Home District ಚಾಮರಾಜನಗರ ಜಿಲ್ಲೆಯಲ್ಲಿ ಮುಂದುವರೆದ ಕೋರೊನಾ ರಣಕೇಕೆ!

ಚಾಮರಾಜನಗರ ಜಿಲ್ಲೆಯಲ್ಲಿ ಮುಂದುವರೆದ ಕೋರೊನಾ ರಣಕೇಕೆ!

ಚಾಮರಾಜನಗರ ಜಿಲ್ಲೆಯಲ್ಲಿ 534 ಮಂದಿ ಕೋರೊನಾ ದೃಡ; 169994 ಮಂದಿಗೆ ಲಸಿಕೆ; 10 ಮಂದಿ ದುರ್ಮರಣ

532
0

ವರದಿ: ನಾ.ಅಶ್ವಥ್ ಕುಮಾರ್

ಶನಿವಾರ ಚಾಮರಾಜನಗರ ಜಿಲ್ಲೆಯಲ್ಲಿ 534 ಮಂದಿ ಕೋರೊನಾ ದೃಡ – 4284 ಸಕ್ರಿಯ ಪ್ರಕರಣ;ಶನಿವಾರ 10 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ದುರ್ಮರಣ;ಶುಕ್ರವಾರ 433 ಮಂದಿಗೆ ಲಸಿಕೆ ಇದೂವರೆಗೂ 169994 ಮಂದಿಗೆ ಲಸಿಕೆ.

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ. ಚಾಮರಾಜನಗರ ಜಿಲ್ಲೆಗೆ ಶನಿವಾರ ಕರಾಳವೆನಿಸಿದೆ.ಶನಿವಾರ ಒಂದೇ ದಿನ 534 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೋರೊನಾ ಸೋಂಕಿನಿಂದ ಬಳಲುತ್ತಿದ್ದ 10 ಮಂದಿ ಸಾವನ್ನಪ್ಪಿದ್ದು ಇದೂವರೆಗೂ 289 ಸೋಂಕಿತರು ಮೃತಪಟ್ಟಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಜಿಲ್ಲೆಯಲ್ಲಿ ಸಕ್ರೀಯ ಕೋರೋನಾ ಸೋಂಕಿತರ ಸಂಖ್ಯೆ 4284ಕ್ಕೇರಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಶನಿವಾರ ಕೋರೊನಾ ಸೋಂಕಿನಿಂದ ಗುಣಮುಖರಾಗಿ 794 ಮಂದಿ ಬಿಡುಗಡೆಹೊಂದಿದ್ದು, ಇದೂವರೆಗೂ ಕೋರೊನಾ ಸೋಂಕಿನಿಂದ 15478 ಮಂದಿ ಗುಣಮುಖರಾಗಿದ್ದಾರೆ. ಶನಿವಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಿಂದ 224 ಹಾಗೂ ರ್ಯಾಪಿಡ್ ಪರೀಕ್ಷೆಯಿಂದ 311 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ .

ಶನಿವಾರ ಹೊಸದಾಗಿ ಕೋರೊನಾ ಸೋಂಕು ಪತ್ತೆಯಾದ 534 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 180 , ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 124 , ಕೋಳ್ಳೆಗಾಲ ತಾಲ್ಲೂಕಿನಲ್ಲಿ 120 , ಹನೂರು ತಾಲ್ಲೂಕಿನಲ್ಲಿ 84, ಯಳಂದೂರು ತಾಲ್ಲೂಕಿನಲ್ಲಿ 26 ಮಂದಿ, ಹೊರ ಜಿಲ್ಲೆಯ ಒಬ್ಬರು ಸೇರಿ 534 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಶುಕ್ರವಾರ 1083 ಮಂದಿ ಕೋರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದು, ಇದೂವರೆಗೂ 169561 ಮಂದಿ ಕೊರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದಾರೆ .

ಕೋರೊನಾ ಸೋಂಕಿನಿಂದ ಮೃತವರೆಂದರೆ, ಚಾಮರಾಜನಗರ ತಾಲ್ಲೂಕಿನ ಕೂಡ್ಲೂರು ಗ್ರಾಮದ 65 ವರ್ಷದ ಪುರುಷ, ಸರಗೂರು ಗ್ರಾಮದ 50 ವರ್ಷದ ಪುರುಷ, ಪಟ್ಟಣದ 58 ವರ್ಷದ ಪುರುಷ, 75 ವರ್ಷದ ಪುರುಷ, ಗುಂಡ್ಲುಪೇಟೆ ಪಟ್ಟಣದ 43 ವರ್ಷದ ಮಹಿಳೆ, ಹುಂಡಿಪುರದ 58 ವರ್ಷದ ಪುರುಷ, ಹನೂರು ತಾಲ್ಲೂಕಿನ ಮಲಾರ ಪಾಳ್ಯ ಗ್ರಾಮದ64 ವರ್ಷದ ಪುರುಷ, ಕೊಳ್ಳೇಗಾಲ ಪಟ್ಟಣದ 65 ವರ್ಷದ ಪುರುಷ, ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಗಟ್ಟವಾಡಿಪುರದ 45 ವರ್ಷದ ಮಹಿಳೆ, ನಂಜನಗೂಡು ಪಟ್ಟಣದ 78 ವರ್ಷದ ಮಹಿಳೆ ಕೋವಿಡ್ ಆಸ್ಪತ್ರೆಯಯಲ್ಲಿ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ. ಇದೂವರೆಗೂ ಕೋವಿಡ್ ಸೋಂಕಿತರು ಮೃತಪಟ್ಟಿದ್ದರೆ, ದೃಡೀಕೃತ ಕೋವಿಡ್ ಪಾಸಿಟೀವ್ ರೋಗಿಯು ಕೋವಿಡೇತರ ಕಾರಣದಿಂದ 20 ಮಂದಿ ಸಾವನ್ನಪ್ಪದ್ದಾರೆ ಎಂದು ಚಾಮರಾಜನಗರ ಜಿಲ್ಲಾಡಳಿತ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

VIAಚಾಮರಾಜನಗರ ಜಿಲ್ಲೆಯಲ್ಲಿ 534 ಮಂದಿ ಕೋರೊನಾ ದೃಡ; 169994 ಮಂದಿಗೆ ಲಸಿಕೆ; 10 ಮಂದಿ ದುರ್ಮರಣ
SOURCEಚಾಮರಾಜನಗರ ಜಿಲ್ಲೆಯಲ್ಲಿ 534 ಮಂದಿ ಕೋರೊನಾ ದೃಡ; 169994 ಮಂದಿಗೆ ಲಸಿಕೆ; 10 ಮಂದಿ ದುರ್ಮರಣ
Previous articleಚಂಡಮಾರುತ ಅವಾಂತರ; ಅಲೆಗಳ ಅಬ್ಬರ ಹೆಚ್ಚಾಗಿ ಮನೆಗಳಿಗೆ ನುಗ್ಗಿದ ನೀರು!
Next articleಡೈರಿ ಸಿಬ್ಬಂದಿಗಳಿಗೆ ಕೋರೊನಾ; ಡೈರಿ ವಹಿವಾಟು ಸ್ಥಗಿತ: ಕಂಗಲಾದ ಹಾಲು ಉತ್ಪಾದಕರು!

LEAVE A REPLY

Please enter your comment!
Please enter your name here