Home District ಜಿಲ್ಲಾ ನ್ಯಾಯಾಲಯದ ಅಂಗಳಕ್ಕೆ ಕೊರೊನಾ; ಕೋರ್ಟ್ ಸಂಪೂರ್ಣ ಸೀಲ್ ​ಡೌನ್

ಜಿಲ್ಲಾ ನ್ಯಾಯಾಲಯದ ಅಂಗಳಕ್ಕೆ ಕೊರೊನಾ; ಕೋರ್ಟ್ ಸಂಪೂರ್ಣ ಸೀಲ್ ​ಡೌನ್

181
0
SHARE

ತುಮಕೂರು. ರಾಜ್ಯದಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ದಿನೇ ದಿನೇ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ. ತುಮಕೂರು ಜಿಲ್ಲೆ ಕೂಡ ದಿನಕ್ಕೊಂದು ಕೊರೊನಾ ಪಾಸಿಟಿವ್ ಪ್ರಕರಣಕ್ಕೆ ಸಾಕ್ಷಿಯಾಗುತ್ತಿದೆ. ಇದೀಗ ಕೊರೊನಾ ಸೋಂಕು ತುಮಕೂರು ಜಿಲ್ಲಾ ನ್ಯಾಯಾಲಯದ ಅಂಗಳಕ್ಕೂ ಪ್ರವೇಶಿಸಿದ್ದು, ಇಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರಲ್ಲಿ ಸೋಂಕು ದೃಢವಾಗಿದೆ.

ಹಾಗಾಗಿ ಜಿಲ್ಲಾ ನ್ಯಾಯಾಲಯವನ್ನು ಸಂಪೂರ್ಣ ಸೀಲ್ ​ಡೌನ್ ಮಾಡಲಾಗಿದೆ. ನ್ಯಾಯಾಲಯದ ಎಲ್ಲಾ ಕಾರ್ಯ ಕಲಾಪಗಳನ್ನು ರದ್ದುಗೊಳಿಸಲಾಗಿದೆ.

ಈವರೆಗೂ ಸುರಕ್ಷತೆಯಿಂದ ಸೀಮಿತ ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗುತ್ತಿತ್ತು. ಸೀಲ್​ ಡೌನ್ ಆದ ಹಿನ್ನೆಲೆ ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನ್ಯಾಯಾಲಯದ ಸಿಬ್ಬಂದಿಗಳಿಗೆ ಆತಂಕ ಶುರುವಾಗಿದ್ದು, ಜಿಲ್ಲಾ ಆಡಳಿತ ಸೋಂಕಿತ ಮಹಿಳೆಯ ಪ್ರಥಮ ಮತ್ತು ದ್ವಿತೀಯ ಸಂಪರ್ಕ ದವರ ಪತ್ತೆಗೆ ಮುಂದಾಗಿದೆ.

LEAVE A REPLY

Please enter your comment!
Please enter your name here