Home District CM ವಿರುದ್ದ ತಿರುಗಿ ಬಿದ್ದ ‘ಕೈ’ ಶಾಸಕರು..! ಮೈತ್ರಿ ಸರ್ಕಾರದಲ್ಲಿ ಶುರುವಾಯ್ತು ಅನುದಾನ ಫೈಟ್..! ಅಸಹಾಯಕತೆ...

CM ವಿರುದ್ದ ತಿರುಗಿ ಬಿದ್ದ ‘ಕೈ’ ಶಾಸಕರು..! ಮೈತ್ರಿ ಸರ್ಕಾರದಲ್ಲಿ ಶುರುವಾಯ್ತು ಅನುದಾನ ಫೈಟ್..! ಅಸಹಾಯಕತೆ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕರು..!

945
0
SHARE

ಮೈತ್ರಿ ಸರ್ಕಾರದ ಗೊಂದಲಗಳು ಇನ್ನು ಬಗೆಹರಿಯುವ ಲಕ್ಷಣ ಕಾಣ್ತಿಲ್ಲ.. ಕಾಂಗ್ರೆಸ್ ಶಾಸಕರಿಗೆ ಸಿಎಂ ಅನುದಾನ ತಾರತಮ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಸಾಕಷ್ಟು ಬಾರಿ ಆರೋಪ ಮಾಡುತ್ತಿದ್ರು.. ಆದ್ರೆ, ಇಂದು ಬಹಿರಂಗವಾಗಿಯೇ ತಮ್ಮ ಅಸಮಧಾನವನ್ನ ಹೊರಹಾಕಿದ್ದಾರೆ.. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಿಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಯಾರ ಗಮನಕ್ಕೂ ತಂದರೂ ಪ್ರಯೋಜನವಾಗ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ..

ಇನ್ನು ಸಚಿವ ಸ್ಥಾನದ ಆಕಾಂಕ್ಷಿಗಳಾದ ಬಿ ಸಿ ಪಾಟೀಲ್, ಆನಂದ್ ಸಿಂಗ್ ಸಿಎಂ ಭೇಟಿ ಮಾಡಿ ಕ್ಷೇತ್ರಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದ್ದಾರೆ.ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ಬಗೆಹರಿಯುವ ಲಕ್ಷಣಗಳು ಕಾಣಿಸ್ತಾನೆ ಇಲ್ಲ. ಇಷ್ಟು ದಿನ ಸಿಎಂ ವಿರುದ್ಧ ಕಾಂಗ್ರೆಸ್ ನಾಯಕರ ಬಳಿ ಅಸಮಾಧಾನ ಹೊರಹಾಕ್ತಿದ್ದ ಕಾಂಗ್ರೆಸ್ ಶಾಸಕರು ಇಂದು ಸಿಎಂ ಎದುರೇ ಅಸಮಾಧಾನ ಹೊರಹಾಕಿದ್ದಾರೆ.

ಮೈತ್ರಿ ಸರ್ಕಾರ ರಚನೆಯಾದ ನಂತ್ರ ಜೆಡಿಎಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ.‌ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ತಾರತ್ಯಮ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು.. ಹೀಗಾಗಿ, ಸಮನ್ವಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದ ಸಿದ್ದರಾಮಯ್ಯ, ಅನುದಾನ ಬಿಡುಗಡೆ ವಿಚಾರದಲ್ಲಿ ಜೆಡಿಎಸ್- ಕಾಂಗ್ರೆಸ್ ಶಾಸಕರು ಎಂದು ತಾರತಮ್ಯ ಮಾಡಬೇಡಿ ಎಂದು ಸಿಎಂ ಗೆ ಸಲಹೆ ನೀಡಿದ್ದರು.

ಆದರೂ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಅನುದಾನ ತಾರತಮ್ಯ ಮಾಡಲಾಗುತ್ತಿದೆ..ಈ ಬಗ್ಗೆ ಸುವರ್ಣಸೌಧದಲ್ಲಿ ಬಹಿರಂಗವಾಗಿಯೇ ಮಾತನಾಡಿರುವ ಬಂಗಾರಪೇಟೆ ಶಾಸಕ ನಾರಾಯಣ ಸ್ವಾಮಿ , ನಮ್ಗೆ ಅನುದಾನ ತಾರತ್ಯಮ ಮಾಡಲಾಗುತ್ತಿದೆ.. ಸಿಎಂ ಈ ರೀತಿ ಮಾಡಬಾರದು.. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಕಷ್ಟವಾಗಲಿದೆ ಎಂದು ಸಿಎಂ ವಿರುದ್ಧ ಗುಡುಗಿದ್ದಾರೆ.ಇನ್ನು ಇದೇ ವಿಚಾರಕ್ಕೆ ಸಿಎಂ ಹೆಚ್ ಡಿ ಕುಮಾರಸ್ವಾಮಿನ್ನ ಕಾಂಗ್ರೆಸ್ ಶಾಸಕರು ನೇರವಾಗಿ ಭೇಟಿ ಮಾಡಿ, ಅನುದಾನ ಬಿಡುಗಡೆಗೆ ಒತ್ತಾಯ ಮಾಡಿದ್ದಾರೆ..

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಬಿ ಸಿ ಪಾಟೀಲ್, ಆನಂದ್ ಸಿಂಗ್ ಬೆಳಗಾವಿಯ ಸರ್ಕಾರಿ ಅತಿಥಿ ಗೃಹದಲ್ಲಿ ಸಿಎಂ‌ ಹೆಚ್ ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ..ನಿಮ್ಮ ಬೆಂಬಲಕ್ಕೆ ನಾವೆಲ್ಲರೂ ನಿಂತಿದ್ದೇವೆ..ಆದರೂ ಅನುದಾನ ಬಿಡುಗಡೆ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ..

ಬೆಳಗಾವಿ ಅಧಿವೇಶನ ಮುಗಿಯುವ ಓಳಗೆ ಅನುದಾನ ತಾರತಮ್ಯ ಸರಿಪಡಿಸಿ ಎಂದು ಸಿಎಂಗೆ ಒತ್ತಾಯ ಮಾಡಿದ್ದಾರೆ.ಕಾಂಗ್ರೆಸ್ ಶಾಸಕರ ಅನುದಾನ ತಾರತಮ್ಯ ವಿಚಾರದಲ್ಲಿ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿದ್ದರೂ ,ಸಮಸ್ಯೆ ಬಗೆಹರಿದಿಲ್ಲ. ಇನ್ನು ಮುಂದಾದ್ರೂ ಸಿಎಂ ತಾರತಮ್ಯ ಮಾಡದೆ ಅನುದಾನ ಫೈಟ್‌ಗೆ ಬ್ರೇಕ್ ಹಾಕ್ತಾರಾ ಅಂತ ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here