Commonwealth Games 2022.. ನವೀನ್, ವಿನೇಶ್ ಫೋಗಟ್ ಗೆ ಚಿನ್ನ, ಪೂಜಾಗೆ ಕಂಚಿನ ಪದಕ

ಕ್ರೀಡೆ

ಲಂಡನ್: ಕಾಮನ್‍ವೆಲ್ತ್ ಕ್ರೀಡಾಕೂಟದ 9ನೇ ದಿನ ಭಾರತದ ಕುಸ್ತಿ ಪಟುಗಳು ಗೆಲುವಿನ ನಗೆ ಬೀರಿದ್ದಾರೆ. ನವೀನ್ ಕುಮಾರ್ ದಹಿಯಾ, ವಿನೇಶ್ ಫೋಗಟ್ ಚಿನ್ನದ ಪದಕ ಗೆದ್ದರೆ, ಪೂಜಾ ಗೆಹ್ಲೋಟ್ ಕಂಚಿನ ಪದಕ ಗೆದ್ದು ಭಾರತಕ್ಕೆ ಸಂಭ್ರಮ ತಂದಿದ್ದಾರೆ. ಪುರುಷರ 57 ಕೆಜಿ ವಿಭಾಗದ ಕುಸ್ತಿಯಲ್ಲಿ ನವೀನ್ ಕುಮಾರ್ ದಹಿಯಾ, ಎಬಿಕೆವೆನಿಮೊ ವೆಲ್ಸನ್ ಅವರನ್ನು 10-0 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದು ಬೀಗಿದರು. ಇತ್ತ ಮಹಿಳೆಯರ 53 ಕೆಜಿ ವಿಭಾಗದಲ್ಲಿ ವಿನೇಶ್ ಫೋಗಟ್ ಚಿನ್ನ ಗೆದ್ದು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಹ್ಯಾಟ್ರಿಕ್‌ ಪದಕ ಗೆದ್ದ ಮೊದಲ ಮಹಿಳಾ ಕುಸ್ತಿಪಟು ಎಂಬ ದಾಖಲೆ ಬರೆದಿದ್ದಾರೆ.

ಇವರೊಂದಿಗೆ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ವಿಭಾಗದಲ್ಲಿ ಪೂಜಾ ಗೆಹ್ಲೋಟ್ ಸ್ಕಾಟ್ಲೆಂಡ್‍ನ ಕ್ರಿಸ್ಟೆಲ್ಲೆ ಲೆಮೊಫ್ಯಾಕ್ ಲೆಟ್ಚಿಡ್ಜಿಯೊ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದರು. ಈ ಮೊದಲು ಮಹಿಳೆಯರ 57-60 ಕೆಜಿ ವಿಭಾಗದ ಬಾಕ್ಸಿಂಗ್‍ನಲ್ಲಿ ಜೈಸ್ಮಿನ್ ಲಂಬೋರಿಯಾ ಕಂಚಿನ ಪದಕ ಗೆದ್ದಿದ್ದರು. ಈ ಮೂಲಕ ಕಾಮನ್‍ವೆಲ್ತ್ ಕ್ರೀಡಾಕೂಟದ 9ನೇ ದಿನ ಕುಸ್ತಿಯಲ್ಲಿ 2 ಚಿನ್ನ 1 ಕಂಚು ಸೇರಿ ಒಟ್ಟು ಮೂರು ಪದಕ ಭಾರತಕ್ಕೆ ಸಿಕ್ಕಿದೆ.

Leave a Reply

Your email address will not be published.