Home District ಕಿಲ್ಲರ್ ಕೊರೊನಾಗೆ ಅಪ್ಪ ಅಮ್ಮ ಬಲಿ : ಅನಾಥೆಯಾದ ನಾಲ್ಕು ವರ್ಷದ ಕಂದ

ಕಿಲ್ಲರ್ ಕೊರೊನಾಗೆ ಅಪ್ಪ ಅಮ್ಮ ಬಲಿ : ಅನಾಥೆಯಾದ ನಾಲ್ಕು ವರ್ಷದ ಕಂದ

2019
0

ಚಾಮರಾಜನಗರ : ಜಿಲ್ಲೆಯಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ಗಂಡ-ಹೆಂಡತಿ ಇಬ್ಬರನ್ನು ಬಲಿ ಪಡೆದು 4 ವರ್ಷದ ಮಗಳನ್ನು ಅನಾಥೆ ಮಾಡಿದೆ.
ತಾಲೂಕಿನ ಕೊತ್ತಲವಾಡಿ ಗ್ರಾಮದ ಗುರುಪ್ರಸಾದ್ ಮತ್ತು ರಶ್ಮಿ ದಂಪತಿ ಕೋವಿಡ್ನಿಂದ ಮೃತಪಟ್ಟಿದ್ದು, 4 ವರ್ಷದ ಮಗಳು ಸುಧಾರಾಣಿ ಅನಾಥೆಯಾಗಿದ್ದಾಳೆ.
ಗುರುಪ್ರಸಾದ್ ಕಳೆದ ಐದು ದಿ‌ನಗಳ ಹಿಂದೆ ಆಸ್ಪತ್ರೆಯಲ್ಲಿ ಕೋವಿಡ್ನಿಂದ ಮೃತಪಟ್ಟಿದ್ದರು. ಗಂಡನ ಅಂತ್ಯ ಸಂಸ್ಕಾರದ ಧಾರ್ಮಿಕ ಕಾರ್ಯ ಮಾಡಿ ರೋಗ ಲಕ್ಷಣ‌ ಕಂಡು ಬಂದ ಹಿನ್ನೆಲೆ ಆಸ್ಪತ್ರೆ ಸೇರಿದ್ದ ರಶ್ಮಿ ಕೂಡ ಮೃತಪಟ್ಟರು. ರಶ್ಮಿಯ ತಂದೆ-ತಾಯಿಗೂ ಕೋವಿಡ್ ಪಾಸಿಟಿವ್ ಆಗಿದೆ. ಅವರೂ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

Previous articleಲಾಕ್ ಡೌನ್ : ರಸ್ತೆಗಿಳಿದ ವಾಹನಗಳ ಜಪ್ತಿಗೆ ಮುಂದಾದ ಪೊಲೀಸರು
Next articleಪೊಲೀಸರ ಕೆಂಗಣ್ಣಿಗೆ ಗುರಿಯಾದ ‘ನಕಲಿ ಪತ್ರಕರ್ತ’!

LEAVE A REPLY

Please enter your comment!
Please enter your name here