Home District ಕೊರೊನಾ ಎಫೆಕ್ಟ್ ; ಬದನೆಕಾಯಿ ಬೆಲೆ ಕುಸಿತ; ಬೆಳೆ ಕಿತ್ತು ಹಾಕಿದ ರೈತ

ಕೊರೊನಾ ಎಫೆಕ್ಟ್ ; ಬದನೆಕಾಯಿ ಬೆಲೆ ಕುಸಿತ; ಬೆಳೆ ಕಿತ್ತು ಹಾಕಿದ ರೈತ

249
0
SHARE

ಚಿತ್ರದುರ್ಗ. ಕೊರೊನಾ ಎಫೆಕ್ಟ್ ನಿಂದಾಗಿ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಬದನೆ ಬೆಳೆಯನ್ನು ರೈತ ನಾಶಪಡಿಸಿದ್ದಾನೆ. ಚಿತ್ರದುರ್ಗ ತಾಲೂಕಿನ ಸೀಗೆಹಳ್ಳಿ ಗ್ರಾಮದ ರೈತ, ಜಗದೀಶ್ ಎಂಬಾತ ಕರಿಸಿದ್ದಪ್ಪ ಎಂಬ ರೈತನ ಎರಡೂವರೆ ಎಕರೆ ಜಮೀನು ಗುತ್ತಿಗೆ ಪಡೆದು, ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ಭೂಮಿಯನ್ನು ಹದ ಮಾಡಿ ಬದನೆ ಬಿತ್ತನೆ ಮಾಡಿದ್ದ.

ರೈತನ ನಿರೀಕ್ಷೆಯಂತೆ ಬೆಳೆ ಫಲವತ್ತಾಗಿ ಬೆಳೆದು ಉತ್ತಮ ಇಳುವರಿ ಕೂಡ ಬಂದಿತ್ತು. ಆದರೆ ಬದನೆಕಾಯಿ ಬೆಲೆ ತೀವ್ರ ಕುಸಿತ ಕಂಡಿದ್ದರಿಂದ ಬೇಸತ್ತ ರೈತ ಬೆಳೆಯನ್ನೇ ನಾಶ ಪಡಿಸಿದ್ದಾನೆ. ಇತ್ತ ಸಾಲದ ಸೂಲಿಯಲ್ಲಿ ಸಿಲುಕಿರುವ ರೈತ ತಲೆಮೇಲೆ ಕೈ ಹೊತ್ತು ಕೂತಿದ್ದಾನೆ.

ಸಾಲದ ಸುಳಿಗೆ ಸಿಲುಕಿರುವ ನಮಗೆ ದಯವಿಟ್ಟು ಪರಿಹಾರ ನೀಡಿ ಎಂದು ಸಿಎಂಗೆ ಮನವಿ ಮಾಡಿದ್ದಾನೆ.

LEAVE A REPLY

Please enter your comment!
Please enter your name here