Home District ನಾಳೆಯಿಂದ 4 ದಿನ ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆ ಸಂಪೂರ್ಣ ಲಾಕ್ ಡೌನ್!

ನಾಳೆಯಿಂದ 4 ದಿನ ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆ ಸಂಪೂರ್ಣ ಲಾಕ್ ಡೌನ್!

ನಾಳೆಯಿಂದ 4 ದಿನ ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆ ಸಂಪೂರ್ಣ ಲಾಕ್ ಡೌನ್!

380
0

ವರದಿ: ನಾ.ಅಶ್ವಥ್ ಕುಮಾರ್

ಚಾಮರಾಜನಗರ : ನಾಳೆಯಿಂದ ನಾಲ್ಕು ದಿನ ಚಾಮರಾಜನಗರ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ಬೆಳಗ್ಗೆಯಿಂದಲೇ ಜಿಲ್ಲೆಯ ಪ್ರಮುಖ ವ್ಯಾಪಾರ ಸ್ಥಳಗಳಲ್ಲಿ ಜನ ಸಂದಣಿ ಅಧಿಕವಾಗಿತ್ತು.ವಾರದ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲು ಜಿಲ್ಲಾಉಸ್ತುವಾರಿ ಸಚಿವರ ನೇತೃತ್ವದ ಟಾಸ್ಕ್ ಪೋರ್ಸ್ ಸಮಿತಿ ನಿರ್ಧಾರ ಕೈಗೊಂಡಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಗೆ ಆದೇಶಿಸಿದೆ.

ಗುರುವಾರ , ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸಂಪೂರ್ಣವಾಗಿ ಚಾಮರಾಜನಗರ ಜಿಲ್ಲೆ ಸ್ಥಬ್ದವಾಗುವ ಹಿನ್ನಲೆಯಲ್ಲಿ ಬುಧವಾರ ಬೆಳಗ್ಗೆಯಿಂದಲೇ ವಿವಿಧ ಕಡೆಗಳಿಂದ ಸಾರ್ವಜನಿಕರು ಪ್ರಮುಖ ವ್ಯಾಪಾರ ವಹಿವಾಟು ಸ್ಥಳಗಳಿಗೆ ಆಗಮಿಸಿ ನಾಲ್ಕು ದಿನಗಳಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಖರೀದಿಯಲ್ಲಿ ತೊಡಗಿದ್ದರು.ಎಲ್ಲಿ ನೋಡಿದರೂ ಜನವೂ ಜನ, ದ್ವಿಚಕ್ರವಾಹನಗಳಲ್ಲಿ ಬಂದ ಸಾರ್ವಜನಿಕರು ತಮ್ಮ ತಮ್ಮ ಮನೆಗೆ ಬೇಕಾಗುವ ಸಾಮಗ್ರಿಗಳನ್ನು ಖರೀಧಿಸುವಲ್ಲಿ ಮುಂದಾಗಿದ್ದರು. ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಇಲ್ಲದೆ ನಾ ಮುಂದು ತಾ ಮುಂದು ಎನ್ನುವಂತೆ ನಿತ್ಯ ಬಳಕೆ ವಸ್ತುಗಳನ್ನು ಖರೀದಿಯಲ್ಲಿ ಮುಂದಾಗಿದ್ದರು.

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಸಾವಿನ ಸಂಖ್ಯೆಯೂ ಸಹ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದನ್ನೆಲ್ಲಾ ತಿಳಿದಿದ್ದರೂ ಸಾರ್ವಜನಿಕರು ಮಾತ್ರ ದಿನ ಬಳಕೆ ವಸ್ತುಗಳ ಖರೀದಿಗೆ ಜಾತ್ರೆಯಲ್ಲಿ ಸೇರುವಂತೆ ಸೇರಿದ್ದು ಗಮನಿಸಿದೆ ಕೋರೊನಾ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ಮುಸ್ಲೀಂ ಸಮೂದಾಯವರಿಗೆ ಶುಕ್ರವಾರ ರಂಜಾನ್ ಇದೆ, ಆದರೆ ರಂಜಾನ್ ದಿನ ಸಂಪೂರ್ಣ ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ಮುಸ್ಲೀಂ ಭಾಂಧವರು ಇಂದೇ ಮನೆಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿ ಮಾಡಲು ಮುಂದಾಗಿದ್ದರು.

ಚಾಮರಾಜನಗರದ ದೊಡ್ಡ ಅಂಗಡಿ ಬೀಡಿ, ಹಳೇ ತರಕಾರಿ ಮಾರ್ಕೇಟ್ ವೃತ್ತ, ನಗರಸಭೆಯ ಬಳಿ ಜನ ಜಾತ್ರೆ ಅಧಿಕವಾಗಿತ್ತು. ಇಷ್ಟೆಲ್ಲಾ ಇದ್ದರೂ ಸಹ ಪೊಲೀಸರು ಸಂಚಾರ ನಿಯಂತ್ರಣ ಮಾಡುವುದಾಗಲಿ, ಅಥವಾ ಸಾರ್ವಜನಿಕರನ್ನು ನಿಯಂತ್ರಣ ನಿರ್ವಹಿಸಲು ಬರಲೇ ಇಲ್ಲ.

VIAನಾಳೆಯಿಂದ 4 ದಿನ ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆ ಸಂಪೂರ್ಣ ಲಾಕ್ ಡೌನ್!
SOURCEನಾಳೆಯಿಂದ 4 ದಿನ ಅಂತರಾಜ್ಯ ಗಡಿ ಚಾಮರಾಜನಗರ ಜಿಲ್ಲೆ ಸಂಪೂರ್ಣ ಲಾಕ್ ಡೌನ್!
Previous articleಕೊರೋನಾ ಮಹಾಮಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಮುಖಂಡರ ಸಲಹೆ ಸಹಕಾರ
Next articleನಾರಾಯಣ ಗೌಡರಿಗೆ ನೇರ ಸವಾಲ್!; ವಿಡಿಯೋ ವೈರಲ್

LEAVE A REPLY

Please enter your comment!
Please enter your name here