Home District ಮನೆಯೊಳಗೆ ನುಗ್ಗಿದ ಚಿರತೆ; ಕಂಗಾಲಾದ ಜನ!

ಮನೆಯೊಳಗೆ ನುಗ್ಗಿದ ಚಿರತೆ; ಕಂಗಾಲಾದ ಜನ!

ಮನೆಯೊಳಗೆ ನುಗ್ಗಿದ ಚಿರತೆ; ಕಂಗಾಲಾದ ಜನ!

323
0

ಚಿತ್ರದುರ್ಗದ ಮುದ್ದಾಪುರ ಗ್ರಾಮದಲ್ಲಿ ಇಂದು ಇಡೀ ಗ್ರಾಮಕ್ಕೆ ಗ್ರಾಮವೇ ಅತಂಕದಲ್ಲಿ‌ ಮುಳುಗಿತ್ತು. ಯಾಕೆ ಅಂತೀರಾ? ಇಲ್ಲಿದೆ ನೋಡಿ ವಿವರ……

ಬೆಳ್ಳಂಬೆಳಗ್ಗೆ ಮುದ್ದಾಪುರದ ಇಡೀ ಗ್ರಾಮಕ್ಕೆ ಗ್ರಾಮವೇ ಆತಂಕದಲ್ಲಿ‌ ಮುಳುಗಿ ಹೋಗಿತ್ತು. ಚಿರತೆಯೊಂದು ಮನೆಯೊಳಗೆ ನುಗ್ಗಿದ್ದು, ಆತಂಕಕ್ಕೆ ಕಾರಣವಾಗಿತ್ತು. ಬೆಳಗಿನ ಜಾವದ ಸುಮಾರು 5.30 ರ ಸಮಯದಲ್ಲಿ ಮುದ್ದಾಒಉರದ ಚಿದಾನಂದ ಎಂಬುವರ ಮನೆಗೆ ನುಗ್ಗಿದ ಚಿರತೆ ಅಡುಗೆಮನೆಯ ಶೆಲ್ಫಿನಲ್ಲಿ ಜೋಡಿಸಲಾಗಿರುವ ಪಾತ್ರೆಗಳ ಮಧ್ಯದಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡಿದೆ. ಚಿರತೆ ಮನೆಯಲ್ಲಿರುವ ವಿಷಯ ತಿಳಿಯುತ್ತಿದ್ದಂತೆ ಮನೆ ಮಾಲೀಕ ಚಿದಾನಂದ ಹಾಗೂ ಪತ್ನಿ ಇಬ್ಬರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ನಂತರ ಮನೆಯಿಂದ ಚಿರತೆ ಹೊರಗೆ ಬರದಂತೆ ಮನೆಯ ಬಾಗಿಲು ಹಾಕಿದ್ದಾರೆ.

ಇದರಿಂದ ಚಿರತೆ ಮತ್ತೆ ಮನೆಯಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ವಿಷಯ ಇಡೀ ಗ್ರಾಮಕ್ಕೆ ಹಬ್ಬಿದೆ. ವಿಷಯ ತಿಳಿದ ಗ್ರಾಮಸ್ಥರು ಚಿದಾನಂದ್ ಅವರ ಮನೆಯ ಕಡೆಗೆ ಧಾವಿಸಿದ್ದಾರೆ. ನಂತರ ಗ್ರಾಮಸ್ಥರು ಅರಣ್ಯ ಇಲಾಕಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಬೋನು ಹಾಗೂ ಬಲೆಯ ಸಮೇತ ಗ್ರಾಮಕ್ಕೆ ಬಂದು ಚಿರತೆಯನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಮನೆಯಲ್ಲಿ ಇಬ್ವರೇ ಇದ್ದ ಪರಿಣಾಮ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಿರತೆಯನ್ನು ಹಿಡಿದು ಮತ್ತೆ ಅಧಿಕಾರಿಗಳು ಅರಣ್ಯದೊಳಗೆ ಬಿಡುವ ಕೆಲಸವನ್ನು ಮಾಡಿದ್ದಾರೆ.

VIAಮನೆಯೊಳಗೆ ನುಗ್ಗಿದ ಚಿರತೆ; ಕಂಗಾಲಾದ ಜನ!
SOURCEಮನೆಯೊಳಗೆ ನುಗ್ಗಿದ ಚಿರತೆ; ಕಂಗಾಲಾದ ಜನ!
Previous articleಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನತೆಗೆ ಶಾಪಗ್ರಸ್ಥ ಸರ್ಕಾರಗಳು; ಮಾಜಿ ಶಾಸಕ ಕೆ.ಎನ್.ರಾಜಣ್ಣ ಲೇವಡಿ
Next articleಶ್ರೀ ಕ್ಷೇತ್ರ ಸಿಗಂದೂರು ದೇವಾಲಯದ ಕಿತ್ತಾಟಕ್ಕೆ ಸಿಕ್ಕಿದೆ ಮತ್ತೊಂದು ಟ್ವಿಸ್ಟ್!

LEAVE A REPLY

Please enter your comment!
Please enter your name here