Home District ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಲಾಕ್ ಡೌನ್; ಆ ಸಮಯದಲ್ಲಿ ಏನಿರುತ್ತೆ? ಏನಿರುವುದಿಲ್ಲ?: ಇಲ್ಲಿದೆ ಸಂಪೂರ್ಣ...

ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಲಾಕ್ ಡೌನ್; ಆ ಸಮಯದಲ್ಲಿ ಏನಿರುತ್ತೆ? ಏನಿರುವುದಿಲ್ಲ?: ಇಲ್ಲಿದೆ ಸಂಪೂರ್ಣ ವರದಿ

546
0

ರಾಜ್ಯಾದ್ಯಂತ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಲಾಕ್ ಡೌನ್ ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತೆ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಏಪ್ರಿಲ್ 21ರಿಂದ ಮೇ 4ರವರೆಗೆ ಸೋಮವಾರದಿಂದ ಶುಕ್ರವಾರದವರಗೆ ಈ ಮಾರ್ಗಸೂಚಿ ಅನ್ವಯವಾಗುತ್ತದೆ. ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆಯವರೆಗೆ ಅತ್ಯಾವಶ್ಯಕ ವಾಣಿಜ್ಯ ಚಟುವಟಿಕೆಗಳನ್ನು ಹೊರತು ಪಡಿಸಿ, ಉಳಿದೆಲ್ಲಾ ಚಟುವಟಿಕೆಗಳನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ. ರಾತ್ರಿ 9ರಿಂದ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಶನಿವಾರ ಮತ್ತು ಭಾನುವಾರದ ವೀಕೆಂಡ್ ಕರ್ಫ್ಯೂ ಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.

ಈ ಅವಧಿಯಲ್ಲಿ ಏನುಂಟು, ಏನಿರುವುದಿಲ್ಲ ಎಂಬುದನ್ನು ಗಮನಿಸುವುದಾದರೆ,

ರಾಜ್ಯಾದ್ಯಂತ ಅಂಗಡಿ-ಮುಂಗಟ್ಟು ಬಂದ್‌ಗೆ ಆದೇಶ,
ಅಗತ್ಯ ಸೇವೆ ಬಿಟ್ಟು ಉಳಿದೆಲ್ಲ ಅಂಗಡಿಗಳ ಬಂದ್‌ಗೆ ಆದೇಶ,
ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ರಿಲೀಸ್,
ಕಟ್ಟಡ ಕಾಮಗಾರಿಗಳಿಗೆ ಸಂಬಂಧಿಸಿದ ಅಂಗಡಿಗೆ ಅವಕಾಶ,
ಉಳಿದೆಲ್ಲ ಅಂಗಡಿಗಳನ್ನು ಮುಚ್ಚುವಂತೆ ಸರ್ಕಾರ ಆದೇಶ,
ಮೇ 4ರವರೆಗೂ ಅಂಗಡಿಗಳನ್ನು ಮುಚ್ಚುವಂತೆ ಆದೇಶ,
ಇಡೀ ರಾಜ್ಯಾದ್ಯಂತ ಪರಿಷ್ಕೃತ ಆದೇಶ ಜಾರಿ,
ದಿನಸಿ, ತರಕಾರಿ, ಹಾಲು, ಮೆಡಿಕಲ್‌ಗಷ್ಟೇ ಅವಕಾಶ,
ಸಲೂನ್, ಬ್ಯೂಟಿ ಪಾರ್ಲರ್‌ಗಳಿಗೆ ಷರತ್ತುಬದ್ಧ ಅನುಮತಿ,
ಬಾರ್, ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ,
ಅಂತಾರಾಜ್ಯ ವಾಹನ ಸಂಚಾರಕ್ಕೆ ನಿರ್ಬಂಧ ಇರುವುದಿಲ್ಲ,
ರಾಜ್ಯದಲ್ಲಿ ಎಲ್ಲಾ ಶಾಲಾ-ಕಾಲೇಜು ಮುಚ್ಚಲು ಆದೇಶ,
ಕಟ್ಟುನಿಟ್ಟಿನ ನಿಯಮ ಜಾರಿಗೆ ಮುಂದಾದ ಸರ್ಕಾರ,
ರಾಜ್ಯಾದ್ಯಂತ ಅಂಗಡಿ ಬಂದ್ ಮಾಡಿಸುತ್ತಿರೋ ಪೊಲೀಸರು,
ಮಾರ್ಗಸೂಚಿಯಂತೆ ಎಲ್ಲ ಬಂದ್ ಮಾಡಿಸ್ತಿರುವ ಪೊಲೀಸರು,
ಉಳಿದ ಶಾಪ್‌ಗಳನ್ನು ಬಂದ್ ಮಾಡಿಸುತ್ತಿರುವ ಪೊಲೀಸರು,

ಏನಿರುತ್ತವೆ ಎಂದು ನೋಡುವುದಾದರೆ:,
* ಅತ್ಯಾವಶ್ಯಕ ಔಷಧ ಮಾರಾಟ ಮಳಿಗೆಗಳು, ನರ್ಸಿಂಗ್ ಹೋಂ, ಆಸ್ಪತ್ರೆಗಳು
*ವಿದ್ಯುತ್ ಪ್ರಸರಣ ಮತ್ತು ಅತ್ಯಾವಶ್ಯಕ ಸೇವೆಗಳು,ನೀರು ಪೂರೈಕೆ
* ನಿರ್ಮಾಣ ಚಟುವಟಿಕೆಗಳು, ಸಿವಿಲ್ ರಿಪೇರಿ ಚಟುವಟಿಕೆಗಳು
*ಮುಂಗಾರು ಪೂರ್ವ ಸಿದ್ದತಾ ಚಟುವಟಿಕೆಗಳು
* ಕೈಗಾರಿಕೆಗಳು,ಉತ್ಪಾದನಾ ಚಟುವಟಿಕೆಗಳು(ಕೊರೊನಾ ಮಾರ್ಗಸೂಚಿಗೆ ಒಳಪಟ್ಟಿರುತ್ತದೆ)
* ರೇಷನ್ ಶಾಪ್ ಗಳು, ದಿನಸಿ ಮಾರಾಟ ಮಳಿಗೆಗಳು, ಹಣ್ಣು ತರಕಾರಿ ಮಾರಾಟ ಮಳಿಗೆಗಳು
* ಹಾಲು,ಮಾಂಸ, ಮೀನು,ಪಶುಆಹಾರ ಮಾರಾಟದ ಅಂಗಡಿಗಳು
*ಹಣ್ಣು,ತರಕಾರಿ, ಹೂವು ಮಾರುಕಟ್ಟೆಗಳನ್ನು ತೆರೆದ, ಬಯಲು ಪ್ರದೇಶದಲ್ಲಿ ನಡೆಸಬಹುದು
*ಹೊಟೇಲ್,ರೆಸ್ಟೋರೆಂಟ್ ಗಳಲ್ಲಿ ಕೇವಲ ಪಾರ್ಸಲ್ ಕೊಂಡೊಯ್ಯಲು ಅವಕಾಶ
* ಲಾಡ್ಜ್ ಗಳು ತಮ್ಮಲ್ಲಿನ ಅತಿಥಿಗಳಿಗೆ ಸರ್ವೀಸ್ ಕೊಡಬಹುದು
*ಮದ್ಯಮಾರಾಟ ಮಳಿಗೆಗಳು, ಬಾರ್ ಮತ್ತು ರೆಸ್ಟೋರೆಂಟ್ ಗಳಿಂದ ಪಾರ್ಸಲ್ ಒಯ್ಯಲು ಅವಕಾಶ
* ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಕೈಗಾರಿಕೆಗಳು
*ಬ್ಯಾಂಕ್, ವಿಮೆ ಮತ್ತು ಎಟಿಎಂ,*ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ
* ಇ-ವಾಣಿಜ್ಯದ ವಸ್ತುಗಳ ವಿತರಣೆ,* ಹಣಕಾಸು ಮಾರುಕಟ್ಟೆ, ಸ್ಟಾಕ್ ಎಕ್ಸಚೇಂಜ್
*ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮು ಸೇವೆಗಳು,* ಖಾಸಗಿ ಸೆಕ್ಯೂರಿಟಿ ಏಜೆನ್ಸಿಗಳ ಸೇವೆಗಳು
*ಸಲೂನ್, ಕ್ಷೌರದಂಗಡಿಗಳು, ಬ್ಯೂಟಿ ಪಾರ್ಲರ್ ಗಳು ಕೋವಿಡ್ ನಿಯಮಾವಳಿ ಅನುಸಾರ ಕಾರ್ಯನಿರ್ವಹಣೆ
* ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ವಸ್ತುಗಳ ಮಾರಾಟ ಮಳಿಗೆಗಳು
* ಖಾಸಗಿ ಕಚೇರಿಗಳು ಮತ್ತು ಸಂಸ್ಥೆಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದು
*ರಾಜ್ಯದೊಳಗೆ ವ್ಯಕ್ತಿಗಳ ಸಂಚಾರ ಹಾಗೂ ಸರಕು ಸಾಗಣೆಗೆ ಮುಕ್ತ ಅವಕಾಶ, ಪೂರ್ವಾನುಮತಿ ಅಗತ್ಯವಿಲ್ಲ
*ಮೆಟ್ರೋ,ಬಸ್,ಕ್ಯಾಬ್, ಆಟೋಗಳಲ್ಲಿ ಶೇ.50 ಆಸನ ಸಾಮರ್ಥ್ಯಕ್ಕೆ ಒಳಪಟ್ಟು ಸಂಚಾರಕ್ಕೆ ಅವಕಾಶ
*ವಿವಾಹ ಕಾರ್ಯಕ್ರಮಗಳಿಗೆ 50 ಮತ್ತು ಅಂತ್ಯಕ್ರಿಯೆಗೆ 20 ಜನರಿಗೆ ಮಾತ್ರ ಅವಕಾಶ
*ಶನಿವಾರ ಮತ್ತು ಭಾನುವಾರ, ದಿನಸಿ, ತರಕಾರಿ, ಹಾಲು ಮಾರಾಟ ಮಳಿಗೆಗಳು ಬೆಳಗ್ಗೆ 6ರಿಂದ 10ರವರೆಗೆ ಮಾತ್ರ ತೆರೆದಿರುತ್ತವೆ

*ಶಾಲೆ,ಕಾಲೇಜು, ಕೋಚಿಂಗ್ ಸೆಂಟರ್, ತರಬೇತಿ ಕೇಂದ್ರಗಳು
*ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಸ್ಪಾ, ಈಜುಕೊಳ
*ಕ್ರೀಡಾಸಂಕೀರ್ಣ,ಅಮ್ಯೂಸ್ ಮೆಂಟ್ ಪಾರ್ಕ್, ಸಭಾಂಗಣ,ಸಭಾ ಕಾರ್ಯಕ್ರಮಗಳು
* ಎಲ್ಲ ಬಗೆಯ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧ(ದೈನಂದಿನ ಪೂಜಾಕಾರ್ಯಗಳಿಗೆ ತಡೆ ಇಲ್ಲ)
*ಸಾಮಾಜಿಕ,ರಾಜಕೀಯ,ಕ್ರೀಡೆ, ಮನರಂಜನೆ, ಶೈಕ್ಷಣಿಕ,ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು
* ಅಗತ್ಯ ಸರಕುಗಳು,ನಿರ್ಮಾಣ ಸಾಮಗ್ರಿಗಳು, ದಿನಸಿ ಅಂಗಡಿಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳು

Previous articleಕೊರೋನಾ ಹಿನ್ನಲೆ; ರಾಜ್ಯಾದ್ಯಂತ ಅಂಗಡಿ ಬಂದ್ ಮಾಡಿಸಿದ ಸರ್ಕಾರ!
Next articleಯುವ ಕಾಂಗ್ರೆಸ್​​​ನಲ್ಲಿ ಗದ್ದಲ; ನನಗೆ ರಕ್ಷಣೆ ಕೊಡಿ’ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾ ಕೆ.ಆರ್​​ ದೂರು

LEAVE A REPLY

Please enter your comment!
Please enter your name here