ಮುಖೇಶ್ ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ ಮಾಡಿದ್ದ ಆರೋಪಿ ಬಂಧನ

ಮುಂಬೈ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಕುಟುಂಬಕ್ಕೆ ಮೂರಕ್ಕೂ ಅಧಿಕ ಬಾರಿ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪಶ್ಚಿಮ ಮುಂಬೈನ ದಹಿಸರ್ ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷ್ಣು ಬೌಮಿಕ್‌ ಎಂಬಾತ ಬಂಧಿತ ಆರೋಪಿ. ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬಕ್ಕೆ ನಿನ್ನೆ ಬೆಳಿಗ್ಗೆ 10:30ರ ಸುಮಾರಿಗೆ ಮೂರು ಬೆದರಿಕೆ ಕರೆಗಳು ಬಂದಿದ್ದವು. ಈ ಕುರಿತಾಗಿ ಮುಖೇಶ್ ಅಂಬಾನಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. […]

Continue Reading

ಹಾಡುಹಗಲೇ ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ದರೋಡೆ: 32 ಕೆಜಿ ಚಿನ್ನದೊಂದಿಗೆ ಖದೀಮರು ಎಸ್ಕೇಪ್

ಚೆನ್ನೈ: ಚೆನ್ನೈನ ಅರುಂಬಕ್ಕಂ ಪ್ರದೇಶದಲ್ಲಿರುವ ಫೆಡ್​​ಬ್ಯಾಂಕ್​​​ ಗೋಲ್ಡ್ ಲೋನ್ ಶಾಖೆಯಲ್ಲಿ ಹಾಡಹಗಲೇ ದರೋಡೆ ನಡೆದಿದ್ದು ಕೋಟ್ಯಾಂತರ ರೂಪಾಯಿ ಮೌಲ್ಯದ 32 ಕೆಜಿ ಚಿನ್ನದೊಂದಿಗೆ ದರೋಡೆ ಕೋರರು ಎಸ್ಕೇಪ್ ಆಗಿದ್ದಾರೆ. ಮುಸುಕುಧಾರಿಗಳು ಬ್ಯಾಂಕ್ ಸಿಬ್ಬಂದಿಯನ್ನು ಶೌಚಾಲಯದಲ್ಲಿ ಕೂಡಿ ಹಾಕಿದ್ದು, ಗ್ರಾಹಕರನ್ನು ಖರ್ಚಿಗೆ ಕಟ್ಟಿಹಾಕಿ ದರೋಡೆ ಮಾಡಿದ್ದಾರೆ. ಶಾಖೆಯೊಳಗೆ ನುಗ್ಗಿದ ಮೂವರು ಮುಸುಕುಧಾರಿಗಳು, ಉದ್ಯೋಗಿಗಳನ್ನ ಬೆದರಿಸಿ ಶೌಚಾಲಯದೊಳಗೆ ಕೂಡಿ ಹಾಕಿದ್ದಾರೆ. ಬಳಿಕ ಸ್ಟ್ರಾಂಗ್​ ರೂಂನ ಕೀ ತೆಗೆದುಕೊಂಡು 32 ಕೆಜಿ ಚಿನ್ನ ದೋಚಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ […]

Continue Reading

ಗೋಡೆ ಮೇಲೆ ಲಿಫ್ಟ್ ಸ್ಟಿಕ್ ನಲ್ಲಿ ಡೆತನೋಟ್..! ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ರಾಂಚಿ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಂಚಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಚಂದಾ ದೇವಿ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಕಾರಣವೆನೆಂಬುವುದನ್ನು ಲಿಪ್‍ಸ್ಟಿಕ್‍ನಿಂದ ಮನೆಯ ವಾಲ್ ಮೇಲೆ ಬರೆದಿದ್ದಾರೆ. 2019ರಲ್ಲಿ ಚಂದಾ ದೇವಿ ಅವರು, ದಿಲೀಪ್ ಚೌಹಾಣ್ ಅವರನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ದೂರವಾಗಿದ್ದರು. ನಿತ್ಯವೂ ಇಬ್ಬರು ಜಗಳವಾಡುತ್ತಿದ್ದರು. ತನ್ನ ಸಾವಿಗೆ ಅತ್ತೆಯಂದಿರು ಮತ್ತು ಪತಿ ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಆತ್ಮಹತ್ಯೆ ಬರಹದಲ್ಲಿ ಗೃಹಿಣಿ ಬಹಿರಂಗಪಡಿಸಿದ್ದಾರೆ. ರಾತ್ರಿ ದಿಲೀಪ್ ಮನೆಯಲ್ಲಿ ಇಲ್ಲದ ವೇಳೆ […]

Continue Reading

ಬೈಕ್ ಹಾಗೂ ಆಟೋಗೆ ಡಿಕ್ಕಿ ಹೊಡೆದ ಕಾರು: ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವು

ಅಹಮದಾಬಾದ್: ಅತಿ ವೇಗವಾಗಿ ಬಂದ ಕಾರು ಆಟೋ ರಿಕ್ಷಾ ಹಾಗೂ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಒಟ್ಟು ಆರು ಮಂದಿ ಮೃತಪಟ್ಟಿರುವ ಧಾರುಣ ಘಟನೆ ಗುಜರಾತ್ ನ ಆನಂದ್ ಜಿಲ್ಲೆಯ ಸೋಜಿತ್ರಾ ಗ್ರಾಮದ ಆನಂದ ಪಟ್ಟಣ ಮತ್ತು ತಾರಾಪುರದ ರಾಜ್ಯ ಹೆದ್ದಾರಿಯಲ್ಲಿ  ನಡೆದಿದೆ. ಅಪಘಾತದಲ್ಲಿ ವಿನಾ ವಿಪುಲ್ ಮಿಸ್ತ್ರಿ (44) ಜಿಯಾ (14) ಮತ್ತು ಜಾನ್ವಿ (17) ಯಾಸಿನ್ ಮೊಹಮ್ಮದ್ ವೋಹ್ರಾ (38) ಯೋಗೇಶ್ ರಾಜೇಶ್ ಓಡ್ (20) ಮತ್ತು ಸಂದೀಪ್ ಠಾಕೂರ್ ಓಡ್ (19) […]

Continue Reading

ಆಸ್ತಿಗಾಗಿ ಅತ್ತೆ ಸೊಸೆ ಜಗಳ: ಕೋಪಗೊಂಡ ವೃದ್ಧೆ ಮಾಡಿದ್ದು ಮಾತ್ರ ಭಯಾನಕ ಕೃತ್ಯ

ಹೈದರಾಬಾದ್: ಆಸ್ತಿಯಲ್ಲಿ ಸೊಸೆ ಪಾಲು ಕೇಳಿದ ಕಾರಣಕ್ಕೆ ಕೋಪಗೊಂಡ ಅತ್ತೆ ಆಕೆಯ ರುಂಡವನ್ನೇ ಕತ್ತರಿಸಿ ರುಂಡ ಸಮೇತ ಪೊಲೀಸರ ಮುಂದೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯಲ್ಲಿ ನಡೆದಿದೆ. ಆಂಧ್ರದ ರಾಯಚೋಟಿ ಪುರಸಭಾ ವ್ಯಾಪ್ತಿಯ ಕೊತ್ತಕೋಟ ರಾಮಪುರಂ ನಿವಾಸಿ ಸುಬ್ಬಮ್ಮ ಎಂಬ ಮಹಿಳೆ ತನ್ನ ಸೊಸೆ ವಸುಂಧರಾಳನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾಳೆ. ಈ ಮೊದಲು ಕುವೈತ್ ನಲ್ಲಿ ಕೆಲಸ ಮಾಡುತ್ತಿದ್ದ ಸುಬ್ಬಮ್ಮ ಸಾಕಷ್ಟು ಆಸ್ತಿ ಪಾಸ್ತಿ ಸಂಪಾಧಿಸಿದ್ದರು. ಇತ್ತೀಚೆಗೆ ಮಗ ಮೃತಪಟ್ಟಿದ್ದು ಆ ಬಳಿಕ ಸೊಸೆ ಹಾಗೂ ಮೊಮ್ಮಕ್ಕಳ ಜೊತೆ ಸುಬ್ಬಮ್ಮ ವಾಸಿಸುತ್ತಿದರು. ಆದರೆ ಮಗ ಮೃತಪಟ್ಟ ಬಳಿಕ ಸೊಸೆ ಬೇರೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದು ಇದೇ ವಿಷಯಕ್ಕೆ […]

Continue Reading

5 ಜನ ಕೀಚಕರಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ..! ಕಾಪಾಡಲಾಗದ ಸ್ಥಿತಿಯಲ್ಲಿ ಸಹೋದರ

ಲಕ್ನೋ: 8ನೇ ತರಗತಿಯ ವಿದ್ಯಾರ್ಥಿನಿಯನ್ನು 5 ಜನರು ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದು, ಆಕೆಯ ಸಹೋದರನನ್ನು ಮನ ಬಂದಂತೆ ಥಳಿಸಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ. ಸಂತ್ರಸ್ತೆ ಮತ್ತು ಆಕೆಯ ಸಹೋದರ ದೇವಸ್ಥಾನದಿಂದ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಐವರು ಆರೋಪಿಗಳನ್ನು ಅವರನ್ನು ಅಪಹರಿಸಿದ್ದಾರೆ. ಇದಾದ ನಂತರ ಸಂತ್ರಸ್ತೆಯ ಸಹೋದರನನ್ನು ಕೊಠಡಿಯಲ್ಲಿ ಬಂಧಿಸಿ ಅವನನ್ನು ಥಳಿಸಿದ್ದಾರೆ. ಇದಾದ ಬಳಿಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರದ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ಘಟನೆ ಬಗ್ಗೆ ತಿಳಿದ ಸಂತ್ರಸ್ತೆಯ […]

Continue Reading

ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಮೇಲೆ ಮಾರಣಾಂತಿಕ ಹಲ್ಲೆ: BJP ಕಾರ್ಯಕರ್ತರ ವಿರುದ್ಧ ಆಕ್ರೋಶ

ಅಗರ್ತಲಾ: ಅಗರ್ತಲಾದ ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮಮ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದೀಪ್ ರಾಯ್ ಮೇಲಿನ ಹಲ್ಲೆಗೆ ಕೈ ಕಾರ್ಯಕರ್ತರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಸುದೀಪ್ ರಾಯ್ ಬರ್ಮಮ್ ಅವರ ಮೇಲೆ ನಡೆದ ಹಲ್ಲೆಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಭಾರತೀಯ ಯುವ ಕಾಂಗ್ರೆಸ್, ದೇಶದಲ್ಲಿ ಜನಪ್ರತಿನಿಧಿಗಳ ಸುರಕ್ಷತೆಯನ್ನು ಪ್ರಶ್ನಿಸಿದ್ದು, ಬಿಜೆಪಿ ಕಾರ್ಯಕರ್ತರ ವಿರುದ್ಧ ಗೂಂಡಾ ವರ್ತನೆಯ ಆರೋಪ ಮಾಡಿದೆ. ಅಗರ್ತಲಾದ ಶಾಸಕ ಸುದೀಪ್ ರಾಯ್ ಬರ್ಮನ್ […]

Continue Reading

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಸುಪ್ರೀಂ ಮೆಟ್ಟಿಲೇರಿದ ನಳಿನಿ ಶ್ರೀಹರನ್

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳಲ್ಲಿ ಒಬ್ಬರಾಗಿರುವ ನಳಿನಿ ಶ್ರೀಹರನ್ ಬಿಡುಗಡೆ ಕೋರಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದಾರೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿ ಎ.ಜಿ.ಪೆರಾರಿವಾಲನ್ ಅವರನ್ನು ಬಿಡುಗಡೆ ಮಾಡಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ನಳಿನಿ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೂ ಮೊದಲು ನಳಿನಿ ಅವರು ಬಿಡುಗಡೆ ಮಾಡುವಂತೆ ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತ್ತು. ಹೀಗಾಗಿ ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. […]

Continue Reading

Viral Video.. ರಸ್ತೆಯಲ್ಲಿ ತಟ್ಟೆ ಹಿಡಿದು ಕಣ್ಣೀರಿಟ್ಟ ಉತ್ತರ ಪ್ರದೇಶದ ಕಾನ್ ಸ್ಟೇಬಲ್..!

ಫಿರೋಜಾಬಾದ್: ಪೊಲೀಸ್​​ ಮೆಸ್​ನಲ್ಲಿ ಉಣಬಡಿಸಿದ ಊಟದ ತಟ್ಟೆಯನ್ನು ಹಿಡಿದು ಸಾರ್ವಜನಿಕ ಪ್ರದೇಶದಲ್ಲಿ ಧಾರಾಕಾರ ಕಣ್ಣೀರು ಸುರಿಸುವ ಮೂಲಕ ಪೊಲೀಸ್​ ಕಾನ್ಸ್​ಟೇಬಲ್​ ಓರ್ವ ಜನರ ಗುಂಪು ಸೇರಿಸಿ ಹೈಡ್ರಾಮ ಮಾಡಿದ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ಬುಧವಾರ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಏನಿದೆ? ಅನ್ನ, ದಾಲ್​ ಮತ್ತು ರೋಟಿ ಇರುವ ಊಟದ ತಟ್ಟೆಯನ್ನು ಹಿಡಿದು ಕಾನ್ಸ್​ಟೇಬಲ್​ ಮನೋಜ್​ ಕುಮಾರ್​ ಎಂಬುವರು ರಸ್ತೆ ಮಧ್ಯೆ ನಿಂತು ಕಣ್ಣೀರಿಡುತ್ತಿದ್ದರೆ, ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ಅವರನ್ನು […]

Continue Reading

ಬೀದಿ ಬದಿ ಪಾನಿ ಪೂರಿ ತಿಂದು 100ಕ್ಕೂ ಹೆಚ್ಚು ಮಂದಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು

 ಕೋಲ್ಕತ್ತಾ: ಪಾನಿ ಪೂರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ನೋಡಿದ ಕೂಡಲೇ ಒಮ್ಮೆ ತಿಂದು ಬಿಡಬೇಕು ಅನಿಸುತ್ತೆ. ಇದೀಗ ಬೀದಿ ಬದಿ ಮಾರುವ ಪಾನಿಪುರಿ ತಿಂದು 100ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸುಗಂಧ ಗ್ರಾಮ ಪಂಚಾಯತ್‌ನ ಡೋಗಾಚಿಯಾ ಪ್ರದೇಶದಲ್ಲಿ ನಡೆದಿದೆ. ಪಾನಿ ಪೂರಿ ತಿಂದ ಬಳಿಕ ಅಷ್ಟೂ ಮಂದಿಗೂ ವಾಂತಿ ಹಾಗೂ ಬೇದಿ ಕಾಣಿಸಿಕೊಂಡಿದೆ. ಪ್ರತಿಯೊಬ್ಬರಲ್ಲೂ ಅತಿಸಾರದ ಲಕ್ಷಣಗಳು ಕಂಡು ಬಂದಿದ್ದು ಮಾಹಿತಿ ಪಡೆದ ಆರೋಗ್ಯ ಇಲಾಖೆಯ ವಿಶೇಷ ತಂಡ […]

Continue Reading