Home District ಕಾಲುಜಾರಿ ಕೃಷಿಹೊಂಡದಲ್ಲಿ ನೀರುಪಾಲಾದ ಅಜ್ಜಿ ಮೊಮ್ಮಗಳು!

ಕಾಲುಜಾರಿ ಕೃಷಿಹೊಂಡದಲ್ಲಿ ನೀರುಪಾಲಾದ ಅಜ್ಜಿ ಮೊಮ್ಮಗಳು!

468
0

ಚಿಕ್ಕಬಳ್ಳಾಪುರ: ಕೃಷಿಹೊಂಡದಲ್ಲಿ ಬಿದ್ದು ಅಜ್ಜಿ ಮೊಮ್ಮಗಳ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಬಯಲು ಬಹಿರ್ದೆಸೆಗೆ ಹೋಗಿದ್ದ ಅಜ್ಜಿ ಕಾಲು ಜಾರಿ ಕೃಷಿಹೊಂಡದಲ್ಲಿ ಬಿದ್ದಿದ್ದಾರೆ. ಕೃಷಿಹೊಂಡದಲ್ಲಿ ಕಾಲು ತೊಳೆದುಕೊಳ್ಳುವಾಗ ಕೃಷಿ ಹೊಂಡಕ್ಕೆ ಬಿದ್ದ ದುರ್ಘಟನೆ ನಡೆದಿದೆ. ಕೃಷಿಹೊಂಡದಲ್ಲಿ ಬಿದ್ದ ಅಜ್ಜಿಯನ್ನು ರಕ್ಷಣೆ ಮಾಡಲು ಹೋದ ಮೊಮ್ಮಗಳು ದುರಾದೃಷ್ಟವಶಾತ್ ನೀರುಪಾಲಾಗಿದ್ದಾಳೆ.

ಈ ದುರ್ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ‌ತಾಲ್ಲೂಕಿನ ಪಿಂಜಾರಹಳ್ಳಿಯಲ್ಲಿ. ಮಂಜುಳ(42) ಮತ್ತು ಲಕ್ಷ್ಮಿ (6) ಸಾವನ್ನಪ್ಪಿದ ದುರ್ದೈವಿಗಳು. ಪಿಂಜಾರಹಳ್ಳಿ ಗ್ರಾಮದ ಹೊರವಲಯದ ನರಸರೆಡ್ಡಿ ಎಂಬುವರ ಕೃಷಿಹೊಂಡದಲ್ಲಿ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಆರೋಗ್ಯ ಸಚಿವರನ್ನು ದೂರವಿಟ್ರಾ ಸಿಎಂ?; ಪ್ರಜಾ ಟಿವಿ ವಿಶೇಷ ವರದಿ
Next articleಕೊರೋನಾ ಲಾಕ್ ಡೌನ್ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದೇನು?

LEAVE A REPLY

Please enter your comment!
Please enter your name here