Home District ಚಾಮರಾಜನಗರ : ಕಳೆದ ಒಂದೇ ದಿನದಲ್ಲಿ ಮಹಾಮಾರಿ ಕೊರೊನಾಗೆ 14 ಮಂದಿ ದುರ್ಮರಣ

ಚಾಮರಾಜನಗರ : ಕಳೆದ ಒಂದೇ ದಿನದಲ್ಲಿ ಮಹಾಮಾರಿ ಕೊರೊನಾಗೆ 14 ಮಂದಿ ದುರ್ಮರಣ

245
0

ಚಾಮರಾಜನಗರ: ಕೋವಿಡ್ ಆಸ್ಪತ್ರೆಯಲ್ಲಿ ಕೋರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಲ್ಲಿ ಶನಿವಾರ ಸಂಜೆ 6 ರಿಂದ ಭಾನುವಾರ ಬೆಳಗ್ಗೆ 9 ಗಂಟೆಯ ತನಕ ಹದಿನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ನಲ್ಲಿ ತಿಳಿಸಲಾಗಿದೆ.

ಶನಿವಾರ ಸಂಜೆ ಯಿಂದ ಭಾನುವಾರ ಬೆಳಗ್ಗೆ 6 ಗಂಟೆಯ ತನಕ ಕೋವಿಡ್ ಆಸ್ಪತ್ರೆಯಲ್ಲಿ ಮೃತ ಪಟ್ಟವರೆಂದರೆ,  ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ನಿಂಗರಾಜಮ್ಮ ( 45), ಎಸ್ ಮಂಗಳಗೌರಿ ( 64) , ಮಹದೇವಸ್ವಾಮಿ ( 64), ಷಣ್ಮುಖ ( 58) , ಬಸ್ತೀಪುರದ ಮಹದೇವಮ್ಮ (70).ಹನೂರು ತಾಲ್ಲೂಕಿನ ಬಂಡಳ್ಳಿ ಗ್ರಾಮದ ಕಾಳಪ್ಪ (90), ಮಹಮ್ಮದ್ ಖಾನ್ ( 50) .

ಚಾಮರಾಜನಗರ ಪಟ್ಟಣದ ಕೌಸರ್ ಉಲ್ಲಾ ಖಾನ್ ( 42) , ವೀರಭದ್ರಸ್ವಾಮಿ (59) ತಾಲ್ಲೂಕಿನ ಕೆ.ಕೆ.ಹುಂಡಿ ಗ್ರಾಮದ ಜವರೇ ಗೌಡ (52) , ಅಮಚವಾಡಿ ಗ್ರಾಮದ ರಾಮಶೆಟ್ಟಿ (39), ಮಂಗಲಗ್ರಾಮದ ಚಿಕ್ಕತಾಯಮ್ಮ (65) , ಹರದನಹಳ್ಳಿ ಗ್ರಾಮದ ಚಲುವಮ್ಮ (40), ಕೋಳಿಪಾಳ್ಯ ಗ್ರಾಮದ ಅರ್ಜುನ್ ಷರೀಪ್ (45) ರವರುಗಳು ಸಾವನ್ನಪ್ಪಿದ್ದಾರೆ  ಎಂದು ಕೋವಿಡ್ ಆಸ್ಪತ್ರೆಯ ಮೂಲಗಳು ತಿಳಿಸಿದೆ.

ಮೃತರಾದ 14 ಮಂದಿಯಲ್ಲಿ ಕೋವಿಡ್ ನಿಂದ 9 ಮಂದಿ ಹಾಗೂ ಕೋವಿಡೇತರದಿಂದ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೋವಿಡ್ ಆಸ್ಪತ್ರೆಯ ಮೂಲಗಳು ತಿಳಿಸಿದೆ.

Previous articleಅಂಧ ವೃದ್ದೆಗೆ ಆಸರೆಯಾಗಿ ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ!
Next articleಸಂತೆಯಲ್ಲಿ ಖರೀದಿಯಲ್ಲಿ ಮಗ್ನರಾದ ಜನರಿಗೆ ಬಿಸಿ ಮುಟ್ಟಿಸಿದ ಸಿಪಿಐ!

LEAVE A REPLY

Please enter your comment!
Please enter your name here