Home Crime ಪುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿ ಹಣ ಕಸಿದು ಎಸ್ಕೇಪ್ ಆದ ಆಸಾಮಿ ; 24 ಗಂಟೆಗಳಲ್ಲಿ...

ಪುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿ ಹಣ ಕಸಿದು ಎಸ್ಕೇಪ್ ಆದ ಆಸಾಮಿ ; 24 ಗಂಟೆಗಳಲ್ಲಿ ಆರೋಪಿ ಅಂದರ್

312
0
SHARE

ಚಿಕ್ಕಬಳ್ಳಾಪುರ: ತನ್ನ ಬೊಲೇರೋ ವಾಹನಕ್ಕೆ ಪೆಟ್ರೋಲ್ ಬಂಕ್ ನಲ್ಲಿ ಪುಲ್ ಟ್ಯಾಂಕ್ ಮಾಡಿಸಿಕೊಂಡಿದ್ದ ಖಧೀಮನೋರ್ವ ಬಂಕ್ ನ ಕ್ಯಾಷಿಯರ್ ಬಳಿ 14 ಸಾವಿರ ರೂಪಾಯಿ ಹಣವನ್ನೂ ಕಸಿದುಕೊಂಡು ಹೋಗಿದ್ದ ಘಟನೆ ಇದೇ ಜುಲೈ 9ರಂದು ರಾತ್ರಿ  ಚಿಕ್ಕಬಳ್ಳಾಪುರ ಹೊರವಲಯದ ಹಾರೋಬಂಡೆ ಬಳಿ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಡೆತ್ತು.

ಘಟನೆ ಸಂಬಂಧ ಪೆಟ್ರೋಲ್ ಬಂಕ್ ನ ಕ್ಯಾಷಿಯರ್ ಹುನೇಗಲ್ ವಿನಯ್ ಕುಮಾರ್ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರನ್ನು ನೀಡಿದ್ದರು. ಕೂಡಲೇ ಎಚ್ಚೆತ್ತ ಚಿಕ್ಕಬಳ್ಳಾಪುರ ಪೊಲೀಸರು ಆರೋಪಿಯನ್ನ 24 ಗಂಟೆಗಳೊಳಗೆ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಧಾರವಾಡ ಜಿಲ್ಲೆಯ ನವಲಗುಂದದ ಈಶ್ವರ್ ಮಾಡವಾಲ್ ಬಿನ್ ರಾಮಪ್ಪ (34) ಎಂದು ಗುರುತಿಸಲಾಗಿದ್ದು ಈ ಆರೋಪಿಯು ಪ್ರಸ್ತುತ ಬೆಂಗಳೂರಿನ ವಿನಾಯಕ ನಗರದ ಅಂದರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಲಿಂಗದೀರನಹಳ್ಳಿಯ ವಾಸವಾಗಿದ್ದ.

ಕಳೆದ ಗುರುವಾರ  ರಾತ್ರಿ 10:30ರ ಸಂದರ್ಭದಲ್ಲಿ ಆರೋಪಿ ಈಶ್ವರ್, ನಗರದ ಹೊರವಲಯದ ಬೆಂಗಳೂರು ಹೈದ್ರಾಬಾದ್ ರಾಷ್ಟ್ರೀಯ ರಸ್ತೆ ಹಾರೋಬಂಡೆ ಸಮೀಪ ಇರುವ ಮಾರುತಿ ಎಂಟರ್ ಪ್ರೈಸಸ್ ಪೆಟ್ರೋಲ್ ಬಂಕ್‌ನಲ್ಲಿ ತಾನು ಚಲಾಯಿಸಿಕೊಂಡು ಬಂದಿದ್ದ ಬೊಲೇರಾ ವಾಹನಕ್ಕೆ 3,630 ರೂಪಾಯಿ ಮೌಲ್ಯದ ಪುಲ್ ಟ್ಯಾಂಕ್ ಇಂಧನ ತುಂಬಿಸಿದ್ದಾನೆ. ನಂತರ ಆರೋಪಿ ಈಶ್ವರ್ ಕ್ಯಾಷಿಯರ್‌ಗೆ ಅದರ ಹಣ ಕೊಡದೇ ಸತಾಯಿಸಿದ್ದು ಮಾತ್ರವಲ್ಲದೇ ತನ್ನ ವಾಹನವನ್ನು ಕ್ಯಾಷಿಯರ್ ವಿನಯ್ ಕುಮಾರ್ ಮೇಲೆ ಹತ್ತಿಸಲು ಯತ್ನಿಸಿ ಕ್ಯಾಷಿಯರ್ ನನ್ನು ಭಯಭೀತಗೊಳಿಸಿ ಆತನ ಬಳಿಯಿದ್ದ 14,000 ರೂ, ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಉಂಡು ಹೋದ ಕೊಂಡೂ ಹೋಗಿದ್ದ ಖತರ್ನಾಕ್ ಖಧೀಮ ಇದೀಗ ಜೈಲುಕಂಬಿ ಎಣಿಸುತ್ತಿದ್ದಾನೆ.

LEAVE A REPLY

Please enter your comment!
Please enter your name here