ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಕೇಸ್: ಖ್ಯಾತ ಸೋಶಿಯಲ್ ಮಿಡಿಯಾ ಸ್ಟಾರ್ ಅರೆಸ್ಟ್

ರಾಷ್ಟ್ರೀಯ

ಕೇರಳಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ, ಸ್ನೇಹ, ಆತ್ಮೀಯತೆ ಹಲವು ಬಾರಿ ಅತ್ಯಂತ ಅಪಾಯ ತಂದೊಡ್ಡಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಈ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ. ಕೇರಳದ ತಿರುವನಂತಪುರಂ ತಂಪನೂರು ಲಾಡ್ಜ್‌ನಲ್ಲಿ ಒಂದು ತಿಂಗಳ ಹಿಂದೆ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿತ್ತು. ತಿಂಗಳ ಬಳಿಕ ಈ ಅತ್ಯಾಚಾರ ಎಸಗಿದ ಆರೋಪಿ, ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈತ ಅತ್ಯಂತ ಜನಪ್ರಿಯನಾಗಿದ್ದ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರಿಗೆ, ಯುವಕ ಯುವತಿಯರಿಗೆ ಹಲವು ಸಲಹೆಗಳನ್ನು ನೀಡುತ್ತಿದ್ದ. ಈ ಮೂಲಕ ಕಾಲೇಜು ವಿದ್ಯಾರ್ಥಿನಿಯರಿಗೆ ಆತ್ಮೀಯವಾಗಿದ್ದ. ಕೇರಳದ ಮಹಿಳೆಯರ ಮನೆಮಾತಾಗಿದ್ದ ಈತ ಕಾಲೇಜು ವಿದ್ಯಾರ್ಥಿಯನ್ನು ಮೋಸದ ಬಲೆಗೆ ಸಿಲುಕಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಪ್ರಕರಣದ ವಿವರ:
ಕೇರಳದ ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್, ಸಾಮಾಜಿಕ ಜಾಲತಾಣದ ಮೂಲಕ ಕಾಲೇಜು ವಿದ್ಯಾರ್ಥಿನಿಯ ಪರಿಚಯವಾಗಿದೆ. ಈತನ ಮೋಸದ ಬಲೆಗೆ ಆಕೆ ಸುಲಭವಾಗಿ ಬಿದ್ದಿದ್ದಾಳೆ. ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಈತನ ಬಣ್ಣದ ಮಾತಿಗೆ ಮರುಳಾದ ವಿದ್ಯಾರ್ಥಿನಿ ಒಂದೇ ವಾರಕ್ಕೆ ಆತ್ಮೀಯಳಾಗಿದ್ದಾಳೆ.

ತಾನು ಕಾರು ಖರೀದಿಸುತ್ತಿರುವುದಾಗಿ ವಿದ್ಯಾರ್ಥಿನಿ ಬಳಿ ಹೇಳಿಕೊಂಡಿದ್ದಾನೆ. ತಾನು ಕಾರು ಖರೀದಿಸುವಾಗ ಶೋರೂಂಗೆ ಆಗಮಿಸಬೇಕು ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ಒಪ್ಪಿದ ವಿದ್ಯಾರ್ಥಿನಿ ಪಟ್ಟಣಕ್ಕೆ ಆಗಮಿಸಿದ ಬೆನ್ನಲ್ಲೇ  ಸೋಶಿಯಲ್ ಮಿಡಿಯಾ ಸ್ಟಾರ್‌ ಭೇಟಿಯಾಗಿದ್ದಾನೆ. ತಾನು ಪ್ರಯಾಣ ಮಾಡಿ ಸುಸ್ತಾಗಿರುವುದಾಗಿ ಹೇಳಿ ತಂಪನೂರು ಲಾಡ್ಜ್‌ನಲ್ಲ ರೂಮ್ ಪಡೆದುಕೊಂಡಿದ್ದಾನೆ.

ರಿಫ್ರೆಶ್ ಆಗಲು ಲಾಡ್ಜ್‌ನಲ್ಲಿ ಕೆಲ ಹೊತ್ತು ವಿಶ್ರಮಿಸಿ ಬಳಿಕ ಕಾರು ಖರೀದಿಸುವ ಕುರಿತು ವಿದ್ಯಾರ್ಥಿನಿಗೆ ಹೇಳಿದ್ದಾನೆ. ಲಾಡ್ಜ್‌ನಲ್ಲಿ ರೂಮ್ ಪಡೆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾ ಸ್ಟಾರ್ ಅಸಲಿ ರೂಪ ಹೊರಬಂದಿದೆ. ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ವಿದ್ಯಾರ್ಥಿಯನ್ನು ಅಲ್ಲೆ ಬಿಟ್ಟು ಅಲ್ಲಿಂದ ಸೋಶಿಯಲ್ ಮಿಡಿಯಾ ಸ್ಟಾರ್ ಹೊರಬಂದಿದ್ದಾನೆ. ಆಘಾತಕ್ಕೊಳಗಾದ ಯುವತಿ, ಸೋಶಿಯಲ್ ಮಿಡಿಯಾ ಸ್ಟಾರ್ ಕುರಿತು ಹಲವರ ಬಳಿ ಮಾಹಿತಿ ಕಲೆಹಾಕಿದ್ದಾಳೆ. ಈ ವೇಳೆ ಇದೇ ರೀತಿ ಹಲವು ಮಹಿಳೆಯರು ಇದೇ ರೀತಿ ನೋವು ಅನುಭವಿಸಿರುವುದಾಗಿ ತಿಳಿದುಬಂದಿದೆ.

ತಾನು ಮೋಸದ ಬಲೆಗೆ ಸಿಲುಕಿರುವುದು ಅರಿತ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈಕೆಯ ಮಾಹಿತಿ ಆಧಿರಿಸಿ ಪೊಲೀಸರು ಸೋಶಿಯಲ್ ಮೀಡಿಯಾ ಸ್ಟಾರ್ ಬಂಧಿಸಿದ್ದಾರೆ. ಈತನ ಮೊಬೈಲ್ ವಶಪಡಿಸಿಕೊಂಡಿದ್ದು, ಈ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯ ನಗ್ನ ಚಿತ್ರಗಳನ್ನು ಸೆರೆ ಹಿಡಿದಿರುವ ಮಾಹಿತಿಯನ್ನು ಪೊಲೀಸರು ಹೇಳಿದ್ದಾರೆ. ಇದೇ ರೀತಿ ಹಲವು ಮಹಿಳೆಯರ ನಗ್ನ ಚಿತ್ರಗಳು ಈ ಫೋನ್‌ನಲ್ಲಿರುವುದು ಪತ್ತೆಯಾಗಿದೆ. ಈ ಮೂಲಕ ಹಲವರನ್ನು ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿರುವ ಕುರಿತು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.