ಕೇಂದ್ರ ಸರ್ಕಾರದಿಂದ 747 ವೆಬ್ ಸೈಟ್ ಗಳು, 94 ಯೂಟ್ಯೂಬ್ ಚಾನೆಲ್ ಗಳು ಬಂದ್..!

ರಾಷ್ಟ್ರೀಯ

ನವದೆಹಲಿ: ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ 747 ವೆಬ್‌ಸೈಟ್‌ಗಳು, 94 ಯೂಟ್ಯೂಬ್ ಚಾನೆಲ್ ಹಾಗೂ 19 ಸಾಮಾಜಿಕ ಮಾಧ್ಯಮದ ಖಾತೆಗಳ ಮೇಲೆ ಕೇಂದ್ರ ಸರ್ಕಾರವು 2021-22ನೇ ಸಾಲಿನಲ್ಲಿ ನಿರ್ಬಂಧ ಹೇರಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಕೋವಿಡ್ ಸಂಬಂಧಿತ ಸುಳ್ಳುಸುದ್ದಿ ಹರಡುವುದನ್ನು ತಡೆಯಲು ಸತ್ಯ ಶೋಧನಾ ಘಟಕವನ್ನು 2020ರ ಮಾರ್ಚ್ 31 ರಂದು ಸ್ಥಾಪಿಸಲಾಗಿದೆ. ಇದು 875 ಸುಳ್ಳು ಸುದ್ದಿ ಹರಡುವ ಪೋಸ್ಟ್‌ಗಳ ಸತ್ಯಾಂಶ ಬಯಲಿಗೆಳೆದಿದೆ ಎಂದು ಅವರು ಆರೋಪಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ- 2000ರ ಸೆಕ್ಷನ್ 69A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ

Leave a Reply

Your email address will not be published.