Home District ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷನಿಂದ ಕಾರಿನ ಗಾಜು ಹೊಡೆದು ಹಲ್ಲೆ!

ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷನಿಂದ ಕಾರಿನ ಗಾಜು ಹೊಡೆದು ಹಲ್ಲೆ!

538
0

ಮಡಿಕೇರಿ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾಗೂ ಅತನ ಸ್ನೇಹಿತ ಕಿರಣ್ ಜೊತೆ ಸೇರಿ ವ್ಯಕ್ತಿಯೊರ್ವನ ಕಾರು ಅಡ್ಡಗಟ್ಟಿ ಗಾಜು ಹೊಡೆದು ಹಲ್ಲೆ ಮಾಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಸಂಪತ್ ಎಂದು ಗುರುತಿಸಲಾಗಿದ್ದು , ಸಂಪತ್ ಎಂಬುವವರು ಕಾರಿನಲ್ಲಿ ಹೋಗುತಿದ್ದಾಗ ಮಿಥುನ್ ಹಾಗೂ ಅವರ ಸ್ನೇಹಿತರು ಕಾರು ನಿಲ್ಲಿಸಿದ್ದಾರೆ. ಕಾರು ನಿಲ್ಲಿಸಿದ ಕೂಡಲೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನ ಗಾಜುಗಳನ್ನು ಒಡೆದು ಸಂಪತ್ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.

ಮಿಥುನ್ ಕಾರಿನ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಕಾರಿನ ಒಳಭಾಗದಲ್ಲಿದ್ದ ಸಂಪತ್ ಅವರು ಮೊಬೈಲ್‍ನಲ್ಲಿ ವೀಡಿಯೋ ಮಾಡಲು ಮುಂದಾಗಿದ್ದಾರೆ ಈ ವೇಳೆ ಸಂಪತ್ ಅವರನ್ನು ಮಿಥುನ್ ಕಾರಿನಿಂದ ಎಳೆದು ಹಾಕಿ ಹಲ್ಲೆ ಮಾಡಿದ್ದಾರೆ. ಹಳೇ ವೈಯಕ್ತಿಕ ದ್ವೇಷದಿಂದ ಮಿಥುನ್ ಸಂಪತ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಹಲ್ಲೆ ವೇಳೆ ಸಂಪತ್ ಅವರ ಬಲಗೈಯ ಹೆಬ್ಬೆರಳಿಗೆ ಗಾಯವಾಗಿದೆ. ಕೂಡಲೇ ಸ್ಥಳೀಯರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಘಟನೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಮಿಥುನ್‌ ಮತ್ತು ಸಂಗಡಿಗ ನಾಪತ್ತೆ ಆಗಿದ್ದು ಬಂದಿಸಲು ಪೋಲೀಸರು ಬಲೆ ಬೀಸಿದ್ದಾರೆ. ಹಲ್ಲೆ ನಡೆಸುತ್ತಿರುವ ದೃಶ್ಯಾವಳಿ ವೈರಲ್‌ ಆಗಿದೆ.

Previous articleಸಾರಿಗೆ ಬಸ್ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಕಲ್ಲು ಹೊಡೆದ ಕಿಡಿಗೇಡಿಗಳು; ಚಾಲಕನ ಸ್ಥಿತಿ ಗಂಭೀರ
Next articleಸೇನೆಯ ಸಮವಸ್ತ್ರ ಧರಿಸಿಕೊಂಡು ಕ್ರೈಸ್ತ ಧರ್ಮದ ಹೆಸರಿನಲ್ಲಿ ಮತಾಂತರ ದಂದೆ!

LEAVE A REPLY

Please enter your comment!
Please enter your name here