Home District ಕೊರೋನಾ ಅಟ್ಟಹಾಸ; ಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಗಳ ಪರದಾಟ

ಕೊರೋನಾ ಅಟ್ಟಹಾಸ; ಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಗಳ ಪರದಾಟ

379
0

ಭಾರತದಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದೆ.ದಿನನಿತ್ಯದ ಕೊರೊನಾ ಕೇಸ್ ನಲ್ಲಿ ಜಾಗತಿಕ ದಾಖಲೆ ಬರೆದಿದೆ.ದೇಶದಲ್ಲಿ ಕೋವಿಡ್ 19 ಸುನಾಮಿಗೆ ಸಿಲುಕಿದ ಜನರು ಪ್ರಾಣಭಿಕ್ಷೆ ಕೇಳ್ತಿದ್ದಾರೆ.ಮಹಾಮಾರಿ ನಿಯಂತ್ರಣ ಮಾಡಲಾಗದೇ ಪರಿಸ್ಥಿತಿ ಕೈ ಮೀರಿದೆ.ಅಲ್ಲದೇ ಶನಿವಾರ ಅತಿಹೆಚ್ಚು ಪ್ರಕರಣ ದಾಖಲಾಗಿದ್ದು, ದೇಶದ ಆರೋಗ್ಯ ಸ್ಥಿತಿ ದಿನೇ ದಿನೇ ಕ್ಷಿಣಿಸುತ್ತಿದೆ ಎನ್ನುವುದೇ ಆತಂಕವಾಗಿದೆ.

ಬೆಡ್‌ ಪೂರ್ತಿಯಾಗಿವೆ, ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಸಿಕ್ತಿಲ್ಲ. ದೇಶದ ಆರೋಗ್ಯ ಪರಿಸ್ಥಿತಿ ಕುಸಿದು ಹೋಗ್ತಿದೆ. ಜನರು ಬೀದಿ ಬೀದಿಯಲ್ಲಿ ಉಸಿರಾಡಲೂ ಸಾಧ್ಯವಾಗದೇ ಪ್ರಾಣ ಬಿಡ್ತಿದ್ದಾರೆ.ದಿನನಿತ್ಯದ ಕೊರೊನಾ ಕೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಅಮೆರಿಕದ ಸ್ಥಾನವನ್ನು ಕಸಿದುಕೊಂಡು ಭಾರತ ನಂಬರ್ ಒನ್ ಸ್ಥಾನದಲ್ಲಿರುವುದು ಆಂತಕ ಹೆಚ್ಚಿಸಿದೆ.

ದೇಶವನ್ನು ಟಾರ್ಗೇಟ್ ಮಾಡ್ಕೊಂಡಿದೆ ಎಂಬಂತೆ ಕೊರೊನಾ ತನ್ನ .ಸಂಖ್ಯೆ ಹೆಚ್ಚಿಸಿಕೊಳ್ತಿದೆ. ದಿನೇ ದಿನೇ ಹೊಸರೂಪ ತಾಳುತ್ತಿರುವ ಮಹಾಮಾರಿ ಸರ್ಕಾರಗಳ ನಿದ್ದೆಗೆಡಿಸಿದೆ. ಡೆಡ್ಲಿ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುತ್ತಲೇ ಕ್ರೂರಿ ಮತ್ತೊಂದು ರೂಪದಲ್ಲಿ ಮನುಷ್ಯನ ದೇಹದೊಳಗೆ ಹೊಕ್ಕಿ ದಾಳಿ ಮಾಡ್ತಿದೆ. ಅಮೆರಿಕಾ, ಯುರೋಪ್ ಗಿಂತಲೂ ವಿಭಿನ್ನ ಅವತಾರದಲ್ಲಿ ತೀವ್ರತೆ ಪಡೆದಿದೆ. ಇದೇ ರೀತಿ ಕಂಟಿನ್ಯೂ ಆದ್ರೆ ಕೊರೊನಾ ಕಟ್ಟಿಹಾಕೋದು ಕಷ್ಟ ಕಷ್ಟ ಎಂಬಂತಾಗಿದೆ.ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 3.46 ಲಕ್ಷ ಜನರಿಗೆ ವೈರಸ್ ಆಟ್ಯಾಕ್ ಆಗಿದೆ.2,624 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ..ಕಳೆದ 3 ದಿನಗಳಿಗೆ ಹೋಲಿಸಿದ್ರೆ 10 ಲಕ್ಷ ಕೇಸ್ ಅಧಿಕವಾಗಿದೆ. ಅಮೆರಿಕಾದಲ್ಲಿ ಒಂದೇ ದಿನ 1,93,548 ಕೇಸ್ ದಾಖಲಾಗಿದೆ. ಬ್ರೇಜಿಲ್‌ನಲ್ಲಿ 69,105 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ರಾಜಧಾನಿ ದೆಹಲಿಯ ಕೆಲ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ತೀವ್ರವಾಗಿ ಕಾಡ್ತಿದೆ. ಶುಕ್ರವಾರ ತುರ್ತು ಪೂರೈಕೆಯ ಆಕ್ಸಿಜನ್ ಒದಗಿಸಲಾಗಿತ್ತು ಆದರೂ ಆಕ್ಸಿಜನ್ ಕೊರತೆಯಿಂದಾಗಿ ದೆಹಲಿಯ ಜೈಪುರ ಗೋಲ್ಡನ್ ಆಸ್ಪತ್ರೆಯಲ್ಲಿ ಶನಿವಾರ 20 ರೋಗಿಗಳು ಸಾವನ್ನಪ್ಪಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ 200 ಸೋಂಕಿತರಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಶೇ.80 ರಷ್ಟು ಮಂದಿಗೆ ಆಕ್ಸಿಜನ್ ಬೇಕಾಗಿದೆ. 35 ಮಂದಿ ಸೋಂಕಿತರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ಮಾಹಿತಿ ಇದೆ.

ಒಟ್ಟಿನಲ್ಲಿ, ದೆಹಲಿಯಲ್ಲಿ ಕೊರೋನಾ ವೈರಸ್ ತಾಂಡವವಾಡುತ್ತಿರುವಾಗ ರೋಗಿಗಳು ಮತ್ತು ಅವರ ಕುಟುಂಬದವರು ಆಸ್ಪತ್ರೆಯಲ್ಲಿ ಬೆಡ್ ಸಿಗಬಹುದೆಂದು ಹೊರಗೆ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

Previous articleಡಾ.ರಾಜ್ ಸಾಂಗ್ ಗೆ ಕೊರೋನಾ ವಾರಿಯರ್ಸ್ ಸೂಪರ್ ಸ್ಟೆಪ್ಸ್!; ವಿಡಿಯೋ ವೈರಲ್
Next article‘ರಾಜಾಹುಲಿ’ ಸಂಪುಟದಿಂದ ಸಚಿವ ಸುಧಾಕರ್ ಔಟ್!?

LEAVE A REPLY

Please enter your comment!
Please enter your name here