ಹಳ್ಳಿಗಳನ್ನೂ ಬಿಡದ ಮಹಾಮಾರಿ ಕೊರೋನಾ!

ಹಳ್ಳಿಗಳನ್ನೂ ಬಿಡದ ಮಹಾಮಾರಿ ಕೊರೋನಾ!

362
0

ವರದಿ: ಗುರುರಾಜ್

ಈ ಗ್ರಾಮದಲ್ಲಿ 15 ಸಾವಿರ ಜನಸಂಖ್ಯೆ ಇದೆ, ಕೊರೋನಾ ಎರಡನೇ ಅಲೆಯಲ್ಲಿ ಈ ಗ್ರಾಮದಲ್ಲಿ ಕಳೆದ ಒಂದು ತಿಂಗಳಲ್ಲಿ‌ ಸತ್ತಿದ್ದು ಬರೋಬ್ಬರಿ 70 ಜನ. ಕೊರೋನಾ‌ ಎರಡನೇ ಅಲೆ ಈಗ ಹಳ್ಳಿಗಳಲ್ಲಿ‌ ವ್ಯಾಪಕವಾಗಿ ಹರಡುತ್ತಿದೆ.

ಕೊರೋನಾ ಎರಡನೇ ಅಲೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ.‌ ರಾಜ್ಯಕ್ಕೂ ಕಾಲಿಟ್ಟ ಈ ಅಲೆ ಈಗ ರಾಜ್ಯವನ್ನೆ ಲಾಕ್ ಮಾಡಿ ಬಿಟ್ಟಿದೆ. ಇಲ್ಲಿಯವರೆಗೆ ಕೇವಲ ನಗರದ ಪ್ರದೇಶದಲ್ಲಿ ಹೆಚ್ಚಾಗಿದ್ದ ಕೊರೋನಾ ಎರಡನೇ ಅಲೆ ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ಹೌದು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಗ್ರಾಮ ಒಂದರಲ್ಲಿ ಈ ಒಂದು ತಿಂಗಳಲ್ಲಿ ಕೊರೋನಾ ಎರಡನೇ ಅಲೆಗೆ ಬಲಿಯಾದವರು 70 ಕ್ಕಿಂತ ಅಧಿಕ ಜನ. ಇದರಲ್ಲಿ‌ ಸುಮಾರು‌ 40 ಜನ ಪಾಸಿಟಿವ್ ಪ್ರಕರಣ ಪತ್ತೆಯಾದರೆ. ಇನ್ನೂಳಿದವರು ಆಸ್ಪತ್ರೆಯತ್ತ‌ ಮುಖ ಮಾಡದೇ ಮನೆಯಲ್ಲಿಯೇ ಚಿಕಿತ್ಸೆ ಪಡೆದು ಸಾವನಪ್ಪಿದ್ದಾರೆ. ತೋರವಿ ಗ್ರಾಮ‌ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 20 ಸಾವಿರ ಜನಸಂಖ್ಯೆ ಇದ್ದು, ಇದರಲ್ಲಿ ತೊರವಿ ಗ್ರಾಮದಲ್ಲೇ 15 ಸಾವಿರ ಜನರಿದ್ದಾರೆ. ತಿಕೋಟಾ ತಾಲೂಕಿನ‌ ವ್ಯಾಪ್ತಿಗೆ ತೊರವಿ ಗ್ರಾಮ ಬಂದರೂ ಸಹಿತ ಇದು ವಿಜಯಪುರ ನಗರದಿಂದ ಕೇವಲ ಐದು ಕಿಲೋ ಮಿಟರ್ ದೂರದಲ್ಲಿದೆ. ಇನ್ನೂ ತೊರವಿ ಗ್ರಾಮದ ಬಹುತೇಕ ಜನ ಪ್ರತಿಯೊಂದ ವಸ್ತುಗಳ ಖರೀದಿಗೆ ವಿಜಯಪುರ ನಗರವನ್ನೇ ಅವಲಂಬಿಸಿದ್ದು ಹೆಚ್ಚಾಗಿ ನಗರಕ್ಕೆ ಹೋಗಿ ಬಂದವರಿಂದ ಪಾಸಿಟಿವ್ ಆಗುತ್ತಿದೆ ಎಂಬುದು ಗ್ರಾಮಸ್ಥರ ಮಾತು. ಇನ್ನೂ ಗ್ರಾಮದಲ್ಲಿ ಪಾಸಿಟಿವ್ ಇದ್ದವರೂ ಸಹಿತ ಅವರು ಸರಿಯಾದ ಚಿಕಿತ್ಸೆ ಪಡೆಯದೇ ಮನೆಯಲ್ಲಿದ್ದು ಸ್ಥಳಿಯ ಮಟ್ಟದ ವೈದ್ಯರು ಕೊಡುವ ಔಷಧಿ ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಕೊರೋನಾ ಕಡಿಮೆಯಾಗುತ್ತಿಲ್ಲ. ಅಷ್ಟೇ ಅಲ್ಲದೇ ಈಗ ಗ್ರಾಮೀಣ ಭಾಗದಲ್ಲೂ ಸಹಿತ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ, ಈಗಾಗಲೇ 100 ಕ್ಕೂ ಅಧಿಕ ಜನ ಹೋಮ್ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ಮಾಜಿ ಸಚಿವ ಎಂಬ ಪಾಟೀಲ ಅವರ ಮಾತು.

ಇನ್ನೂ ತೊರವಿ ಗ್ರಾಮದಲ್ಲಿ ಸಾವಿನ‌ಸಂಖ್ಯೆ ಹೆಚ್ಚಾಗುತ್ತಲೇ ಎಚ್ಚೆತ್ತುಕೊಂಡ ಗ್ರಾಮ‌ ಪಂಚಾಯತಿ ಸಿಬ್ಬಂದಿ ಇಡೀ ಗ್ರಾಮಕ್ಕೆ ಫಾಗಿಂಗ್ (ಸೆನಿಟೈಸ್) ಮಾಡಲು ಮುಂದಾಗಿದ್ದಾರೆ. ಈಗಾಗಲೇ ಇಡೀ ಗ್ರಾಮದಲ್ಲಿ ಸ್ಮಶಾನ‌ಮೌನ್ ಆವರಿಸಿದ್ದು ಪಂಚಾಯತಿ‌ ಸಿಬ್ಬಂದಿ ತಮ್ಮ ಕೆಲಸವನ್ನು ಮುಂದು ವರೆಸಿದ್ದಾರೆ. ಇನ್ನೂ ಅನಾರೋಗ್ಯಕ್ಕೆ ಈಡಾದವರು ಸಹಿತ ಯಾರು ಮುಂದೆ ಬಂದು ಹೇಳುತ್ತಿಲ್ಲ, ಅದುವೇ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ, ಈ ಕುರಿತು ನಾಳೆಯಿಂದ ಮನೆ ಮನೆಗೆ ಆಶಾ ಕಾರ್ಯಕರ್ತೆಯರನ್ನು ಕಳುಹಿಸಿ ಸರ್ವೆ ಮಾಡುವ ಕಾರ್ಯಕ್ಕೆ ಕೂಡಾ ಪಂಚಾಯತಿ ಸಿಬ್ಬಂದಿ ಮುಂದಾಗಿದ್ದಾರೆ. ಇನ್ನೂ ಗ್ರಾಮದಲ್ಲಿ ಒಂದೇ ಮನೆಯಲ್ಲಿ ಬಹಳಷ್ಟು ಜನ‌ ವಾಸಿಸುವ ಕಾರಣ ಕೊರೋನಾ ಹೆಚ್ಚಳಕ್ಕೆ ಇದು ಒಂದು ಕಾರಣ, ಈ ಪ್ರಯುಕ್ತ ಪ್ರತ್ಯೇಕವಾದ ಕೋವಿಡ್ ಕೇರ್ ಸೆಂಟರ್ ಒಂದನ್ನು ಗ್ರಾಮದಲ್ಲಿ ಪ್ರಾರಂಭಿಸಬೇಕು‌ ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ…

ಕೇವಲ ನಗರ ಪಟ್ಟಣಗಳಿಗೆ ಮಾತ್ರ ಸೀಮಿತವಾಗಿದ್ದ ಕೊರೋನಾ ‌ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದ್ದು ಗ್ರಾಮೀಣ ಭಾಗದ ಜನತೆಯಲ್ಲಿ ಮತ್ತಷ್ಟು ಆತಂಕಕ್ಕೆ ಎಡೆ ಮಾಡಿ‌ ಕೊಟ್ಟಿದ್ದೆ. ಇನ್ನಷ್ಟು ಸಾವು ನೋವುಗಳು ಸಂಭವಿಸುವ ಮುನ್ನ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಕುರಿತು ಕಟ್ಟು ನಿಟ್ಟಿನ‌ ಕ್ರಮ‌ ಕೈಗೊಳ್ಳುವದರ ಜೊತೆಗೆ ಗ್ರಾಮೀಣ ಭಾಗದಲ್ಲೂ ಸರ್ವೆ ಕಾರ್ಯ ಮಾಡುವದರ ಜೊತೆಗೆ ಕೊರಂಟೈನ್ ‌ಸೆಂಟರ್ ಗಳನ್ನು ತೆರೆದು ಕೊರೋನಾ ತಡೆಗಟ್ಟಬೇಕು ಎಂಬುದೇ ನಮ್ಮ ಆಶಯ.

VIAಹಳ್ಳಿಗಳನ್ನೂ ಬಿಡದ ಮಹಾಮಾರಿ ಕೊರೋನಾ!
SOURCEಹಳ್ಳಿಗಳನ್ನೂ ಬಿಡದ ಮಹಾಮಾರಿ ಕೊರೋನಾ!
Previous articleಇಂದು ಚಾಮರಾಜನಗರ ಜಿಲ್ಲೆಯಲ್ಲಿ 343 ಕೋರೊನಾ ದೃಡ; 08ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ದುರ್ಮರಣ
Next articleಕೊರೋನಾ ನಡುವೆ ಬಿರಿಯಾನಿ ಹಂಚಿ ಮಾಜಿ ಪ್ರಧಾನಿಯ ಹುಟ್ಟುಹಬ್ಬದ ಆಚರಣೆ!

LEAVE A REPLY

Please enter your comment!
Please enter your name here