Home District ಲಾಕ್ ಡೌನ್ ಹಿನ್ನಲೆ : ಇಂದಿರಾ ಕ್ಯಾಂಟೀನಲ್ಲಿ ಉಚಿತ ತಿಂಡಿ-ಊಟ ವಿತರಣೆ

ಲಾಕ್ ಡೌನ್ ಹಿನ್ನಲೆ : ಇಂದಿರಾ ಕ್ಯಾಂಟೀನಲ್ಲಿ ಉಚಿತ ತಿಂಡಿ-ಊಟ ವಿತರಣೆ

569
0

ಚಾಮರಾಜನಗರ : ಲಾಕ್ ಡೌನ್ ಸಮಯದಲ್ಲಿ ಸಾರ್ವಜನಿಕರು ಹಸಿವಿನಿಂದ ಬಳಲಬಾರದು ಎನ್ನುವ ಸರ್ಕಾರದ ಆಶಯದಂತೆ ಮಂಗಳವಾರದಿಂದ ಜಿಲ್ಲೆಯ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತವಾಗಿ ಆಹಾರ ವಿತರಣೆ ಮಾಡಲಾಗುತ್ತಿದೆ.
ಚಾಮರಾಜನಗರ ಜಿಲ್ಲೆಯಲ್ಲಿನ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಮಂಗಳವಾರದಿಂದ ಪ್ರತಿ ನಿತ್ಯ ಬೆಳಗ್ಗೆ 650 ಮಂದಿಗೆ ತಿಂಡಿ, ಹಾಗೂ ಮಧ್ಯಾಹ್ನ 650 ಮಂದಿಗೆ ಊಟ ಹಾಗೂ ರಾತ್ರಿ 500 ಮಂದಿಗೆ ಊಟವನ್ನು ಪಾರ್ಸಲ್ ಮೂಲಕ ವಿತರಣೆ ಮಾಡಲು ಸರ್ಕಾರದ ನಿರ್ದೇಶನದಂತೆ ವಿತರಣೆ ಮಾಡಲಾಗುತ್ತಿದೆ.

ಹಸಿದು ಬರುವವರಿಗೆ ಅನ್ನ ನೀಡುವ ಮಹತ್ವದ ಯೋಜನೆಯಾಗಿ ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಆಹಾರ ದೊರಕಲಿದೆ. ಲಾಕ್ ಡೌನ್ ಸಮಯದಲ್ಲಿ ಹೋಟೆಲ್ ಗಳು ಬಾಗಿಲು ಹಾಕಿದ್ದು, ಕೂಲಿ ಕಾರ್ಮಿಕರಿಗೆ ಮತ್ತು ನೆರೆ ಹೊರೆಯವರಿಗೆ ಸರಿಯಾಗಿ ಆಹಾರ ಸಿಗದೇ ಪರದಾಟವನ್ನು ತಪ್ಪಿಸುವ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಪ್ರತಿ ನಿತ್ಯ ಬೆಳಗ್ಗೆ 7.30 ರಿಂದ 9 ಗಂಟೆಯ ತನಕ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯ ತನಕ ಊಟ ಹಾಗೂ ಸಂಜೆ 7 ರಿಂದ 9 ರ ತನಕ ರಾತ್ರಿ ಉಪಹಾರ ವಿತರಣೆ ಮಾಡಲು ಇಂದಿರಾ ಕ್ಯಾಂಟೀನ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರವನ್ನು ನಿರ್ಗತಿಕರು ಮತ್ತು ಸಾರ್ವಜನಿಕರು ಪಡೆಯುತ್ತಿದ್ದಾರೆ.

Previous articleಇಂದು ಚಾಮರಾಜನಗರ ಜಿಲ್ಲೆಯಲ್ಲಿ 669 ಮಂದಿ ಕೋರೊನಾ ದೃಢ; 4572 ಸಕ್ರಿಯ ಪ್ರಕರಣ
Next articleಚಾಮರಾಜನಗರದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ : ಕಳೆದ 24 ಗಂಟೆಯಲ್ಲಿ 11 ಮಂದಿ ಸೋಂಕಿಗೆ ಬಲಿ

LEAVE A REPLY

Please enter your comment!
Please enter your name here