Home District ಚಾಮರಾಜನಗರದಲ್ಲಿ ಇಳಿಮುಖ ಕಂಡ ಸೋಂಕಿತರ ಸಂಖ್ಯೆ!

ಚಾಮರಾಜನಗರದಲ್ಲಿ ಇಳಿಮುಖ ಕಂಡ ಸೋಂಕಿತರ ಸಂಖ್ಯೆ!

ಚಾಮರಾಜನಗರದಲ್ಲಿ ಇಳಿಮುಖ ಕಂಡ ಸೋಂಕಿತರ ಸಂಖ್ಯೆ!

449
0

ವರದಿ: ನಾ. ಅಶ್ವಥ್ ಕುಮಾರ್

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಸಂಪರ್ಕ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೋರೊನಾ ಸೋಂಕು ಹಾಗೂ ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಬುಧವಾರ ಒಂದೇ ದಿನ 576 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಕೋರೊನಾ ಸೋಂಕಿನಿಂದ ಬಳಲುತ್ತಿದ್ದ 07 ಮಂದಿ ಸಾವನ್ನಪ್ಪಿದ್ದು ಇದೂವರೆಗೂ 323 ಸೋಂಕಿತರು ಮೃತಪಟ್ಟಿದ್ದಾರೆ.

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಜಿಲ್ಲೆಯಲ್ಲಿ ಸಕ್ರೀಯ ಕೋರೋನಾ ಸೋಂಕಿತರ ಸಂಖ್ಯೆ 3673ಕ್ಕೆ ಇಳಿದಿದೆ.ಚಾಮರಾಜನಗರ ಜಿಲ್ಲೆಯಲ್ಲಿ ಬುಧವಾರ ಕೋರೊನಾ ಸೋಂಕಿನಿಂದ ಗುಣಮುಖರಾಗಿ 359 ಮಂದಿ ಬಿಡುಗಡೆಹೊಂದಿದ್ದು, ಇದೂವರೆಗೂ ಕೋರೊನಾ ಸೋಂಕಿನಿಂದ 17261 ಮಂದಿ ಗುಣಮುಖರಾಗಿದ್ದಾರೆ. ಮಂಗಳವಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಿಂದ 305 ಹಾಗೂ ರ್ಯಾಪಿಡ್ ಪರೀಕ್ಷೆಯಿಂದ 38 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ .

ಬುಧವಾರ ಹೊಸದಾಗಿ ಕೋರೊನಾ ಸೋಂಕು ಪತ್ತೆಯಾದ 576 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 238 , ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 140 , ಕೋಳ್ಳೆಗಾಲ ತಾಲ್ಲೂಕಿನಲ್ಲಿ 108 , ಹನೂರು ತಾಲ್ಲೂಕಿನಲ್ಲಿ 48, ಯಳಂದೂರು ತಾಲ್ಲೂಕಿನಲ್ಲಿ 37 ಮಂದಿ, ಹೊರ ಜಿಲ್ಲೆಯ ಐವರು ಸೇರಿ 576 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಮಂಗಳವಾರ 703 ಮಂದಿ ಕೋರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದು, ಇದೂವರೆಗೂ 172884 ಮಂದಿ ಕೊರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದಾರೆ .

ಕೋರೊನಾ ಸೋಂಕಿನಿಂದ ಮೃತವರೆಂದರೆ, ಚಾಮರಾಜನಗರ ಪಟ್ಟಣದ 34 ಪುರುಷ, ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ 57 ವರ್ಷದ ಮಹಿಳೆ, ಕೊಳ್ಳೇಗಾಲ ತಾಲ್ಲೂಕಿನ ಕೆಂಪಯ್ಯನಪುರ 50 ವರ್ಷದ ಪುರುಷ, ಹನೂರು ಪಟ್ಟಣದ 65 ವರ್ಷದ ಮಹಿಳೆ, 60 ವರ್ಷದ ಮಹಿಳೆ, ತಾಲ್ಲೂಕಿನ ಹೂಗ್ಯಂ ಗ್ರಾಮದ 30 ವರ್ಷದ ಮಹಿಳೆ, ಸಿದ್ದಾಪುರ ಗ್ರಾಮದ 50 ವರ್ಷದ ಮಹಿಳೆ,
ಕೋವಿಡ್ ಆಸ್ಪತ್ರೆಯಯಲ್ಲಿ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ. ಇದೂವರೆಗೂ ಕೋವಿಡ್ ಸೋಂಕಿತರು ಮೃತಪಟ್ಟಿದ್ದರೆ, ದೃಡೀಕೃತ ಕೋವಿಡ್ ಪಾಸಿಟೀವ್ ರೋಗಿಯು ಕೋವಿಡೇತರ ಕಾರಣದಿಂದ 20 ಮಂದಿ ಸಾವನ್ನಪ್ಪದ್ದಾರೆ ಎಂದು ಚಾಮರಾಜನಗರ ಜಿಲ್ಲಾಡಳಿತ ಹೊರಡಿಸಿದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

VIAಚಾಮರಾಜನಗರದಲ್ಲಿ ಇಳಿಮುಖ ಕಂಡ ಸೋಂಕಿತರ ಸಂಖ್ಯೆ!
SOURCEಚಾಮರಾಜನಗರದಲ್ಲಿ ಇಳಿಮುಖ ಕಂಡ ಸೋಂಕಿತರ ಸಂಖ್ಯೆ!
Previous articleಕಾಂಗ್ರೆಸ್ ನಿಂದ ದೇಶಕ್ಕೆ ಅವಮಾನದ ಕೆಲಸ; ಶೋಭಾ ಕರಂದ್ಲಾಜೆ ಆಕ್ರೋಶ
Next articleಸರ್ಕಾರದ ವಿರುದ್ಧ ಕೆಂಡಾಮಂಡಲವಾದ ಡಿಕೆ ಸುರೇಶ್!

LEAVE A REPLY

Please enter your comment!
Please enter your name here