ಕೊರೋನಾ ಎರಡನೇ ಅಲೆ ಆರ್ಭಟ; ಕೋಳಿ ಬಲಿ ಕೊಟ್ಟು ದಂಡಿನ ಮಾರಿಯನ್ನ ತಂಪು ಮಾಡಿದ ಜನ

ಕೊರೋನಾ ಎರಡನೇ ಅಲೆ ಆರ್ಭಟ; ಕೋಳಿ ಬಲಿ ಕೊಟ್ಟು ದಂಡಿನ ಮಾರಿಯನ್ನ ತಂಪು ಮಾಡಿದ ಜನ

973
0

ಮಂಡ್ಯ; ಆರ್ಭಟಕ್ಕೆ ಕಡಿವಾಣ ಹಾಕಲು ದಂಡಿನ ಮಾರಮ್ಮನ ಮೊರೆ.ಮಂಡ್ಯದ ಮಳವಳ್ಳಿಯಲ್ಲಿ ದಂಡಿನ ಮಾರಮ್ಮನಿಗೆ ವಿಶೇಷ ಪೂಜೆ.ಮಾಹಮಾರಿಗೆ ಗ್ರಾಮದ ಮಾರಿಯ ಅಸ್ತ್ರ.

ಆಂಕರ್ : ಕೊರೋನಾ ಎರಡನೇ ಅಲೆ ಆರ್ಭಟ ಹೆಚ್ಚಾದ ಹಿನ್ನೆಲೆ ಮಂಡ್ಯದ ಮಳವಳ್ಳಿ ಜನರು ದಂಡಿನ ಮಾರಮ್ಮನ ಮೊರೆ ಹೋಗಿದ್ದಾರೆ. ಮಳವಳ್ಳಿ ಪಟ್ಟಣದ ಎನ್‌ಇಎಸ್ ಬಡಾವಣೆಯ ಜನರು ಇಂದು ತಮ್ಮ ಬಡಾವಣೆಯ ರಸ್ತೆಗಳಲ್ಲಿ ದಂಡಿನ ಮಾರಮ್ಮನ ಪೂಜಾ ಕೈಂಕರ್ಯಗಳನ್ನ ನೆರವೇರಿಸಿದ್ರು. ರಸ್ತೆಗಳ ಮಧ್ಯೆ ಕಲ್ಲನ್ನ ಇಟ್ಟು ಅದರ ಮೇಲೆ ಬೇವಿನ ಸೊಪ್ಪು ಅರಿಶಿಣ ಕುಂಕುಮಗಳನ್ನ ಹಾಕಿ ಕರ್ಪೂರದಾರತಿಗಳನ್ನ ಮಾಡಿದ್ರು. ಇನ್ನು ಇಷ್ಟೆಲ್ಲ ಪೂಜೆ ಮಾಡ್ತಿರೋದಕ್ಕೆ ಕಾರಣ, ಮಹಾಮಾರಿ ಕೊರಾನ ತೊಲಗಿಸೋಕೆ ಅಂತ ಮಹಿಳೆಯರು ಹೇಳ್ತಿದ್ದಾರೆ.

ದಂಡಿನ ಮಾರಮ್ಮನಿಗೆ ಕೊಳಿ ಬಲಿ ಕೊಟ್ಟು ಶಾಂತಿ ಮಾಡೋದ್ರ ಜೊತೆಗೆ ವಿಶೇಷ ಪೂಜೆ ಮಾಡೋದ್ರಿಂದ ಕೊರಾನ ಮಹಾಮಾರಿಯನ್ನ ತೊಲಿಗಿಸಬಹುದು ಅನ್ನೋದು ಇವರ ನಂಬಿಕೆ. ಹಿಗಾಗಿ ಇಂದು ಈಡಿ ಬಡಾವಣೆಯ ಜನರು ದಂಡಿನ ಮಾರಮ್ಮನ ತಂಪು ಮಾಡಿದ್ದಾರೆ. ಅಲ್ಲದೆ ಪ್ರಪಂಚದ ತುಂಬ ಹರಡಿರೋ ಕ್ರೋರಿ ಕೊರಾನ ನಾಶವಾಗಲಿ ಅಂತ ದೇವರ ಬಳಿ ಪ್ರಾರ್ಥಿಸಿದ್ದಾರೆ.

VIAಕೊರೋನಾ ಎರಡನೇ ಅಲೆ ಆರ್ಭಟ; ಕೋಳಿ ಬಲಿ ಕೊಟ್ಟು ದಂಡಿನ ಮಾರಿಯನ್ನ ತಂಪು ಮಾಡಿದ ಜನ
SOURCEಕೊರೋನಾ ಎರಡನೇ ಅಲೆ ಆರ್ಭಟ; ಕೋಳಿ ಬಲಿ ಕೊಟ್ಟು ದಂಡಿನ ಮಾರಿಯನ್ನ ತಂಪು ಮಾಡಿದ ಜನ
Previous articleಹಳ್ಳಿಗಳನ್ನು ಬಿಡದ ಕೊರೋನಾ!
Next articleಗ್ರಾಮ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರಿಗೂ ಲಸಿಕೆ ನೀಡಲು ಮನವಿ

LEAVE A REPLY

Please enter your comment!
Please enter your name here