Home Health ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಮಹಾಮಾರಿ; ಇನ್ನೂ ಗಂಭೀರವಾಗಿ ಸ್ವೀಕರಿಸದ ಜನತೆ!

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಮಹಾಮಾರಿ; ಇನ್ನೂ ಗಂಭೀರವಾಗಿ ಸ್ವೀಕರಿಸದ ಜನತೆ!

386
0

ಬೆಂಗಳೂರಲ್ಲಿ ಕಿಲರ್ ಕೊರೊನಾ ವೈರಸ್ ತನ್ನ ಕಬಂಧ ಬಾಹುಗಳನ್ನ ಎಲ್ಲೆಡೆ ಚಾಚಿದೆ. ಇದರಿಂದಾಗಿ ಕಳೆದ ಒಂದು ವಾರದಿಂದ 5ಸಾವಿರ, 8ಸಾವಿರ 10 ಸಾವಿರ, 12ಸಾವಿರ ಲೆಕ್ಕಾಚಾರದಲ್ಲಿ ಪಾಸಿಟಿವ್ ಕೇಸ್ ಗಳು ದಾಖಲಾಗ್ತಿದ್ದು, ಹೇಗಪ್ಪ ಕೊರೊನಾ ಕಂಟ್ರೋಲ್ ಗೆ ತರೋದು ಎಂದು ಸರ್ಕಾರ ತಲೆ ಕೆಡಸಿಕೊಂಡಿದೆ. ಈ ಹಿನ್ನೆಲೆ ಸರ್ಕಾರ ದಿನಕ್ಕೊಂದು ರೂಲ್ಸ್ ತರುತಿದ್ರೂ ನಗರದ ಜನತೆ ಮಾತ್ರ ಯಾವುದಕ್ಕೂ ತಲೆ ಕಡೆಸಿಕೊಳ್ಳುತ್ತಿಲ್ಲ.

ಹೌದು..ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯ, ಸೋಷಿಯಲ್ ಡಿಸ್ಟೆನ್ಸ್ ಕಡ್ಡಾಯ, ಇಲ್ಲದಿದ್ರೆ ಭಾರಿ ದಂಡ ತೆರಬೇಕಾಗುತ್ತೆ ಎಂಬೆಲ್ಲ ರೂಲ್ಸ್ ಗಳನ್ನ ಸರ್ಕಾರ ಹಾಗು ಪಾಲಿಕೆ ಹೊರಡಿಸಿದೆ. ಆದ್ರೆ ನಗರದ ಕೆಲವೆಡೆ ಜನ ಕನಿಷ್ಟ ಪಕ್ಷ ಮಾಸ್ಕ್ ಧರಿಸಬೇಕು ಅನ್ನೋದನ್ನು ಮರೆತು ಓಡಾಟ ನಡೆಸುತ್ತಿದ್ದಾರೆ. ದಿನಕ್ಕೆ 50ಕ್ಕೂ ಹೆಚ್ಚು ಸಾವುಗಳ ಬೆಂಗಳೂರಲ್ಲೆ ದಾಖಲಾಗುತ್ತಿವೆ. ಆದ್ರೆ ಜನರು ಮಾತ್ರ ಯಾವ ಕೊರೊನಾ ಬಿಡು ಮಾರಾಯ ಅನ್ನೋ ರೀತಿಯ ವರ್ತನೆ ತೋರುತ್ತಿದ್ದಾರೆ. ನಗರದ ಪ್ರಮುಖ ಹಾಟ್ ಸ್ಪಾಟ್ ಗಳಾದ ಕೆ.ಆರ್ ಮಾರ್ಕೆಟ್, ಮಲ್ಲೇಶ್ವರಂ ಮಾರ್ಕೆಟ್, ಯಶವಂತಪುರ ಮಾರ್ಕೆಟ್ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಮಾಸ್ಕ್ ಸೇರಿದಂತೆ ಸಾಮಾಜಿಕ ಅಂತರವೇ ಮಾಯವಾಗಿದೆ. ಇನ್ನು ದಂಡಂ ದಶಗುಣಂ ಗೆ ಸಾಕ್ಷಿಯಾಗಿರೋ ಬಿಬಿಎಂಪಿ ಮಾರ್ಷಲ್ ಗಳು ಕೂಡ ಮಾರ್ಕೆಟ್ ಸುತ್ತ ಮುತ್ತ ರೂಲ್ಸ್ ಬ್ರೇಕ್ ಮಾಡೋರಿಗೆ ಕಡಿವಾಣ ಹಾಕೋ ದೃಶ್ಯಗಳು ಕಾಣೆಯಾಗಿತ್ತು.

ಬೆಂಗಳೂರಲ್ಲಿ ಐಸಿಯೂ ಬೆಡ್ ಗಳ ಅಭಾವ-ಒಪ್ಪಿಕೊಂಡ ಪಾಲಿಕೆ..!:
ಸುವರ್ಣ ಸುರಕ್ಷಾ ವತಿಯಿಂದ ಬಿಬಿಎಂಪಿ 7 ಸಾವಿರ ಬೆಡ್ ಪಡೆದಿದೆ. 5,600 ಬೆಡ್ ಗಳು ಈಗಾಗಲೇ ಸಿಕ್ಕಿದೆ. ಆದರೆ ಸೋಂಕಿತರಿಗೆ ಮಾತ್ರ ಹಾಸಿಗೆಗಳು ಸಿಗದೆ ನರಳಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ದಿನೆದಿನೇ ಸೋಂಕು ಹೆಚ್ಚಾಗ್ತಿದ್ದು, ಐಸಿಯು ಬೆಡ್ ಗಳ ಅಭಾವವಿದೆ ಎಂದು ಪಾಲಿಕೆ ಕಮಿಷನರ್ ಗೌರವ್ ಗುಪ್ತಾ ಒಪ್ಪಿಕೊಂಡಿದ್ದಾರೆ. ಜೊತೆಗೆ ನಗರದ ಜನತೆಯ ಮೈ ಮರೆತ ಹೋಡಾಟ ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಯಾರೇ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ರೂ ಕಠಿಣ ಕ್ರಮಕ್ಕೆ ಪಾಲಿಕೆ ಮುಂದಾಗಿದೆ ಎಂದು ಆಯುಕ್ತ ಗೌರವ್ ಗುಪ್ತ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ… ದಿನೆ ದಿನೆ ಕೊರೊನಾ ಕೇಸ್ ಗಳು ದುಪ್ಪಟ್ಟಾಗುತ್ತಿದ್ರೂ ಜನರ ವರ್ತನೆ ಮಾತ್ರ ಬದಲಾಗುತ್ತಿಲ್ಲ. ಹೀಗಾಗಿ ಕೆಂದ್ರ ಸರ್ಕಾರ ಆದೇಶ ಜೊತೆಗೆ ಸರ್ಕಾರದ ಟಫ್ ರೂಲ್ಸ್ ಗಳು ಇನ್ನಷ್ಟು ಬದಲಾಗಲಿದೆ. ಹೀಗಾಗಿ ಜನ ಇನ್ನಾದ್ರು ಮೊಂಡುತನದ ವರ್ತನೆ ಬದಲಿಸಿ ಕೊರೊನಾ ಮಹಾಮಾರಿಯಿಂದ ದೂರವಾಗಬೇಕಿದೆ.

Previous articleಕೊರೋನಾ ಹೇಳಿಕೆ ಕುರಿತು ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಶ್ರೀರಾಮುಲು ನೇರವಾಗಿ ಕೇಳಿದ್ದೇನು?
Next articleಅಟ್ಟಹಾಸ ಮೆರೆದ ಜವರಾಯ; ಚಾಲಕನ ಅಜಾಗರುಕತೆಯಿಂದ ಐವರು ಮಸಣಕ್ಕೆ ರವಾನೆ!

LEAVE A REPLY

Please enter your comment!
Please enter your name here