Home Cinema ನಗಿಸುತ್ತಲೇ ಇಹಲೋಕ ತ್ಯಜಿಸಿದ ಮಿಮಿಕ್ರಿ ರಾಜ್‌ಗೋಪಾಲ್; ಕಡೇ ದಿನಗಳಲ್ಲಿ ಕಷ್ಟದಲ್ಲಿದ್ರಾ ಹಾಸ್ಯನಟ ?

ನಗಿಸುತ್ತಲೇ ಇಹಲೋಕ ತ್ಯಜಿಸಿದ ಮಿಮಿಕ್ರಿ ರಾಜ್‌ಗೋಪಾಲ್; ಕಡೇ ದಿನಗಳಲ್ಲಿ ಕಷ್ಟದಲ್ಲಿದ್ರಾ ಹಾಸ್ಯನಟ ?

346
0
SHARE

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಕಾಮಿಡಿ ಟೈಮಿಂಗ್‌ನಿಂದ ಹೆಸರುವಾಸಿಯಾಗಿದ್ದ ಹಿರಿಯ ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ (64) ಇಂದು ವಿಧಿವಶರಾಗಿದ್ದಾರೆ. ಸುಮಾರು ದಿನಗಳಿಂದ ಅಸ್ತಮಾ ಹಾಗೂ ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದ ರಾಜಗೋಪಾಲ್ ಬೆಂಗಳೂರಿನ ಕೆಂಗೇರಿಯ ತಮ್ಮ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ತಮಿಳಿನ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ರಾಜಗೋಪಾಲ್ 600ಕ್ಕೂ ಹೆಚ್ಚು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇತ್ತೀಚಿಗೆ ಸಿನಿಮಾಗಳಲ್ಲಿ ನಟಿಸಲು ಸೂಕ್ತ ಅವಕಾಶಗಳಿಲ್ಲದೇ ರಾಜ್‌ಗೋಪಾಲ್ ಸ್ವಲ್ಪ ಕಷ್ಟದಲ್ಲಿದ್ರು. ಕಾರ್ಯಕ್ರಮವೊಂದರಲ್ಲಿ ಹಿರಿಯ ನಟರಿಗೆ ಸಿನಿಮಾ ಚಾನ್ಸ್ ಇಲ್ಲದ ಬಗ್ಗೆ ಅಸಮಾಧಾನವನ್ನೂ ಹೊರಹಾಕಿದ್ದರು.

ಹಿರಿಯ ಕಲಾವಿದರನ್ನ ಕಡೆಗಣಿಸುತ್ತಿರುವ ಪದ್ಧತಿಯ ವಿಷಯವಾಗಿ ಬೇಸರವನ್ನ ಹೊರಹಾಕಿದ್ದರು. ಜೀವನ ನಿರ್ವಹಣೆಗಾಗಿ ಮಿಮಿಕ್ರಿ ಕಾರ್ಯಕ್ರಮಗಳನ್ನ ನಡೆಸಿಕೊಡುತ್ತಿದ್ದರು. ವಿವಿಧ ನಟರ ವಾಯ್ಸ್‌ಗಳನ್ನ ಯಥಾವತ್ತಾಗಿ ಅನುಕರಣೆ ಮಾಡುವ ಮೂಲಕ ಅಭಿಮಾನಿಗಳನ್ನ ಗಳಿಸಿದ್ದ ರಾಜ್‌ಗೋಪಾಲ್ ಕೆಲವು ದಿನಗಳಿಂದ ಚಿತ್ರರಂಗದಿಂದ ದೂರವಾಗಿದ್ದರು. ರಾಜ್‌ಗೋಪಾಲ್ ನಿಧನಕ್ಕೆ ಕನ್ನಡ ಚಿತ್ರರಂಗ ಸಂತಾಪ ಸೂಚಿಸುತ್ತಿದೆ.

 

LEAVE A REPLY

Please enter your comment!
Please enter your name here