Home District ಎರಡು ಬಾರಿ ಕೋರೊನಾ ನಿಯಂತ್ರಣ ಲಸಿಕೆ ಪಡೆದಿದ್ದ ‘ಜಿಲ್ಲಾಧಿಕಾರಿ’ಗಳನ್ನೂ ಬಿಡದ ಕೊರೋನಾ!

ಎರಡು ಬಾರಿ ಕೋರೊನಾ ನಿಯಂತ್ರಣ ಲಸಿಕೆ ಪಡೆದಿದ್ದ ‘ಜಿಲ್ಲಾಧಿಕಾರಿ’ಗಳನ್ನೂ ಬಿಡದ ಕೊರೋನಾ!

675
0

ಚಾಮರಾಜನಗರ: ಎರಡು ಬಾರಿ ಕೋರೊನಾ ನಿಯಂತ್ರಣ ಮಾಡುವ ಲಸಿಕೆ ಪಡೆದಿದ್ದ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ಆರ್. ರವಿ ರವರಿಗೆ ಕೋರೊನಾ ಸೋಂಕು ತಗುಲಿರುವುದು ದೃಢವಾಗಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಎರಡು ದಿನಗಳ ಹಿಂದೆ ಶೀತ ನೆಗಡಿ, ಗಂಟಲು ನೋವು ಕಾಣಿಸಿಕೊಂಡಿದ್ದರಿಂದ ಶನಿವಾರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿತ್ತು. ಭಾನುವಾರ ಫಲಿತಾಂಶ ಬಂದಿದ್ದು, ಪಾಸಿಟಿವ್ ದೃಢಪಟ್ಟಿದೆ.

ಕೋರೊನಾ ಸೋಂಕು ದೃಡವಾಗಿರುವ ಸಂಗತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸ್ವಯಂ ಹೋಂ ಐಸೋಲೇಷನ್ ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ಫೆಬ್ರವರಿ 8 ರಂದು ಮೊದಲ ಡೋಸ್ ಕೋವಿಡ್ ನಿರೋಧಕ ಲಸಿಕೆ ಪಡೆದಿದ್ದರು. ಮಾರ್ಚ್ 8 ರಂದು ಎರಡನೇ ಡೋಸ್ ಲಸಿಕೆ ಸಹ ಪಡೆದಿದ್ದರು. ಎರಡನೇ ಡೋಸ್ ಪಡೆದು 27 ದಿನಗಳಾಗಿತ್ತು.

ಮಾರ್ಚ್ 2 ರಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ದೇವಾಲಯದ ಜೀರ್ಣೋದ್ದಾರದ ಮಹಾ ಸಂಪ್ರೋಕ್ಷಣೆ ಸಮಾರಂಭದಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ಕುಮಾರ್, ಹನೂರು ಶಾಸಕ ಆರ್.ನರೇಂದ್ರ, ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಮತ್ತು ಬಿಳಿಗಿರಿರಂಗನ ಬೆಟ್ಟದ ಪ್ರಧಾನ ಅರ್ಚಕ ರವಿಕುಮಾರ್ ಸೇರಿದಂತೆ ಹಲವು ಅರ್ಚಕರು ಮತ್ತು ದೇವಾಲಯದ ಅಭಿವೃದ್ದಿಗೆ ನೆರವು ನೀಡಿದ ದಾನಿಗಳು, ಉಪ ವಿಭಾಗಾಧಿಕಾರಿ, ಯಳಂದೂರು ತಹಸೀಲ್ದಾರ್, ದೇವಾಲಯದ ಆಡಳಿತ ಮಂಡಲಿ ಹೀಗೆ ಹಲವಾರು ಮಂದಿಗಳೊಂದಿಗೆ ಒಡನಾಟವಿತ್ತು.

ಪ್ರಸ್ತುತ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ರವರಿಗೆ ಕೋರೊನಾ ಸೋಂಕು ದೃಡವಾಗಿರುವ ಹಿನ್ನಲೆಯಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದ ಮಹಾ ಸಂಪ್ರೋಕ್ಷಣಾ ಸಮಾರಂಭದಲ್ಲಿ ಒಡನಾಟದಲ್ಲಿದ್ದವರೂ ಸಹ ಕೋರೊನಾ ಸೋಂಕಿನ ಪರೀಕ್ಷೆಗೆ ಒಳಪಡಬೇಕಾಗಿದೆ.

Previous articleರಮೇಶ್ ಜಾರಕೀಹೊಳಿ ಟ್ವೀಟ್ ವಾರ್!; ಟ್ವಿಟರ್ ಮುಖಾಂತರ ಜಾರಕಿಹೊಳಿ ಹೇಳಿದ್ದೇನು?
Next articleಅನಥಾಶ್ರಮದ 27 ಮಕ್ಕಳಿಗೆ ಕೋವಿಡ್ ಪಾಸಿಟಿವ್!

LEAVE A REPLY

Please enter your comment!
Please enter your name here