ಕೊರೋನಾ ಲಾಕ್ ಡೌನ್ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದೇನು?

433
0

ವರದಿ: ಚಂದ್ರು ಶ್ರೀರಾಮುಡು

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಎರಡು ವಿಧಾನಸಭೆ ಚುನಾವಣೆ ಹಾಗೂ ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ. ಬೆಳಗಾವಿ ಲೋಕಸಭೆಯಲ್ಲಿ ಬಿಜೆಪಿ ನಾಲ್ಕು ಲಕ್ಷ ಮತಗಳಿಂದ ಗೆಲುವು ಸಾಧಿಸಲಿದ್ದೇವೆ. ದಿನೇ ದಿನೇ ಬಿಜೆಪಿ ಪರ ವಾತಾವರಣ ಅನುಕೂಲಕರವಾಗುತ್ತಿದೆ. ನಾಳೆ ಸಂಜೆ ಚುನಾವಣೆ ಅಂತ್ಯಗೊಳ್ಳಲಿದೆ. ಮತ್ತೊಮ್ಮೆ ಮತದಾರರಲ್ಲಿ ಮನವಿಯನ್ನು ಮಾಡುತ್ತಿದ್ದೇನೆ.

ಈ ಬಾರಿ ಚುನಾವಣೆಗೆ ನಿಂತಿರುವುದು ನಿಮ್ಮ ಕುಟುಂಬದವರೇ ಎಂದುಕೊಳ್ಳಿ. ಮಂಗಲ ಅಂಗಡಿಯವರಿಗೆ ಹೆಚ್ಚಿನ ಮತ ನೀಡಬೇಕು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಬೇಕು. ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಮಂಗಲ ಅಂಗಡಿಯವರಿಗೆ ನಿಲ್ಲಿಸಿದ್ದೇವೆ. ಚುನಾವಣಾ ಸಂದರ್ಭದಲ್ಲಿ ಪ್ರಚಾರ ಮಾಡಬೇಕು. ಈ ಕಾರ್ಯಗಳಲ್ಲಿ ಹೆಚ್ಚು ಕಾರ್ಯತಪ್ತನಾಗಿರುವ ನಾನು ಸತೀಶ್ ಜಾರಕಿಹೊಳಿ‌ ಹೇಳಿಕೆಗೆ ಟೀಕೆ ಮಾಡಲ್ಲ. ಮುಖ್ಯಮಂತ್ರಿ ಆಗಿ ಮತದಾರರ ಭೇಟಿ ಮಾಡಿ ಮತಯಾಚಣೆ ಮಾಡುತ್ತೇನೆ. ರಮೇಶ್ ಜಾರಕಿಹೊಳಿ‌ ಚುನಾವಣೆ ಪ್ರಚಾರಕ್ಕೆ ಬರ್ತಾರಾ. ನಾನು ಈ ಬಗ್ಗೆ ಇವತ್ತು ಮಾತನಾಡುತ್ತೇನೆ. ಇವತ್ತು ಸಾಧ್ಯವಾದ್ರೆ ರಮೇಶ್ ಜಾರಕಿಹೊಳಿ‌ ಅವರನ್ನು ಸಂಪರ್ಕ ಮಾಡುತ್ತೇನೆ.

ಶಿವಸೇನೆ ರಾಜ್ಯಸಭಾ ಸದಸ್ಯ ಸಂಜಯ ರಾವತ್ ಪ್ರಚಾರ ವಿಚಾರ, ಈ ಕುರಿತು ನನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ ಸಿಎಂ ಯಡಿಯೂರಪ್ಪ. ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ, ಕೊರೊನಾ ಬಗ್ಗೆ 18 ರಂದು ಸಂಜೆ 4 ಗಂಟೆಗೆ ವಿರೋಧ ಪಕ್ಷದ ನಾಯಕರ ಸಭೆ ಕರೆದಿರುವೆ. ಅವರೊಂದಿಗೆ ಚರ್ಚೆ ಮಾಡ್ತಿನಿ. ಯಾವ ಯಾವ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿದೆ ಅದನ್ನ ಆಧರಿಸಿ ನಿರ್ಧಾರ ಮಾಡ್ತಿವಿ, ಸಾಧ್ಯವಾದ್ರೆ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆ ವರೆಗೂ ಲಾಕಡೌನ್ ಮಾಡುವುದಾದರೇ ಮಾಡ್ತಿನಿ ಎಂದ ಸಿಎಂ ಯಡಿಯೂರಪ್ಪ.

Previous articleಕಾಲುಜಾರಿ ಕೃಷಿಹೊಂಡದಲ್ಲಿ ನೀರುಪಾಲಾದ ಅಜ್ಜಿ ಮೊಮ್ಮಗಳು!
Next articleಕ್ಷುಲ್ಲಕ ಕಾರಣಕ್ಕೆ ಎರಡು ಊರುಗಳ ಮಧ್ಯೆ ಮಾರಾಮಾರಿ; ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

LEAVE A REPLY

Please enter your comment!
Please enter your name here