ಬ್ರಿಟನ್ ರಾಣಿ ಎಲಿಜಬೆತ್ ರಿಗೆ ಕೊರೊನಾ ಸೋಂಕು..!

ಅಂತರಾಷ್ಟ್ರೀಯ

ಲಂಡನ್​: ಬ್ರಿಟನ್ ರಾಣಿ ಎಲಿಜಬೆತ್ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಬಕಿಂಗ್ಹ್ಯಾಮ್ ಅರಮನೆಯು ಮಾಹಿತಿಯನ್ನು ಬಹಿರಂಗಪ ಡಿಸಿದೆ.ಅವರು ಸೌಮ್ಯವಾದ ಶೀತದಂತಹ ಲಕ್ಷಣಗಳನ್ನು ಹೊಂದಿದ್ದು, ಆರೋಗ್ಯ ಸುಧಾರಿಸುವವರೆಗೆ ತಮ್ಮ ಕರ್ತವ್ಯವನ್ನು ಕಡಿಮೆ ಮಾಡಲಿದ್ದಾರೆ. ಎಲಿಜಬೆತ್ ಪ್ರಸ್ತುತ ವಿಂಡ್ಸರ್ ಕ್ಯಾಸಲ್‌ನಲ್ಲಿರುವ ತನ್ನ ಮನೆಯಲ್ಲಿ ತಂಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಯಾರಾದರೂ ಕೊರೊನಾ ದಿಂದ ಬಳಲುತ್ತಿದ್ದರೆ, ಅವರಿಗೆ 10 ದಿನಗಳ ಸ್ವಯಂ ಲಾಕ್​ಡೌನ್​ ಕಡ್ಡಾಯವಾಗಿದೆ. 6,7 ದಿನಗಳಲ್ಲಿ ಎರಡು ಬಾರಿ ನೆಗೆಟಿವ್ ಬಂದರೆ, ಕ್ವಾರಂಟೈನ್ ಅನ್ನು ತೆಗೆದು ಹಾಕಬಹುದು.ಎಲಿಜಬೆತ್ ಅವರ ಮಗ, ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಕೂಡ ಈ ತಿಂಗಳ ಆರಂಭದಲ್ಲಿ ಕೊರೊನಾದಿಂದ ನಿಧನರಾದರು.

Leave a Reply

Your email address will not be published.