Home District ಕೊರೊನಾ ಹಿನ್ನಲೆ ವೀಕೆಂಡ್ ಕರ್ಪ್ಯೂ; ಜನರು ರಸ್ತೆಗೆ ಇಳಿದರೆ ಬೀಳುತ್ತೆ ಪೊಲೀಸ್ ಲಾಠಿ ರುಚಿ!

ಕೊರೊನಾ ಹಿನ್ನಲೆ ವೀಕೆಂಡ್ ಕರ್ಪ್ಯೂ; ಜನರು ರಸ್ತೆಗೆ ಇಳಿದರೆ ಬೀಳುತ್ತೆ ಪೊಲೀಸ್ ಲಾಠಿ ರುಚಿ!

377
0

ಕೊರೊನಾ ಎರಡನೇ ಅಲೆ ಆರ್ಭಟ ಮುಂದುವರೆದಿದೆ. ಕೊರೊನಾ ಒಡೆತಕ್ಕೆ ತರಗೆಲೆಗಳಂತೆ ಜನರು ಸಾವಿನತ್ತ ಮುಖ ಮಾಡುತ್ತಿದ್ದಾರೆ. ಶವಗಾರಗಳ ಮುಂದೆ ಆಂಬ್ಯುಲೆನ್ಸ್ ಗಳು ಕ್ಯೂ ನಿಂತಿವೆ. ಇತ್ತ ಸರ್ಕಾರ ವೀಕೆಂಡ್ ಗೆ ಕರ್ಪ್ಯೂ ಜಾರಿ ಮಾಡಿದೆ . ಇಡೀ ಬೆಂಗಳೂರು ಸ್ತಬ್ಧವಾಗಿದೆ. ಪೊಲೀಸರು ನಿಯಮ ಉಲ್ಲಂಘಿಸಿದವರಿಗೆ ಖಾಕಿ ಕಠಿಣ ಕ್ರಮಕೈಗೊಂಡಿದೆ.

ಕೊರೊನಾ ಟಫ್ ರೂಲ್ಸ್ ಜಾರಿ ಹಿನ್ನೆಲೆ ಇಡೀ ಬೆಂಗಳೂರು ನಗರದಾದ್ಯಂತ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಮುಚ್ಚಿಸಲಾಗಿದೆ. ಇಡೀ ನಗರದಾದ್ಯಂತ ಕರ್ಪ್ಯೂ ಜಾರಿಯಲ್ಲಿದೆ. ನಗರದ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ,ಗಾಂಧಿ ಬಜಾರ್ ಗಳಲ್ಲಿ ಎಲ್ಲಾ ಮಳಿಗೆಗಳಲ್ಲಿ ಬಂದ್ ಮಾಡಿಸಲಾಗಿದೆ.

ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಪ್ರತಿಷ್ಠಿತ ಏರಿಯಾ ಕಮರ್ಷಿಯಲ್ ಸ್ಟ್ರೀಟ್ ನ ಎಲ್ಲಾ ಮಳಿಗೆಗಳು ಬಂದ್ ಆಗಿವೆ. ಕೊರೋನಾ ಟಫ್ ರೂಲ್ಸ್ ಜಾರಿಯಾದ ಮೇಲೆ ಬೆಂಗಳೂರು ನಗರ ಪ್ರದೇಶ ಶೇಕಡಾ 90 ರಷ್ಟು ಲಾಕ್ ಡೌನ್ ಸ್ಥಿತಿ ಕಂಡು ಬರುತ್ತಿದೆ. ಶಿವಾಜಿನಗರದ ರಸೆಲ್ ಮಾರ್ಕೆಟ್ ನಲ್ಲಿ ಹೂ ಹಣ್ಣು ತರಕಾರಿ ಹಾಗು ಮೀನು ಮಾಂಸ ಮಾರಾಟ ಎಂದಿನಂತೆ ನೆಡೆಯುತ್ತಿದೆ. ಜಾಮೀಯಾ ಮಸೀದಿ ರಸ್ತೆ ಹಾಗು ಸಾವಿರಾರು ಕೋಟಿ ವ್ಯವಹಾರ ನೆಡೆಸುವ ಪ್ರತಿಷ್ಠಿತ ಕಮರ್ಷಿಯಲ್ ಸ್ಟ್ರೀಟ್ ಸಂಪೂರ್ಣ ಬಂದ್ ಆಗಿದೆ. ಕಮರ್ಷಿಯಲ್ ಸ್ಟ್ರೀಟ್ ಗೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಪರಿಶೀಲನೆ ನಡೆಸಿದ್ರು.

ಇನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಕಟ್ಟು ನಿಟ್ಟಾಗಿ ವಿಕೇಂಡ್ ಕರ್ಪ್ಯೂ ಜಾರಿಯಾಗುತ್ತಿದೆ. ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಅದೇಶ ಯಥಾವತ್ತ ಜಾರಿಯಾಗುತ್ತೆ. ಆದೇಶದಲ್ಲಿ ಸೂಚಿಸಿರುವ ಸೇವೆಗಳು ಮಾತ್ರ ಲಭ್ಯವಿರುತ್ತೆ. ಅನಗತ್ಯವಾಗಿ ಯಾವುದಕ್ಕೂ ಅವಕಾಶ ಇರುವುದಿಲ್ಲ. ಮದುವೆಗಳಿಗೆ ಅವಕಾಶ ಇದ್ದರು ಮದುವೆ ಕಾರ್ಡ್ ಹಿಡಿದುಕೊಂಡು ಊರೆಲ್ಲ ಸುತ್ತುವಂತಿಲ್ಲ. ಸುಳ್ಳು ಪಾಸ್, ಡೆಲವರಿ ಬಾಯ್ ವೇಷದಲ್ಲಿ ತಿರುಗಾಡಲು ಪ್ರಯತ್ನಿಸಿದ್ರೆ ಬಂಧನ ಖಚಿತ ಎಂದಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಆರೋಪ ಹಿನ್ನಲೆ ಪೂರ್ವ ವಲಯ ನೋಡೆಲ್ ಅಧಿಕಾರಿ ಅಲೋಕ್ ಕುಮಾರ್ ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇಂದಿರಾನಗರದ ಚಿನ್ಮಯಿ ಮಿಷನ್ ,ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆ ಚರ್ಚೆ ನಡೆಸಿದ್ರು. ಸರ್ಕಾರದ ನಿಯಮಗಳನ್ನ ಪಾಲನೆ ಮಾಡಲಾಗ್ತಿದ್ಯಾ, ಎಷ್ಟು ಬೆಡ್ ವ್ಯವಸ್ಥೆ ಇದೆ. ಆಕ್ಸಿಜನ್ ಸಪ್ಲೈ ಬಗ್ಗೆಯೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಮಣಿಪಾಲ್ ಆಸ್ಪತ್ರೆ ವೈದ್ಯರ ಬಳಿ ಮಾಹಿತಿ ಸಂಗ್ರಹಿಸಿದ್ರು. ಸೊಂಕಿತ ವ್ಯಕ್ತಿಗಳ ಕುಟುಂಬಸ್ಥರ ಬಳಿಯೂ ಪರಿಸ್ಥಿತಿ ಮತ್ತು ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ಪಡೆದಿದ್ರು.

ಒಟ್ಟಾರೆ ಸರ್ಕಾರದ ನಿಯಮಗಳನ್ನು ಚಾಚು ತಪ್ಪದೇ ಪಾಲಿಸಲು ಖಾಕಿ ಪಡೆ ಎಲ್ಲಾ ಸಿದ್ದತೆ ಕೈಗೊಂಡಿದೆ. ಅನಗತ್ಯವಾಗಿ ಓಡಾಡೋದು ಕಂಡು ಬಂದ್ರೆ,ಲಾಠಿ ಜೊತೆ ಜೈಲೂಟವನ್ನು ಪೊಲೀಸರು ಕೊಡ್ತಾರೆ.ಯಾವುದಕ್ಕೂ ಹೊರಗಡೆ ಬರೋ ಮುನ್ನ ಸಾವಿರ ಸಲ ಯೋಚಿಸಿ.

Previous articleಲಾಕ್ ಡೌನ್ ಸಮಯದಲ್ಲಿ ಏನಿರುತ್ತೆ? ಏನಿರುವುದಿಲ್ಲ?
Next articleಬೆಂಗಳೂರಿನಲ್ಲಿ ಚಿತಾಗಾರ ಸಮಸ್ಯೆ; ಪ್ರಜಾಟಿವಿ ವಿಶೇಷ ವರದಿ

LEAVE A REPLY

Please enter your comment!
Please enter your name here