Home District ಐಸೋಲೇಶನ್ ವಾರ್ಡ್ ಗೆ ಸಚಿವರ ಭೇಟಿ ; ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಆನಂದ ಸಿಂಗ್

ಐಸೋಲೇಶನ್ ವಾರ್ಡ್ ಗೆ ಸಚಿವರ ಭೇಟಿ ; ಕೊರೊನಾ ಸೋಂಕಿತರಿಗೆ ಧೈರ್ಯ ತುಂಬಿದ ಆನಂದ ಸಿಂಗ್

417
0
SHARE

ಬಳ್ಳಾರಿ.  ನಗರದ ಸರಕಾರಿ ದಂತ ಮಹಾವಿದ್ಯಾಲಯದಲ್ಲಿರಿಸಲಾಗಿರುವ ಕೊರೊನಾ ಸೋಂಕಿತರ ವಾರ್ಡ್ ನೊಳಗೆ ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಬುಧವಾರ ತೆರಳಿ ಸೋಂಕಿತರ ಅಹವಾಲುಗಳನ್ನು ಆಲಿಸಿದರು. ಮತ್ತು ಅವರ ಆರೋಗ್ಯ-ಕ್ಷೇಮ‌ ವಿಚಾರಿಸಿದರು.

ವಿಮ್ಸ್ ನಿರ್ದೇಶಕ ಡಾ.ದೇವಾನಂದ, ವೈದ್ಯರ ಜತೆಗೆ  ಪಿಪಿಇ ಕಿಟ್ ಧರಿಸಿಕೊಂಡು ಸೋಂಕಿತರಿರುವ ವಾರ್ಡ್ ಗೆ ಪ್ರವೇಶಿಸಿದ ಆನಂದಸಿಂಗ್ ಅವರ ಅಹವಾಲುಗಳನ್ನು ಆಲಿಸಿ ಅವರಿಗೆ ಧೈರ್ಯ ತುಂಬಿದರು.ಸೋಂಕಿತರ ದುಃಖ-ದುಮ್ಮಾನಗಳಿಗೆ ದನಿಯಾಗುವುದರ ಜತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬಿದರು, ಚಿಂತೆ ಬೇಡ ತಾವು ಗುಣಮುಖರಾಗಿ ಹೊರಬರುತ್ತೀರಿ ಎಂದು ಧೈರ್ಯ ತುಂಬಿದರು.

ಸಚಿವರು ಅನೇಕ ಕೊರೊನಾ ಸೋಂಕಿತರು ಅಹವಾಲನ್ನು ಅತ್ಯಂತ ಸಮಚಿತ್ತದಿಂದ ವಿಚಾರಿಸಿದ್ದು ಕಂಡುಬಂದಿತು. ಇಲ್ಲಿ ಗುಣಮಟ್ಟದ ಊಟ, ಚಿಕಿತ್ಸೆ ಕೊಡಲಾಗುತ್ತಿದೆ ಮತ್ತು ಸ್ವಚ್ಛತೆಯೂ ಚೆನ್ನಾಗಿದೆಯಾ ಎಂದು ವಿಚಾರಿಸಿದ್ದಾರೆ. ಕೊರೊನಾ ಬಂದಿದೆ ಎಂಬ ಭಯಬೇಡ ತಮ್ಮೆಲ್ಲರೊಂದಿಗೆ ಜಿಲ್ಲಾಡಳಿತ ಮತ್ತು ಸರಕಾರವಿದೆ. ತಾವು ಆಸ್ಪತ್ರೆಯೊಳಗೆ ವಿಶ್ರಾಂತಿ ತೆಗೆದುಕೊಂಡು ಗುಣಮುಖರಾಗಿ ಹೊರಬನ್ನಿ ಎಂದು ಹಾರೈಸಿದರು.

ನಂತರ ಸಚಿವರು ಸ್ಥಳದಲ್ಲಿ ಉಪಸ್ಥಿತರಿದ್ದ ಎಲ್ಲ ವೈದ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು.ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಜಿಲ್ಲಾಡಳಿತದಿಂದ ಹಾಗೂ ಸರಕಾರದಿಂದಾಗಬೇಕಾಗುವ ಸಹಾಯ-ಸಹಕಾರಗಳ ಮಾಹಿತಿಯನ್ನು ವಿವರವಾಗಿ ಪಡೆದರು ಮತ್ತು ವೈದ್ಯರಿಗೆ ಆತ್ಮಸ್ಥೈರ್ಯ ತುಂಬಿದರು.

ಸಭೆ ನಡೆಸಿ ಸೂಚನೆ ಕೊಡುವುದರ ಬದಲಿಗೆ ಸ್ವತಃ ಸೋಕಿತರಿರುವ ಸ್ಥಳಕ್ಕೆ ತೆರಳಿ ಅವರೊಂದಿಗೆ ಸಮಾಲೋಚನೆ ನಡೆಸಿದಾಗಲೇ ವಾಸ್ತವ ಅರಿವಾಗಿ ಕ್ರಮಕೈಗೊಳ್ಳಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಸೋಂಕಿತರು ಇರುವ ವಾರ್ಡ್ ಗೆ ಭೇಟಿ‌ ನೀಡಿರುವೆ ಎಂದರು.

ಈ ಹಿಂದೆಯೂ ಬಳ್ಳಾರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು ಕೊರೊನಾ ಸೋಂಕಿತರ ವಾರ್ಡ್ ಗೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬಿದ್ದನ್ನು ಸ್ಮರಿಸಬಹುದಾಗಿದೆ.

LEAVE A REPLY

Please enter your comment!
Please enter your name here