ಸಿಎಂ ಬೊಮ್ಮಾಯಿ ಆಡಳಿತಕ್ಕೆ ಒಂದು ವರ್ಷ: ವರುಷ ಹರುಷ

ಬೆಂಗಳೂರು

ಬಸವರಾಜ್ ಬೊಮ್ಮಾಯಿ  ರಾಜ್ಯ ಕಂಡ  ಜನಪ್ರಿಯ ನಾಯಕ.. ಬೊಮ್ಮಾಯಿ ಸಿಎಂ ಆಗಿ ಇಂದಿಗೆ ಒಂದು ವರ್ಷ ಪೂರೈಸಿದೆ. ಇವರ ಆಡಳಿತದಲ್ಲಿ ಅಭಿವೃದ್ಧಿ ಪರ್ವ ಮುಂದುವರಿದೆ. ರಾಜಕೀಯ ಕುಟುಂಬದಲ್ಲಿ ಜನಿಸಿದ ಬಸವರಾಜ್ ಬೊಮ್ಮಾಯಿಗೆ ರಾಜಕೀಯ ಕರಗತ.. ತಂದೆ ಎಸ್ .ಆರ್ . ಬೊಮ್ಮಾಯಿ ಕುಂದಗೊಳದಿಂದ ರಾಜ್ಯದ ಜನರನ್ನ ಪ್ರತಿನಿಧಿಸಿ ಸಿಎಂ ಆದವರು.  ಅಖಂಡ ಧಾರವಾಡ ಜಿಲ್ಲೆಯಲ್ಲಿ ರಾಜಕೀಯ ಜೀವನ ಆರಂಭಿಸಿ ಉನ್ನತ ಹುದ್ದೆಯನ್ನ ಅಲಂಕರಿಸಿದವರು. ಮಾಜಿ ಸಿಎಂ  ಎಸ್‌ ಆರ್‌ ಬೊಮ್ಮಾಯಿ ಹಾಗೂ ಗಂಗಮ್ಮ ದಂಪತಿಯ ಪುತ್ರನಾದ ಬಸವರಾಜ್‌ ಬೊಮ್ಮಯಿ 1960 ರ ಜ.28 ರಂದು ಜನಿಸಿದ್ರು.

ಬೊಮ್ಮಾಯಿ ಬಿ.ವಿ ಬೊಮ್ಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದ್ರು. ಮೂಲತಃ ವೃತ್ತಿಯಲ್ಲಿ ಕೃಷಿಕರು  ಮತ್ತು ಕೈಗಾರಿಕೋದ್ಯಮಿ. ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿರುವ ಅವರು, ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ದೇಶದಲ್ಲಿ ಶೇಕಡ ನೂರರಷ್ಟು ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತರುವುದು ಸೇರಿದಂತೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ ಬೊಮ್ಮಾಯಿ.

ಎಸ್ ,ಆರ್ . ಬೊಮ್ಮಾಯಿ ಅತ್ಯಲ್ಪ ಕಾಲ ಸಿಎಂ ಆಗಿದ್ರು ಅವರ ಮಟ್ಟುಗಳನ್ನ ಕಲಿತ ಬಸವರಾಜ್ ಬೊಮ್ಮಾಯಿ, ತಂದೆಯವರ ಹೆಸರಿನಲ್ಲೆ ರಾಜಕೀಯ ಪ್ರವೇಶ ಮಾಡಿದ್ರು. ಜನತಾ ದಳದಿಂದ ವಿಧಾನ ಪರಿಷತ್ ಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ ಆಗಿದ್ರು. ವಿಧಾನ ಪರಿಷತ್ ಅವಧಿ ಮುಗಿದ ಬಳಿಕ ಜನತಾದಳ ತೊರೆದು ಸಂಯುಕ್ತ ಜನತಾ ದಳದಲ್ಲೂ ಗುರುತಿಸಿಕೊಂಡಿದ್ರು. ಬಳಿಕ ಕೆಲ ಕಾಲ ರಾಜಕೀಯ ಅಜ್ಞಾತವಾಸ ಅನುಭವಿಸಿದ್ರು.

ಮಾಜಿ ಸಿಎಂ ಯಡಿಯೂರಪ್ಪ ಬಸವರಾಜ್ ಬೊಮ್ಮಾಯಿ ಅವರನ್ನ ಬಿಜೆಪಿಗೆ ಸೆಳೆಯುವಲ್ಲಿ ಸಫಲರಾದ್ರೂ.  ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಬೊಮ್ಮಾಯಿಗೆ ಕ್ಷೇತ್ರವನ್ನ ತೆರವು ಮಾಡಿಸಿಕೊಟ್ರು. ಶಿಗ್ಗಾಂವಿ ಅಂತ ಕ್ಷೇತ್ರದಲ್ಲಿ  ಬಸವರಾಜ್ ಬೊಮ್ಮಾಯಿ ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡೋ ಮೂಲಕ ಕೆಳಮನೆ ಪ್ರವೇಶ ಮಾಡಿದ್ರು. ಅಂದಿನಿಂದ ಇಂದಿನ ವರೆಗೂ ಬೊಮ್ಮಾತಿ ಶಿಗ್ಗಾಂವಿಯ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ.

2008ರಲ್ಲಿ ಬಿಜೆಪಿ ಸೇರ್ಪಡೆಯಾದ ಬೊಮ್ಮಾಯಿ ಬಿಜೆಪಿ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನ ಪಡೆಯುತ್ತಾ ಹೋದ್ರು. ಆರಂಭದಲ್ಲಿ ಜಲಸಂಪನ್ಮೂಲದಂತ ಖಾತೆ ಪಡೆದು ರಾಜ್ಯದ ಜನರಿಗೆ ನೀರಾವರಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ ತೋರಿಸಿದ್ರು. ತುಂಗಾ ಮೇಲ್ದಂಡೆ ಯೋಜನೆ ಇವರ ಕಾರ್ಯಕ್ಕೆ ಕೈ ಹಿಡಿದ ಕನ್ನಡಿಯಾಗಿದೆ. ಶಿವಮೊಗ್ಗ ಗಾಜನೂರಿನಿಂದ ಹಾವೃಇ ಜಿಲ್ಲೆಗೆ ನೀರನ್ನ ಕೊಂಡೊಯ್ದ ಖ್ಯಾತಿ ಇವರದ್ದು.

 

Leave a Reply

Your email address will not be published.