
ಎಂಟು ವರ್ಷಗಳ ಬಳಿಕ ಮೊದಲ ಬಾರಿಗೆ ಲೋಗೋ ಬದಲಿಸಿದ ‘’ಗೂಗಲ್’’ ಕ್ರೋಮ್ ಬ್ರೌಸರ್..!
ನವದೆಹಲಿ: ಎಂಟು ವರ್ಷಗಳಲ್ಲಿ ಮೊದಲ ಬಾರಿಗೆ ಗೂಗಲ್ ತನ್ನ ಕ್ರೋಮ್ ಬ್ರೌಸರ್ ಲೋಗೋವನ್ನು ಬದಲಾಯಿಸುತ್ತಿದೆ. ಗೂಗಲ್ ಕ್ರೋಮ್ನ ವಿನ್ಯಾಸಕ ಎಲ್ವಿನ್ ಹು ಟ್ವಿಟ್ಟರ್ನಲ್ಲಿ ಕ್ರೋಮ್ ಲೋಗೋ ಮೊದಲಿನಿಂದ ಇಲ್ಲಿವರೆಗೂ ಇದ್ದ ನೋಟವನ್ನು ಟ್ವೀಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಕ್ರೋಮ್ ಲೋಗೋ ಅಪ್ಡೇಟ್ ಆಗಿರುವುದನ್ನು ನಾವು ಗಮನಿಸಬಹುದು.ಈ ಟ್ವೀಟ್ನಲ್ಲಿ ಅವರು, 8 ವರ್ಷಗಳಲ್ಲಿ ಮೊದಲ ಬಾರಿಗೆ ಕ್ರೋಮ್ನ ಬ್ರ್ಯಾಂಡ್ ಐಕಾನ್ಗಳನ್ನು ರಿಫ್ರೆಶ್ ಮಾಡುತ್ತಿದ್ದೇವೆ.
ನಮ್ಮ ಕ್ರೋಮ್ ಹೊಸ ಐಕಾನ್ಗಳು ನಿಮ್ಮ ಸಿಸ್ಟಮ್ ಗಳಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳುತ್ತೆ ಎಂದು ಟ್ವೀಟ್ನಲ್ಲಿ ತಿಳಿಸಿದರು. ಈ ಹೊಸ ಲೋಗೋವನ್ನು ಸರಳೀಕರಿಸಿ, ಚಪ್ಪಟೆಗೊಳಿಸಲಾಗಿದೆ. ಲೋಗೋಗೆ ಬಳಸಿದ ಬಣ್ಣಗಳು ಹೆಚ್ಚು ಬ್ರೈಟ್ ಆಗಿದ್ದು, ವಿಭಿನ್ನವಾಗಿ ಕಾಣಿ ಸುತ್ತಿದೆ. ಅಲ್ಲದೆ ಲೋಗೋ ಮಧ್ಯದಲ್ಲಿ ಚೆಂಡಿನಂತಿರುವ ನೀಲಿ ಬಣ್ಣ ಹೆಚ್ಚು ಗಮನಾರ್ಹವಾಗಿದೆ. ವಿಂಡೋಸ್ 10 ಮತ್ತು 11 ರಲ್ಲಿ ಹೊಸ ವಿನ್ಯಾಸ ಕಾಣಿಸಿಕೊಳ್ಳಲಾಗುತ್ತಿದೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.