ಸಿಎಂ ಬೊಮ್ಮಾಯಿ ಅವರ ಆಡಳಿತ ನೋಡಿ ಕಾಂಗ್ರೆಸ್ ಅವರಿಗೆ ಭಯ: ಸಚಿವ ವಿ ಸೋಮಣ್ಣ

ಬೆಂಗಳೂರು

ಬೆಂಗಳೂರು; ಬೊಮ್ಮಾಯಿ ಅವರ ಆಡಳಿತ ನೋಡಿ ಕಾಂಗ್ರೆಸ್ ಅವರಿಗೆ ಭಯ ಆಗಿದೆ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವರು ಸುಳ್ಳಿನ ಸೌಧ ಕಟ್ಟಲು ಹೊರಟಿದ್ದಾರೆ. ಸಾವಿರಾರು ಸುಳ್ಳು ಹೇಳಿ ನಿಜ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್​ನವರ ಆಸೆ ಈಡೇರೋದೇ ಇಲ್ಲ ಎಂದರು.

ಇನ್ನೂ ಬೊಮ್ಮಾಯಿ ಕಾರ್ಯವೈಖರಿ ವರಿಷ್ಠರ ಗಮನ ಸೆಳೆದಿದೆ. ಈಗಾಗಲೇ ಸಿಎಂಗೆ ಹೈಕಮಾಂಡ್​ ಅಭಯದ ಸಂದೇಶ ಸಿಕ್ಕಿದೆ, ಬೊಮ್ಮಾಯಿ ಆಡಳಿತ ನೋಡಿ ಕಾಂಗ್ರೆಸ್​ನವರಿಗೆ ಭಯ ಆಗಿದೆ, ಅಧಿಕಾರ ಇಲ್ಲದೇ 10 ವರ್ಷ ಇರ್ರಿ ಅಂದ್ರೆ 10 ದಿನ ಇರೋಕಾಗ್ತಿಲ್ಲ, ಕಾಂಗ್ರೆಸ್​ನವರು ಅಧಿಕಾರವಿಲ್ಲದೇ ಒದ್ದಾಡ್ತಿದ್ದಾರೆ ಎಂದು ಸೋಮಣ್ಣ ಕಿಡಿಕಾಡಿದ್ದಾರೆ.

Leave a Reply

Your email address will not be published.