ಬೆಂಗಳೂರು. ರಾಜಧಾನಿಯಲ್ಲಿ ಕೊರೊನಾಗೆ ಚಿಕಿತ್ಸೆ ನೀಡುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯ ಅವ್ಯವಸ್ಥೆ ನೋಡಿದ್ರೆ ನೀವೊಮ್ಮೆ ಬೆಚ್ಚಿ ಬೀಳ್ತೀರಾ.ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಎಕ್ಸಕ್ಲೂಸಿವ್ ವೀಡಿಯೊ ಪ್ರಜಾಟಿವಿಗೆ ಲಭ್ಯವಾಗಿದೆ.
ಕೊರೊನಾ ರೋಗಕ್ಕೆ ತುತ್ತಾಗಿರುವ ರೋಗಿಗಳಿಗೆ ಆಸ್ಪತ್ರೆಯಲ್ಲೇ ನರಕ ದರ್ಶನ ವಾಗುತ್ತಿದೆ.ಸರ್ಕಾರ ಬಿಲ್ಡಪ್ ಕೊಡುವ ರೀತಿಯ ಯೋವುದೇ ಸೌಲಭ್ಯ ಆಸ್ಪತ್ರೆಯಲಿಲ್ಲ.ಕಳಪೆ ಗುಣಮಟ್ಟದ ಊಟ ಕೊಡ್ತಿದ್ದಾರೆ ಎಂದು ರೋಗಿಗಳ ಆರೋಪ ಮಾಡುತ್ತಿದ್ದಾರೆ.ಉಪ್ಪು ಕಾರ ಇಲ್ಲದ ಊಟ ಬರುತ್ತೆ ಹೇಗೆ ತಿನ್ನೋದು? ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.ಇನ್ನೂ ಕುಡಿಯುವ ನೀರಿಗೂ ಆಸ್ಪತ್ರೆಯಲ್ಲಿ ರೋಗಿಗಳು ಪರದಾಡುವ ಸ್ಥಿತಿಯಿದೆ.
ಶೌಚಲಯಕ್ಕೂ ಸರಿಯಾಗಿ ನೀರು ಒದಗಿಸುವುದಿಲ್ಲಾ ಎಂದು ಆರೋಪ ಮಾಡಿದ್ದಾರೆ.ಬೆಂಗಳೂರಿನ ಪ್ರಮುಖ ಆಸ್ಪತ್ರೆ ಸ್ಥಿತಿ ಹೀಗಾದ್ರೆ ರಾಜ್ಯಾದ್ಯಂತ ಆಸ್ಪತ್ರೆಗಳ ಸ್ಥಿತಿ ಹೇಗಿದೆ? ಎನ್ನುವುದನ್ನ ಊಹಿಸಿಕೊಳ್ಳೋದು ಕಷ್ಟವಾಗಿದೆ.