Home District CM HDK, ಉತ್ರಪ್ಪ ಮತ್ತು ಕುಟುಂಬದ ಹೆಸರಲ್ಲಿ ಸಂಪಲ್ಪ ಮಾಡಿಸಿದ D.K.ಶಿವಕುಮಾರ್ ಹೇಳಿದ್ದೇನು ಗೊತ್ತಾ..?!

CM HDK, ಉತ್ರಪ್ಪ ಮತ್ತು ಕುಟುಂಬದ ಹೆಸರಲ್ಲಿ ಸಂಪಲ್ಪ ಮಾಡಿಸಿದ D.K.ಶಿವಕುಮಾರ್ ಹೇಳಿದ್ದೇನು ಗೊತ್ತಾ..?!

846
0
SHARE

ಬಳ್ಳಾರಿ ಲೋಕಸಭಾ ಚುನಾವಣೆಯ ಜವಾಬ್ದಾರಿ ಹೊತ್ತಿರುವ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಪ್ರಚಾರದ ಒತ್ತಡದ ನಡುವೆಯೂ ತುಮಕೂರಿನ ನೊಣವಿನಕೆರೆ ಮಠಕ್ಕೆ ಭೇಟಿ ನೀಡಿ ತಮ್ಮ ಆರಾಧ್ಯ ದೈವ ಕಾಡುಸಿದ್ದೇಶ್ವರನಿಗೆ ಪೂಜೆ ಸಲ್ಲಿಸಿ ಹೋಮದಲ್ಲಿ ಪಾಲ್ಗೊಂಡಿದ್ದಾರೆ.

ನೋಣವಿನಕೆರೆ ಮಠದ ಆವರಣದಲ್ಲಿ ಗಣಪತಿ ಹಾಗೂ ಮೃತ್ಯುಂಜಯ ಹೋಮದಲ್ಲಿ ಪಾಲ್ಗೊಂಡಿದ್ದ ಡಿಕೆಶಿ. ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಮತ್ತು ಸಿಎಂ ಕುಮಾರಸ್ವಾಮಿ ಹಾಗೂ ಕುಟುಂಬದ ಹೆಸರಿನಲ್ಲಿ ಸಂಕಲ್ಪ ಕೈಗೊಂಡಿದ್ದು ವಿಶೇಷವಾಗಿತ್ತು. ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೋಣವಿನಕೆರೆ ಕಾಡುಸಿದ್ದೇಶ್ವರ ಪೀಠ ನಾನು ನಂಬಿರುವ ಮಹಾ ಕ್ಷೇತ್ರ, ಇದು ನನಗೆ ಶಕ್ತಿ ಹಾಗೂ ಮಾರ್ಗದರ್ಶ ನೀಡಿದೆ.

ಹೀಗಾಗಿ ಕಾರ್ಯದ ಒತ್ತಡದ ನಡುವೆಯೂ ಮಠಕ್ಕೆ ಭೇಟಿ ನೀಡಿ ಹೋಮದಲ್ಲಿ ಪಾಲ್ಗೊಂಡು ವಿಘ್ನ ನಿವಾರಣೆಗೆ ಪ್ರಾರ್ಥನೆ ಮಾಡಿಕೊಂಡಿದ್ದೇನೆ. ಅಲ್ಲದೆ ಬಳ್ಳಾರಿ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಹಾಗೂ ಸಿಎಂ ಕುಮಾರಸ್ವಾಮಿ ಪರ ಸಂಕಲ್ಪ ಮಾಡಿದ್ದೇನೆ ಎಂದರು.

ನಾನು ಒಂದು ಸರ್ಕಾರದ ಭಾಗವಾಗಿರುವಾಗ, ಒಬ್ಬರ ಪರ ಹೋರಾಟ ಮಾಡುತ್ತಿರುವಾಗ ಅವರ ಪರ ಸಂಕಲ್ಪ ಮಾಡುವುದು ಸಹಜ ಎಂದು ಪ್ರತಿಕ್ರಿಯಿಸಿದ್ರು. ಬಳ್ಳಾರಿಯಲ್ಲಿ ವಿಜಯಪತಾಕೆ ಹಾರಿಸುವುದು ನಾವೇ ಎಂದು ಹೇಳಿದ್ರು.

LEAVE A REPLY

Please enter your comment!
Please enter your name here