ್ಯದಲ್ಲಿದ್ದರು. 48 ವರ್ಷ ಪ್ರಾಯದ ಮಹಾದೇವ್‌ ಕಾಳೇಕರ್ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು,

ಅವರಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ. ಅವರ ಪಾರ್ಥಿವ ಶರೀರ ಇಂದು ಸ್ವಗ್ರಾಮವಾದ ಕಮಲನಗರ ತಾಲೂಕಿನ ಚಿಕ್ಕಮುರ್ಗ ಗ್ರಾಮಕ್ಕೆ ಆಗಮಿಸಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧರ ಅಂತಿಮ ಕ್ರಿಯೆ ನಡೆಯಲಿದೆ. ಮಗನ ಆಕಾಲಿಕ ನಿಧನದಿಂದ ಮಹಾದೇವ್‌ ಕಾಳೇಕರ್ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.

Leave a Reply

Your email address will not be published.