Home Health ಕೊರೊನದ ಕರಾಳ ಮುಖ ಬಯಲು!

ಕೊರೊನದ ಕರಾಳ ಮುಖ ಬಯಲು!

ಕೊರೊನದ ಕರಾಳ ಮುಖ ಬಯಲು!

727
0

ಚಾಮರಾಜನಗರ ನಗರದ ಜಿಲ್ಲಾಸ್ಪತ್ರೆ ಆಕ್ಸಿಜನ್ ದುರಂತ ಮಾಸುವ ಮುನ್ನವೇ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮತ್ತೊಂದು ಆಕ್ಸಿಜನ್ ದುರಂತ ಸಂಭವಿಸಿದೆ. ಅಷ್ಟಕ್ಕೂ ಏಳು ಗಂಟೆಗಳಿಂದ ಆಕ್ಸಿಜನ್ ಸ್ಥಗಿತಗೊಂಡಿದ್ದರಿಂದ ನಾಲ್ವರು ರೋಗಿಗಳು ಉಸಿರು ನಿಲ್ಲಿಸಿದ್ದಾರೆ.. ಎಲ್ಲಿ ಅಂತಿರಾ ಈ ವರದಿ ನೋಡಿ.

ಹೆಣಗಳನ್ನ ಗೂಡ್ಸ್ ವಾಹನದಲ್ಲಿ ಹಾಕ್ತಾಯಿರೋ ಸಿಬ್ಬಂದಿಗಳು. ಮತ್ತೊಂದೆಡೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ವಿಲವಿಲ ಒದ್ದಾಡ್ತಿರೋ ರೋಗಿಗಳು. ಅಷ್ಟಕ್ಕೂ ಇಂತಹದೊಂದು ಘೋರ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ತೊಗರಿಯಣ ಕಣಜ.. ಹೌದು.. ಆಕ್ಸಿಜನ್ ಕೊರತೆಯಿಂದ ಇಬ್ಬರು ಕೊವಿಡ್ ಮತ್ತು ಇಬ್ಬರು ನಾನ್ ಕೋವಿಡ್ ಸೇರಿದಂತೆ ನಾಲ್ವರು ರೋಗಿಗಳು ದುರ್ಮರಣಕ್ಕಿಡಾದಂತಹ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದೆ. ಕಳೆದ ರಾತ್ರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸ್ಥಗೀತಗೊಂಡಿದ್ದರಿಂದ ಏಕಾಏಕಿ ಆಕ್ಸಿಜನ್ ಸ್ಥಗೀತಗೊಂಡಿದೆ. ಈ ವೇಳೆ ನಾಲ್ವರು ರೋಗಿಗಳು ಸಾವನ್ನಪ್ಪಿದ್ದಾರೆ. ಆಕ್ಸಿಜನ್ ಖಾಲಿಯಾಗ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿಗಳು ಯಾರೊಬ್ಬರು ಕೆರ್ ಮಾಡದೇ ಇರೋದು ದುರಂತಕ್ಕೆ ಮತ್ತೊಂದು ಕಾರಣವಾಗಿದೆ.. ಏಳು ಗಂಟೆಗಳಿಂದ ಆಕ್ಸಿಜನ್ ಸರಬರಾಜು ಸ್ಥಗೀತಗೊಳ್ಳುತ್ತಿದ್ದಂತೆ ಕ್ಷಣ ಕ್ಷಣಕ್ಕೂ ರೋಗಿಗಳ ದೇಹಸ್ಥಿತಿ ಕ್ಷೀಣಿಸುತ್ತಾ ಹೋಗಿದೆ. ಡಿಸ್ಚಾರ್ಜ್ ಮಾಡಿಕೊಂಡು ಬೇರೆಕಡೆ ಹೋಗೊಣ ಎಂದ್ರೆ ಎಲ್ಲಿಯೂ ಬೆಡ್ ಖಾಲಿಯಿಲ್ಲದ ಕಾರಣ ಸಾವನ್ನಪ್ಪಿದ್ದಾರೆ.. ಇನ್ನೂ ದುರಂತ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ನಂತರ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ತಕ್ಷಣ ಜಿಲ್ಲಾಡಳಿತದೊಂದಿಗೆ ಮಾತನಾಡಿ, ತಕ್ಷಣವೇ ಆಸ್ಪತ್ರೆಗೆ ಆಕ್ಸಿಜನ್ ಪೂರೈಯಿಸಿದ್ದಾರೆ.

ಇನ್ನೂ ಒಂದು ಕಡೆ ಅಫಜಲಪುರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಸಾವನ್ನಪ್ಪಿದೆ ಬಗ್ಗೆ ಖುದ್ದು ಅಲ್ಲಿಯ ವೈದ್ಯರು ಮತ್ತು ಸಿಬ್ಬಂದಿಗಳು ಒಪ್ಪಿಕೊಂಡರು ಸಹ, ಇತ್ತ ಕಲಬುರಗಿ ಜಿಲ್ಲಾಧಿಕಾರಿ ವಿ ವಿ ಜ್ಯೋತ್ಸ್ನಾ ಮಾತ್ರ ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ವಿಚಾರವನ್ನ ಅಲ್ಲಗೆಳೆದಿದ್ದಾರೆ. ನಾಲ್ವರು ರೋಗಿಗಳು ಅನ್ಯ ಕಾರಣಗಳಿಂದ ಸಾವನ್ನಪ್ಪಿದದ್ದು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿಲ್ಲ ಅಂತಾ ಹೇಳಿ ದುರಂತವನ್ನ ಮುಚ್ಚುವ ಪ್ರಯತ್ನ ಮಾಡಿದ್ದಾರೆ.. ಅಲ್ಲದೆ ಆಸ್ಪತ್ರೆ ಸಿಬ್ಬಂದಿಗಳ ತಪ್ಪು ಮಾಹಿತಿಯಿಂದ ಮಾಧ್ಯಮಗಳಲ್ಲಿ ತಪ್ಪು ವರದಿ ಪ್ರಸಾರವಾಗಿದೆ ಎಂದಿದ್ದಾರೆ. ಆದರೆ ದುರಂತ ನಡೆದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ನಂತರ ಎಚ್ಚೆತ್ತುಕೊಂಡು ಏಕಾಏಕಿ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಯಾಕೆ ಮಾಡಲಾಗಿತ್ತು ಎಂಬ ಪ್ರಶ್ನೆಗೆ ಡಿಸಿ ಉತ್ತರ ನೀಡಲು ತಡಬಡಾಯಿಸಿದ್ದಾರೆ. ಇನ್ನೂ ಘಟನೆ ನಂತರ ಅಫಜಲಪುರ ಶಾಸಕ ಎಮ್ ವೈ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅದೆನೇ‌ ಇರಲಿ ಚಾಮರಾಜನಗರ ನಗರ ಆಸ್ಪತ್ರೆ ದುರಂತ ಮಾಸುವ ಮುನ್ನವೇ ತೊಗರಿಣ ಕಣಜ ಕಲಬುರಗಿಯಲ್ಲಿ ಮತ್ತೊಂದು ಘೋರ ಆಕ್ಸಿಜನ್ ದುರಂತ ಸಂಭವಿಸಿರೋದು ರಾಜ್ಯದ ಜನ ಬೆಚ್ಚಿಬಿಳುವಂತೆ ಮಾಡಿದೆ. ಇನ್ನಾದರು ಸರ್ಕಾರ ಆಕ್ಸಿಜನ್ ಕೊರತೆಯಾಗದಂತೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.. ಇಲ್ಲಾಂದ್ರೆ ಹಾದಿಬಿದಿಗಳಲ್ಲಿ ಹೆಣಗಳ ರಾಶಿ ಬಿದ್ದರು ಅಚ್ಚರಿ ಪಡಬೇಕಾಗಿಲ್ಲ.

VIAಕೊರೊನದ ಕರಾಳ ಮುಖ ಬಯಲು!
SOURCEಕೊರೊನದ ಕರಾಳ ಮುಖ ಬಯಲು!
Previous articleಜನರ ಅಳಲನ್ನು ಆಲಿಸಿದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
Next articleಈ ಚುನಾವಣೆಯಲ್ಲಿ ಸೋತರೂ ಕೂಡಾ ನಮಗೆ ಬಹಳಾ ಲಾಭವಾಗಿದೆ; ಜಾರಕಿಹೊಳಿ ಸ್ಪಷ್ಟನೆ

LEAVE A REPLY

Please enter your comment!
Please enter your name here