Home Crime CM ತವರಿನಲ್ಲೇ ಭ್ರಷ್ಟಾಚಾರ ತಾಂಡವ..?! “ಸತ್ತವರ ಮಣ್ಣು ಮಾಡಲು ಮೀಸಲಿಟ್ಟ ಜಾಗದ ಮೇಲೂ ಕಣ್ಣು..?!

CM ತವರಿನಲ್ಲೇ ಭ್ರಷ್ಟಾಚಾರ ತಾಂಡವ..?! “ಸತ್ತವರ ಮಣ್ಣು ಮಾಡಲು ಮೀಸಲಿಟ್ಟ ಜಾಗದ ಮೇಲೂ ಕಣ್ಣು..?!

372
0
SHARE

ರಾಮನಗರ ಜಿಲ್ಲೆಯಲ್ಲಿ ಕಂದಾಯ ಅಧಿಕಾರಿಗಳ ಅಕ್ರಮ ಮಿತಿ ಮೀರುತ್ತಿದೆ. ಸರ್ಕಾರಿ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಪಹಣಿಯನ್ನು ನೀಡಿ ಅಕ್ರಮ ವೆಸಗಿರೋದು ಬಯಲಾಗಿದೆ.

ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಗ್ರಾಮ ಸರ್ವೆ ನಂ-512 ರ ಜಾಗವನ್ನು ಸರ್ಕಾರ ಗೋಮಾಳ ಎಂದು ಪರಿಗಣಿಸಿ 80 ವರ್ಷಗಳ ಹಿಂದೆಯೇ ಸ್ಮಶಾನಕ್ಕೆ ಮೀಸಲಿಟ್ಟಿದೆ. ಆದ್ರೆ ಕನಕಪುರ ತಾಲ್ಲೂಕಿನ ನೊಂದಣಿ ಅಧಿಕಾರಿಯ ನಿರ್ಲಕ್ಷ ಹಾಗೂ ಹಣದ ಆಸೆಯಿಂದಾಗಿ ಈ ಜಾಗ ಈಗ ಖಾಸಗಿ ಮಹಿಳೆಯ ಒಡೆತನದಲ್ಲಿದೆ.

ಕನಕಪುರ ತಾಲ್ಲೂಕಿನ ಸಿ.ಡಿ. ದೇವರಹಳ್ಳಿ ಗ್ರಾಮದ ನಿವಾಸಿ ಆರ್.ಕುಮಾರಸ್ವಾಮಿ ಅವರ ಪತ್ನಿ ಜಯರತ್ನಮ್ಮ ಎಂಬುವರ ಹೆಸರಿಗೆ ಸ್ಮಶಾನದ ಸರ್ಕಾರಿ ಜಾಗದ ಪಹಣಿಯನ್ನ ನೀಡಿ, ಸರ್ಕಾರಕ್ಕೆ ಮಣ್ಣೆರೆಚುವ ಕೆಲಸವನ್ನು ಮಾಡಿದ್ದಾರೆ.ರಾಮನಗರ ತಾಲ್ಲೂಕಿನಲ್ಲಿಯೂ ಅಧಿಕಾರಿಗಳು ಕೈ ಚಳಕ ತೋರಿದ್ದಾರೆ.

ಕೂಟಗಲ್ ಹೋಬಳಿಯ ಅರೇಹಳ್ಳಿ ಗ್ರಾಮದ ಜಯರಾಮೇಗೌಡ ಎಂಬವರಿಗೆ ಸೇರಿದ ಸರ್ವೆ ನಂ-255 ರ ರೈತರ ಪಹಣಿಯನ್ನ, ತಾಲ್ಲೂಕಿನ ಪತ್ರಬರಹಗಾರ ಹಾಗೂ ನೊಂದಣಿಯ ಅಧಿಕಾರಿಗಳು ನಕಲಿ ದಾಖಲೆ ಸೃಷ್ಠಿಮಾಡಿ, ಬೆಂಗಳೂರು ನಿವಾಸಿ ಪ್ರದೀಪ್ ಕುಮಾರ್ ಬಿನ್ ವೇಲು ಎಂಬುವರ ಹೆಸರಿಗೆ ಪಹಣಿಯನ್ನ ನೀಡಿದ್ದಾರೆ.

ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಕೆಪಿ ಅಗ್ರಹಾರ ಕಾರ್ಪೊರೇಟರ್ ಎಂ ಗಾಯತ್ರಿ ಬಿಬಿಎಂಪಿ ಸದಸ್ಯತ್ವ ಕಳೆದುಕೊಳ್ಳೋ ಭೀತಿಯಲ್ಲಿದ್ದಾರೆ.. ನಾಯಕ ಅಂತ ನಕಲಿ ಜಾತಿ ಪತ್ರ ನೀಡಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ದಿಸಿ ಗಾಯತ್ರಿ ಜಯಸಾಧಿಸಿದ್ರು..
ತರಗತಿಗೆ ಹೋಗದೇ ಇದ್ರೂ ಸಿದ್ದಲಿಂಗೇಶ್ವರ ವಿದ್ಯಾ ಸಂಸ್ಥೆಯಲ್ಲಿ ಸುಳ್ಳು ದಾಖಲೆ ಪಡೆದಿದ್ರು..

ಟಿಸಿಯಲ್ಲಿ ನಾಯಕ ಜಾತಿ ಅಂತ ನಮೂದಿಸಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ರು…ಸಧ್ಯಕ್ಕೆ ಕೆಪಿ ಅಗ್ರಹಾರ ಕಾರ್ಪೊರೇಟರ್ ಎಂ ಗಾಯತ್ರಿ ಜಾತಿ ಪತ್ರ ರದ್ದುಗೊಳಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ…

LEAVE A REPLY

Please enter your comment!
Please enter your name here