Home District CM ಆಗಬಹುದೆಂಬ ಆಸೆಯಿಂದ ಪಾರ್ಟಿ ಫಂಡ್ ಕೊಡದೇ ವಂಚಿಸಿದ್ರಾ H.C.ಮಹದೇವಪ್ಪ..!? ಕಾರ್ಯಕರ್ತರ ಜೊತೆಗಿನ ಸಂಭಾಷಣೆ ವೈರಲ್..!??

CM ಆಗಬಹುದೆಂಬ ಆಸೆಯಿಂದ ಪಾರ್ಟಿ ಫಂಡ್ ಕೊಡದೇ ವಂಚಿಸಿದ್ರಾ H.C.ಮಹದೇವಪ್ಪ..!? ಕಾರ್ಯಕರ್ತರ ಜೊತೆಗಿನ ಸಂಭಾಷಣೆ ವೈರಲ್..!??

1915
0
SHARE

ಸಮ್ಮಿಶ್ರ ಸರ್ಕಾರ ಬಂದ್ರೆ ತಾವು ಸಿಎಂ ಆಗಬಹುದೆಂಬ ಆಸೆಯಿಂದ ಹಾಸನ ಹಾಗು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪಾರ್ಟಿ ಫಂಡ್ ನೀಡದೇ ಲೋಕೋಪಯೋಗಿ ಸಚಿವ ಮಹದೇವಪ್ಪ ವಂಚಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ…

ಹಾಸನ ಜಿಲ್ಲೆ ಶ್ರವಣಬೆಳಗೊಳ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಸಿಎಸ್ ಪುಟ್ಟೇಗೌಡರದ್ದು ಎಂದು ಹೇಳಲಾಗುತ್ತಿರೋ ಆಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕ್ಷೇತ್ರದ ಕಾರ್ಯಕರ್ತರೊಬ್ಬರೊಟ್ಟಿಗೆ ತಮ್ಮ ಅಸಹಕಾಯಕತೆ ತೋಡಿಕೊಂಡಿರೋ ಪುಟ್ಟೇಗೌಡರು ಮಹದೇವಪ್ಪಾ ತಮಗೆ ಮೋಸಮಾಡಿದ್ದೇನೆ ಎಂದು ದೂರಿದ್ದಾರೆ…

ದೇವೇಗೌಡರ ಮಾತಿಗೆ ಮರುಳಾಗಿ ಕಾಂಗ್ರೇಸ್ ಕಾರ್ಯಕರ್ತರು ಹೆಚ್ಚು ಹಣ ಖರ್ಚುಮಾಡದಂತೆ ಪಾರ್ಟಿ ಫಂಡ್ ಕೊಡದೆ ಮೋಸಮಾಡಿದ್ದಾರೆ ಎಂದು ಆಪಾದಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಬಂದ್ರೆ, ನಿನ್ನನ್ನು ಸಿಎಂ ಮಾಡೋದಾದ್ರೆ ಮಾತ್ರ ಜೆಡಿಎಸ್ ಕಾಂಗ್ರೆಸ್ ಗೆ ಬೆಂಬಲ ನೀಡೋದಾಗಿ ಹಠ ಹಿಡಿತೀನಿ ಎಂದು ದೇವೇಗೌಡರು ಭರವಸೆಕೊಟ್ಟಿದ್ದಾರೆ…

ಅವರ ಮಾತು ನಂಬಿರೊ ಮಹದೇವಪ್ಪ ನಮಗೆಲ್ಲಾ ಹೀಗೆ ಮಾಡಿದ್ದಾರೆ. ಶ್ರವಣಬೆಳಗೊಳ ಕ್ಷೇತ್ರದಲ್ಲಿ ತಾವು ಸೋಲೋದು ನಿಶ್ಚಿತ ಎಂಬಂತಹ ಅಭಿಪ್ರಾಯ ಬರುವಂತಾ ಮಾತುಗಳನ್ನ ಪುಟ್ಟೇಗೌಡ ಪರೋಕ್ಷವಾಗಿ ಆಡಿದ್ದಾರೆ. ಪಕ್ಷದ ಕಾರ್ಯಕರ್ತನೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆ ಆಡಿಯೋ ಸಾಕಷ್ಟು ಚರ್ಚೆಗೆ ಗ್ರಾಸ ವಾಗಿದೆ…

LEAVE A REPLY

Please enter your comment!
Please enter your name here