
ಭಾರತದಲ್ಲಿ 50,000 ಹೊಸ ಉದ್ಯೋಗಿಗಳನ್ನ ನೇಮಕ ಮಾಡಿಕೊಳ್ಳಲಿದೆ ಕಾಗ್ನಿಜೆಂಟ್..!
ನವದೆಹಲಿ : ಕೊರೊನಾ ಸಾಂಕ್ರಾಮಿಕ ಮಹಾಮಾರಿಯಿಂದಾಗಿ ದೇಶಾದ್ಯಂತ ನೇಮಕಾತಿ ಪ್ರಕ್ರಿಯೆಗೆ ಕಂಪೆನಿಗಳು ವಿಳಂಬ ನೀತಿ ಅನುಸರಿಸುತ್ತಿದೆ. ಮಾತ್ರವಲ್ಲ ಉದ್ಯೋಗ ಕೂಡ ಕಡಿಮೆಯಾಗಿದೆ. ಕಂಪನಿಗಳು ಅದರಲ್ಲೂ ಐಟಿ ಆಧಾರಿತ ಕಂಪನಿಗಳು ನಿರೀಕ್ಷಿತ ಮಟ್ಟದಲ್ಲಿ ಲಾಭ ಗಳಿಸದ ಕಾರಣ ಹೊಸ ನೇಮಕಾತಿಯಿಂದ ಆದಷ್ಟು ದೂರ ಉಳಿದಿವೆ. ಆದರೆ ಇದೀಗ ಪ್ರಮುಖ ಐಟಿ ದೈತ್ಯ ಕಂಪೆನಿ ಕಾಗ್ನಿಜೆಂಟ್ 2022 ರಲ್ಲಿ ವೇಳೆಗೆ 50,000 ಫ್ರೆಶರ್ಗಳನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಕಾಗ್ನಿಜೆಂಟ್ನ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಯೋಜನೆ ಹಾಕಿರು ವುದು ಇದೇ ಮೊದಲು. ಕಳೆದ ವರ್ಷ, ಕಂಪನಿಯು ದೇಶೀಯವಾಗಿ 33,000 ಫ್ರೆಶರ್ಗಳನ್ನು ನೇಮಿಸಿಕೊಂಡಿತ್ತು. ಈ ನಡುವೆ ಕಾಗ್ನಿಜೆಂಟ್ 2021 ರ ವೇಳೆಗೆ ಸುಮಾರು 1.39 ಲಕ್ಷ ಕೋಟಿ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ. 2020ಕ್ಕೆ ಹೋಲಿಸಿದರೆ ಇದು ದುಪ್ಪಟ್ಟು ಬೆಳವಣಿಗೆ ದರವಾಗಿದೆ. ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆದಾಯವು ಶೇ.10.2 ರಿಂದ ಶೇ.11.2 ರಷ್ಟು ಬೆಳೆಯುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.