ಮುಖ್ಯಮಂತ್ರಿ ಬೊಮ್ಮಾಯಿ ಬದಲಾವಣೆ: ಪರೋಕ್ಷವಾಗಿ ಸ್ಪೋಟಕ ಹೇಳಿಕೆ ನೀಡಿದ ಸುರೇಶ್ ಗೌಡ

ಜಿಲ್ಲೆ

ತುಮಕೂರು: ಮುಖ್ಯಮಂತ್ರಿ  ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ. ತುಮಕೂರು ಜಿಲ್ಲೆಯ ಹಾಲಗೊಂಡನಹಳ್ಳಿ ಕೆರೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ಮುಖ್ಯಮಂತ್ರಿ ಒಳ್ಳೆ ಕೆಲಸ ಮಾಡುತಿದ್ದಾರೆ. ಆದ್ರೆ ಪಾರ್ಟಿ ಏನ್ ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ನಾವು ಬದ್ದರಾಗಿದ್ದೇವೆ. ಆಗಸ್ಟ್ 15ರ ಒಳಗೆ ಎಲ್ಲವೂ ಬದಲಾವಣೆ ಆಗಬಹುದು ಎನ್ನುವ ಅಭಿಪ್ರಾಯ ನನ್ನದು ಎಂದು ಹೇಳಿದರು.

ಅದಲ್ಲದೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಆಗ್ತಾರೆ ಅನ್ನೋದು ನನಗೆ‌ ಗೊತ್ತಿಲ್ಲ ಆದ್ರೆ ಅವರು ಮುಖ್ಯಮಂತ್ರಿ ಆದರೆ ನನಗೆ ಸಂತೋಷ ಎಂದರು. ಇನ್ನೂ ಬಿಜೆಪಿ ಪಕ್ಷ ವಿಧಾನ ಸಭಾ ಚುನಾವಣೆ 6-8 ತಿಂಗಳು ಇರಬೇಕಾದರೂ ಮುಖ್ಯಮಂತ್ರಿ ಬದಲಾವಣೆ ಮಾಡಿದ ಉದಾಹರಣೆ ಇದೆ. ಆದರಿಂದ ಬಿಜೆಪಿ 2023 ರಲ್ಲಿ ಮತ್ತೇ ಅಧಿಕಾರ ಹಿಡಿಯುವ ಉದ್ದೇಶದಿಂದ ಪಕ್ಷದಲ್ಲಿ ಕೆಲ ಬದಲಾವಣೆ ಆಗಬಹುದು ಎಂದು ಹೇಳಿದರು.

Leave a Reply

Your email address will not be published.