Home District “CM ಹುದ್ದೆ ಸಾಕಾಗಿದೆ, ತಂತಿಯ ಮೇಲಿನ ನಡಿಗೆಯಂತಾದ CM ಹುದ್ದೆ” ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ...

“CM ಹುದ್ದೆ ಸಾಕಾಗಿದೆ, ತಂತಿಯ ಮೇಲಿನ ನಡಿಗೆಯಂತಾದ CM ಹುದ್ದೆ” ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ HDK..?!

758
0
SHARE

ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಿಎಂ ಕುರ್ಚಿ ಸಾಕಾಯ್ತಾ ಎಂಬ ಅನುಮಾನ ಕಾಡುತ್ತಿದೆ.ಏಕೆಂದ್ರೆ, ಮುಖ್ಯಮಂತ್ರಿ ಹುದ್ದೆ ಸಾಕಾಗಿದೆ ಹೋಗಿದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ದಿನೇ ದಿನೇ ಸರ್ಕಾರ ನಡೆಸುವುದು ತಂತಿಯ ಮೇಲಿನ ನಡಿಗೆಯಂತಾಗಿದೆ. ಕಾಂಗ್ರೆಸ್ ನಾಯಕರ ಕಾಟ ಹೆಚ್ಚಾಗುತ್ತಿದೆ.

ಪಕ್ಷಕ್ಕಾಗಿ ಈ ಹುದ್ದೆಯಲ್ಲಿ ಅನಿವಾರ್ಯವಾಗಿ ಮುಂದುವರಿಯುತ್ತಿದ್ದೇನೆ ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ.ಜನರಿಗಾಗಿ ವರ್ಷಗಟ್ಟಲೇ ಹಗಲು-ರಾತ್ರಿ ಎನ್ನದೇ ದುಡಿದಿದ್ದೇನೆ. ಈಗ ಜನರು ಬೇಡ ಅಂದ ಮೇಲೆ ರಾಜಕೀಯದಿಂದಲೇ ದೂರು ಆಗುತ್ತೇನೆ.

ನನಗಿನ್ನೂ ರಾಜ್ಯಾಧ್ಯಕ್ಷ ಸ್ಥಾನವನ್ನು ನಿಭಾಯಿಸಲು ಆಗ್ತಿಲ್ಲ.ಪಕ್ಷ ಗಟ್ಟಿಕೊಳಿಸಲು ಮಾತ್ರ ಅಧಿಕಾರದಲ್ಲಿ ಮುಂದುವರಿದಿದ್ದೇನೆ.ಎಲ್ಲರನ್ನೂ ಎದುರು ಹಾಕಿಕೊಂಡು ರೈತರ ಬೆಳೆ ಸಾಲನ್ನಾ ಮಾಡುತ್ತಿದ್ದೇನೆ. ಈ ಅಂಶವನ್ನು ಮನೆ ಮನೆಗೆ ಪರಿಣಾಮಕಾರಿಯಾಗಿ ತಲುಪಿಸಬೇಕು.

ಜುಲೈ 21ರಂದು ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ತಮ್ಮ ಅಂತರಂಗವನ್ನು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಆದ್ರೆ,ಹತಾಶೆಯಿಂದ ಮಾತನಾಡದಂತೆ ಹೆಚ್ಡಿಕೆಗೆ ಆಪ್ತರು ಮನವಿ ಮಾಡಿದರು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here