Home District ಹೊಸ ವರ್ಷದ ಬಣ್ಣದಾಟ ಆಡಿ ಈಜಲು ಹೋದ ವಿದ್ಯಾರ್ಥಿ ನೀರುಪಾಲು

ಹೊಸ ವರ್ಷದ ಬಣ್ಣದಾಟ ಆಡಿ ಈಜಲು ಹೋದ ವಿದ್ಯಾರ್ಥಿ ನೀರುಪಾಲು

562
0

ಚಾಮರಾಜನಗರ: ಯುಗಾದಿ ವರ್ಷದೊಡಕಿನಂದು ಬಣ್ಣದಾಟ ಆಡಿ ಬಣ್ಣ ತೊಳೆದುಕೊಳ್ಳಲು ಈಜಲು ಹೋದ ವೇಳೆ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಕೆರೆಯಲ್ಲಿ ನಡೆದಿದೆ.

ಕೊಡಸೋಗೆ ಗ್ರಾಮದ ಮಹೇಶ್ ಎಂಬವರ ಮಗ ಚಂದು ಮೃತ ದುರ್ದೈವಿ . ಈತ 9 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಯುಗಾದಿ ವರ್ಷದೊಡಕಿನ ಪ್ರಯುಕ್ತ ಬಣ್ಣ ಎರಚಾಡಿಕೊಂಡು ಸಂಭ್ರಮಿಸಿ ಬಣ್ಣ ತೊಳೆಯಲು ಮೂವರು ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದಾರೆ. ಚಂದು ಕಾಲುಜಾರಿ ಆಳಕ್ಕೆ ಹೋಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಸದ್ಯ, ಶವವನ್ನು ಹೊರತೆಗೆದಿದ್ದು ತೆರಕಣಾಂಬಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.‌

Previous articleಸಂಬಳವಿಲ್ಲದೇ ಭಿಕ್ಷೆ ಬೇಡಿದ ಸಾರಿಗೆ ಇಲಾಖೆ ಸಿಬ್ಬಂಧಿಗಳು
Next articleಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ

LEAVE A REPLY

Please enter your comment!
Please enter your name here