
ಗಾಂಜಾ ಸೇವನೆ ಬಗ್ಗೆ ಪ್ರಚೋದನಾತ್ಮಕ ಪೋಸ್ಟ್- ಯುವಕನ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು
ಗಾಂಜಾ ಸೇವನೆ ಬಗ್ಗೆ ಪ್ರಚೋದನಾತ್ಮಕ ಹೇಳಿಕೆ ನೀಡಿದ ಯುವಕನ ವಿರುದ್ಧ ಕ್ರಮಕೈಗೊಳ್ಳುವಂತೆ, ಪೊಲೀಸ್ ಕಮಿಷನರ್ ಗೆ ಎಂಎಲ್ ಸಿ, ಪಿ.ಆರ್. ರಮೇಶ್ ದೂರು ಮಾಡಿದ್ದಾರೆ. ಪುನೀತ್ ಕೆರೆಹಳ್ಳಿ ಎಂಬ ಯುವಕ ಭಂಗಿ, ಗಾಂಜಾ ಸೇವನೆ ಬಗ್ಗೆ ಫೇಸ್ ಬುಕ್ ನಲ್ಲಿ ವಿಡಿಯೋ ಹರಿಬಿಟ್ಟಿದ್ದ. ಮುಸ್ಲಿಮರು ಮುಖ ಮುಚ್ಚುವ ಕರವಸ್ತ್ರಕ್ಕಾಗಿ ಧಾರ್ಮಿಕ ಹಕ್ಕು ಎನ್ನುತ್ತಿದ್ದಾರೆ. ಭಂಗಿ ಸೇದುವುದು, ಗಾಂಜಾ ಸೇವನೆ ಮಾಡಿ ಹರ ನಾಮ ಸ್ತುತಿಸೋದು ನಮ್ಮ ಪರಂಪರೆ. ದೇಶದ ಸಂವಿಧಾನಕ್ಕಾಗಿ ಧಾರ್ಮಿಕ ಆಚರಣೆ ಬದಿಗಿಟ್ಟಿದ್ದೆವು. ನಮ್ಮ ಧಾರ್ಮಿಕ ಆಚರಣೆಯನ್ನು ಮತ್ತೆ ಆರಂಭಿಸಬೇಕಿದೆ ಎಂದು ವಿಡಿಯೋ ಮಾಡಿ, ಫೇಸ್ ಬುಕ್ ಪೇಜ್ ನಲ್ಲಿ ಹರಿಬಿಟ್ಟಿದ್ದ. ಪ್ರಚೋದನಾತ್ಮಕ ಹೇಳಿಕೆ ಹಿನ್ನಲೆ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಪಿ. ಆರ್.ರಮೇಶ್ ದೂರು ನೀಡಿದ್ದಾರೆ.