Home District ಕಿಲ್ಲರ್ ಕೊರೋನಾ ಆರ್ಭಟ; ಸಂಪೂರ್ಣ ಲಾಕ್ ಡೌನ್ ಗೆ ಜಿಲ್ಲಾ ಜನತೆ ಸ್ಪಂದನೆ

ಕಿಲ್ಲರ್ ಕೊರೋನಾ ಆರ್ಭಟ; ಸಂಪೂರ್ಣ ಲಾಕ್ ಡೌನ್ ಗೆ ಜಿಲ್ಲಾ ಜನತೆ ಸ್ಪಂದನೆ

ಬುಧವಾರ ಚಾಮರಾಜನಗರ ಜಿಲ್ಲೆಯಲ್ಲಿ 576 ಮಂದಿ ಕೋರೊನಾ ದೃಢ; 3673 ಸಕ್ರಿಯ ಪ್ರಕರಣ

378
0

ವರದಿ; ನಾ. ಅಶ್ವಥ್ ಕುಮಾರ್

ಚಾಮರಾಜನಗರ : ಕೋರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾ ಟಾಸ್ಕ್ ಪೋಸ್ಟ್ ಸೂಚನೆಯಂತೆ ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಕರೆಗೆ ಮೊದಲ ದಿನ ಜಿಲ್ಲೆಯ ಜನತೆ ಸ್ಪಂಧನೆ ನೀಡಿದ್ದಾರೆ.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸದಾ ಗಿಜಿಗುಡುತ್ತಿದ್ದ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿಗಳಲ್ಲಿ ಜನ ದಟ್ಟಣೆ ಇಲ್ಲದೆ ಬಿಕೋ ಎನ್ನುತ್ತಿದ್ದವು. ತಳ್ಳು ಗಾಡಿಗಳಲ್ಲಿ ತರಕಾರಿ ಮಾರಾಟವೂ ಸಹ ವಿರಳವಾಗಿತ್ತು.

ಗುರುವಾರ , ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ ಡೌನ್ ಗೆ ಜಿಲ್ಲಾ ಟಾಸ್ಕ್ ಪೋರ್ಸ್ ನಿರ್ಧಾರ ಕೈಗೊಂಡಿದ್ದರಿಂದ ಗುರುವಾರ ಬೆಳಗ್ಗೆ ಚಾಮರಾಜನಗರ ಜಿಲ್ಲೆಯ ಬಹುತೇಕ ಕಡೆ ಅಕ್ಷರಃ ಸ್ವಯಂ ಘೋಷಿತ ಬಂದ್ ನಂತ್ತಿತ್ತು ವಾತಾವರಣ.

ಎಲ್ಲಾ ದಿನಸಿ ಅಂಗಡಿಗಳು ಬಾಗಿಲು ಹಾಕಿದ್ದವು, ಒಂದೆರಡು ತಳ್ಳು ಗಾಡಿಯಲ್ಲಿ ತರಕಾರಿ ಮಾರಾಟವಾಗುವುದನ್ನು ಬಿಟ್ಟರೆ ಬೇರೆಲ್ಲವೂ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಸಾರ್ವಜನಿಕರು ಸಹ ರಸ್ತೆಗಿಳಿಯದೆ ಟಾಸ್ಕ್ ಪೋರ್ಸ್ ಕರೆ ನೀಡಿದ್ದ ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಗೆ ಸ್ಪಂಧಿಸಿದ್ದಾರೆ.

ಎಲ್ಲಿ ನೋಡಿದರು ಬಿಕೋ ಎನ್ನುವ ದೃಶ್ಯ ಕಂಡು ಬರುತ್ತಿತ್ತು. ಸಾಮಾನ್ಯವಾಗಿ ಹೆಚ್ಚಾಗಿ ತಿರುಗಾಡುವ ಬಡಾವಣೆಗಳಿಗೆ ಪೊಲೀಸರು ಹಗ್ಗ ಕಟ್ಟಿ ತಡೆಗೋಡೆ ಮಾದರಿ ರಚಿಸಿದ್ದರಿಂದ ದ್ವಿಚಕ್ರವಾಹನಗಳು ಸಂಚಾರ ಕಡಿಮೆ ಇದ್ದರೂ ಸಹ, ಕೆಲವರು ಅಡ್ಡ ದಾರಿಯಲ್ಲಿ ರಸ್ತೆಗೆ ಬರುತ್ತಿದ್ದರು.

ಕಳೆದ 15 ದಿನಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನಾ ಸೋಂಕು ಅಧಿಕವಾಗಿ ಸಾವಿನ ಪ್ರಮಾಣವೂ ಸಹ ಹೆಚ್ಚಾಗಿತ್ತು. ಇದನ್ನೆಲ್ಲಾ ಮನಗಂಡ ಜಿಲ್ಲಾ ಉಸ್ತುವಾರಿ ನೇತೃತ್ವದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಆರೋಗ್ಯ ಅಧಿಕಾರಿಗಳು ಮತ್ತು ಇನ್ನಿತರ ಅಧಿಕಾರಿಗಳ ಸಮ್ಮುಖದಲ್ಲಿ ನಿರ್ಧಾರ ಕೈಗೊಂಡಿರುವಂತೆ ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಕರೆಗೆ ಜನತೆ ಸ್ಪಂಧಿಸಿದ್ದಾರೆ.

ಕಳೆದ ವಾರವೂ ಸಹ ವಾರದ ಕೊನೆಯ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಗೆ ಉತ್ತಮ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.

ಗುರುವಾರದಿಂದ ಭಾನುವಾರದ ವರೆಗೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ ಡೌನ್ ಹಿನ್ನಲೆಯಲ್ಲಿ ಬುಧವಾರವೇ ಚಾಮರಾಜನಗರ ಜಿಲ್ಲೆಯ ಜನತೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದಿದ್ದು ಕಂಡು ಬಂದಿತು.

VIAಬುಧವಾರ ಚಾಮರಾಜನಗರ ಜಿಲ್ಲೆಯಲ್ಲಿ 576 ಮಂದಿ ಕೋರೊನಾ ದೃಢ; 3673 ಸಕ್ರಿಯ ಪ್ರಕರಣ
SOURCEಬುಧವಾರ ಚಾಮರಾಜನಗರ ಜಿಲ್ಲೆಯಲ್ಲಿ 576 ಮಂದಿ ಕೋರೊನಾ ದೃಢ; 3673 ಸಕ್ರಿಯ ಪ್ರಕರಣ
Previous articleಸದ್ಯಕ್ಕೆ ರಾಜ್ಯದಲ್ಲಿ ಶಾಲೆಗಳು ಓಪನ್ ಆಗುವುದಿಲ್ಲ; ಸುರೇಶ್ ಕುಮಾರ್
Next articleಜ್ಯೂ.ಎನ್‌ಟಿಆರ್ ಗೆ ಬರ್ತಡೇ ಬ್ಯಾಷ್: ಕೋಮ್‌ರಾಮ್ ಭೀಮ್ ಆಗಿ ಟಾಲಿವುಡ್ ಸಿಂಹಾದ್ರಿ ಎಂಟ್ರಿ..!

LEAVE A REPLY

Please enter your comment!
Please enter your name here